ಗೂಗಲ್ ಸಹ-ಸಂಸ್ಥಾಪಕನ ಪತ್ನಿ ಜೊತೆ ಎಲಾನ್ ಮಸ್ಕ್ ಅನೈತಿಕ ಸಂಬಂಧ? ಇದಕ್ಕೆ ಮಸ್ಕ್ ಶಾಕಿಂಗ್ ಉತ್ತರ!
ಟೆಸ್ಲಾ ಸಿಇಒ ಎಲಾನ್ ಮಸ್ಕ್ ಮತ್ತು ವಿವಾದಗಳು ಬೆಂಬಿಡದೆ ಪ್ರಯಾಣಿಸುತ್ತಿವೆ. ಬಿಲಿಯನೇರ್ ಗೂಗಲ್ ಸಹ-ಸಂಸ್ಥಾಪಕ ಸೆರ್ಗೆ ಬ್ರಿನ್ ಅವರ ಪತ್ನಿ ನಿಕೋಲ್ ಶಾನಹಾನ್ ಜೊತೆ ಮಸ್ಕ್ ವಿವಾಹೇತರ ಸಂಬಂಧವನ್ನು ಹೊಂದಿದ್ದರು ಎಂಬ ಮಾತುಗಳು ಕೇಳಿಬಂದಿವೆ.

ವಾಷಿಂಗ್ಟನ್: ಟೆಸ್ಲಾ ಸಿಇಒ ಎಲಾನ್ ಮಸ್ಕ್ ಮತ್ತು ವಿವಾದಗಳು ಬೆಂಬಿಡದೆ ಪ್ರಯಾಣಿಸುತ್ತಿವೆ. ಬಿಲಿಯನೇರ್ ಗೂಗಲ್ ಸಹ-ಸಂಸ್ಥಾಪಕ ಸೆರ್ಗೆ ಬ್ರಿನ್ ಅವರ ಪತ್ನಿ ನಿಕೋಲ್ ಶಾನಹಾನ್ ಜೊತೆ ಮಸ್ಕ್ ವಿವಾಹೇತರ ಸಂಬಂಧವನ್ನು ಹೊಂದಿದ್ದರು ಎಂಬ ಮಾತುಗಳು ಕೇಳಿಬಂದಿವೆ.
ಸಾರ್ವಜನಿಕರ ಪ್ರಕಾರ, ಅನೈತಿಕ ಸಂಬಂಧಕ್ಕೂ ಮುನ್ನ ಮಸ್ಕ್ ಮತ್ತು ಬ್ರಿನ್ ಆಪ್ತ ಸ್ನೇಹಿತರಾಗಿದ್ದರು ಎಂಬ ವರದಿಯನ್ನು ಉಲ್ಲೇಖಿಸಿ ಪ್ರಕಟಣೆ ವರದಿ ಮಾಡಿದೆ. ಬ್ರಿನ್ ತನ್ನ ಪತ್ನಿ ಟೆಕ್ ಬಿಲಿಯನೇರ್ ಮಸ್ಕ್ ಜೊತೆ ಜೊತೆಗೆ ಸಂಬಂಧ ಹೊಂದಿದ್ದಾರೆಂದು ತಿಳಿದ ನಂತರ ಇಬ್ಬರ ನಡುವಿನ ಸಂಬಂಧ ಹದಗೆಡಲು ಪ್ರಾರಂಭಿಸಿತು.
'ಸರಿಪಡಿಸಲಾಗದ ಭಿನ್ನಾಭಿಪ್ರಾಯ' ಎಂದು ಉಲ್ಲೇಖಿಸಿ ಬ್ರಿನ್ ಜನವರಿಯಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಅಲ್ಲದೆ ತಾನು ಮತ್ತು ಶಾನಹಾನ್ 2021ರ ಡಿಸೆಂಬರ್ 15ರಿಂದ ಬೇರ್ಪಟ್ಟಿರುವುದಾಗಿ ಹೇಳಿದ್ದಾರೆ.
ಈ ವರ್ಷದ ಆರಂಭದಲ್ಲಿ ನಡೆದ ಪಾರ್ಟಿಯಲ್ಲಿ ಮಸ್ಕ್ ಬ್ರಿನ್‌ಗೆ ಕ್ಷಮೆ ಕೇಳಿದ್ದಾರೆ ಎಂದು ವರದಿಯಾಗಿದೆ. ಉತ್ಪಾದನೆಯು ನೆಲಕಚ್ಚಿದ್ದಾಗ ಬ್ರಿನ್ ಟೆಸ್ಲಾ ವಾಹನವನ್ನು ಪಡೆದ ಮೊದಲಿಗನಾಗಿದ್ದರೂ ಎಂದು ವರದಿಯಾಗಿದೆ. ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಟೆಸ್ಲಾವನ್ನು ಮೇಲೆತ್ತಲು ಬ್ರಿನ್ 2008ರಲ್ಲಿ ಮಸ್ಕ್ ಗೆ 500,000 ಅಮೆರಿಕನ್ ಡಾಲರ್ ನೀಡಿದರು.
ಇದನ್ನೂ ಓದಿ: 35 ವರ್ಷದ ಮಲ ಮಗಳೊಂದಿಗೆ ಸೇರಿ 'ರಹಸ್ಯ ಮಗು' ಪಡೆದ ಟೆಕ್ ದೈತ್ಯ ಎಲಾನ್ ಮಸ್ಕ್ ತಂದೆ 76 ವರ್ಷದ ಎರೋಲ್ ಮಸ್ಕ್!
ತನ್ನ ಗೆಳತಿ, ಗಾಯಕಿ ಗ್ರಿಮ್ಸ್‌ನೊಂದಿಗಿನ ದಾಂಪತ್ಯ ಮುರಿದುಬಿದ್ದ ಹಲವಾರು ತಿಂಗಳ ನಂತರ ಆಪಾದಿತ ಸಂಬಂಧವು ಉಂಟಾಗಿದೆ. ಗ್ರಿಮ್ಸ್ ಮತ್ತು ಮಸ್ಕ್ ಗೆ ಎರಡು ಮಕ್ಕಳಾಗಿದ್ದವು. ಇದೇ ಮಾತ್ರವಲ್ಲದೆ ಕೆಲವು ವಾರಗಳ ಹಿಂದೆ, ಮಸ್ಕ್ ಅವರ ಸಂಸ್ಧೆ ನ್ಯೂರಾಲಿಂಕ್‌ನ ಕಾರ್ಯನಿರ್ವಾಹಕ ಶಿವೋನ್ ಜಿಲಿಸ್ ಅವರೊಂದಿಗೆ 2021ರ ನವೆಂಬರ್ ನಲ್ಲಿ ರಹಸ್ಯವಾಗಿ ಅವಳಿ ಮಕ್ಕಳನ್ನು ಪಡೆದಿದ್ದರೂ ಎಂದು ಹಲವಾರು ವರದಿಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದವು.
ಏತನ್ಮಧ್ಯೆ, ಸಾಮಾಜಿಕ ಮಾಧ್ಯಮ ಕಂಪನಿ ಖರೀದಿಸುವ ಬಿಡ್ ಅನ್ನು ಕೈಬಿಟ್ಟ ನಂತರ ಮಸ್ಕ್ ಪ್ರಸ್ತುತ ಟ್ವಿಟರ್‌ನೊಂದಿಗೆ ಕಾನೂನು ಹೋರಾಟದಲ್ಲಿ ಸಿಲುಕಿದ್ದಾರೆ.
ಇದು ಸಂಪೂರ್ಣ ಅಸಮಂಜಸವಾಗಿದೆ. ಸೆರ್ಗೆ ಮತ್ತು ನಾನು ಸ್ನೇಹಿತರು. ಕಳೆದ ರಾತ್ರಿ ಒಟ್ಟಿಗೆ ಪಾರ್ಟಿ ಮಾಡಿದ್ದೇವು. ನಾನು ಮೂರು ವರ್ಷಗಳಲ್ಲಿ ಎರಡು ಬಾರಿ ಮಾತ್ರ ನಿಕೋಲ್ ಅನ್ನು ನೋಡಿದ್ದೇನೆ. ಎರಡೂ ಬಾರಿಯೂ ಸುತ್ತಮುತ್ತಲು ಜನರಿದ್ದರು. ಅಲ್ಲಿ ರೋಮ್ಯಾಂಟಿಕ್ ಏನೂ ಇಲ್ಲ ಎಂದು ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


