ವಿದೇಶ

ಇಂಡಿಯಾನಾ ಮಾಲ್ ಶೂಟಿಂಗ್: ಅಮೆರಿಕಾದಲ್ಲಿ ಮೂವರು ಹತ್ಯೆ, ಪ್ರತ್ಯಕ್ಷದರ್ಶಿಯಿಂದ ಬಂದೂಕುಧಾರಿಯ ಕೊಲೆ

ಇಂಡಿಯಾನಾ ಮಾಲ್ ನ ಫುಡ್ ಕೋರ್ಟ್ ನಲ್ಲಿ ವ್ಯಕ್ತಿಯೊಬ್ಬ ಗುಂಡು ಹಾರಿಸಿ ಮೂವರನ್ನು ಹತ್ಯೆ ಮಾಡಿದ ಬಳಿಕ ಶಸ್ತ್ರದಾರಿ ನಾಗರಿಕನೊಬ್ಬ ಆತನನ್ನು ಹತ್ಯೆ ಮಾಡಿರುವುದಾಗಿ ಪೊಲೀಸರು ಹೇಳಿದ್ದಾರೆ. ಭಾನುವಾರ ಸಂಜೆ ಈ ಘಟನೆ ನಡೆದಿದೆ. ಇಬ್ಬರು ಗಾಯಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.

ಇಂಡಿಯಾನಾ ಮಾಲ್ ಶೂಟಿಂಗ್: ಅಮೆರಿಕಾದಲ್ಲಿ ಮೂವರು ಹತ್ಯೆ, ಪ್ರತ್ಯಕ್ಷದರ್ಶಿಯಿಂದ ಬಂದೂಕುಧಾರಿಯ ಕೊಲೆ
ಶೂಟೌಟ್ ನಡೆದ ಸ್ಥಳ
Published On :

ಗ್ರೀನ್ ವುಡ್:  ಇಂಡಿಯಾನಾ ಮಾಲ್ ನ ಫುಡ್ ಕೋರ್ಟ್ ನಲ್ಲಿ ವ್ಯಕ್ತಿಯೊಬ್ಬ  ಗುಂಡು ಹಾರಿಸಿ ಮೂವರನ್ನು ಹತ್ಯೆ ಮಾಡಿದ ಬಳಿಕ ಶಸ್ತ್ರದಾರಿ ನಾಗರಿಕನೊಬ್ಬ ಆತನನ್ನು ಹತ್ಯೆ ಮಾಡಿರುವುದಾಗಿ ಪೊಲೀಸರು ಹೇಳಿದ್ದಾರೆ. ಭಾನುವಾರ ಸಂಜೆ ಈ ಘಟನೆ ನಡೆದಿದೆ. ಇಬ್ಬರು ಗಾಯಗೊಂಡಿರುವುದಾಗಿ ಅವರು ತಿಳಿಸಿದ್ದಾರೆ. 

ರೈಫಲ್ ಹಾಗೂ ಹಲವಾರು ಮ್ಯಾಗಜಿನ್ ಗಳೊಂದಿಗೆ ಫುಡ್ ಕೋರ್ಟ್ ಪ್ರವೇಶಿಸಿರುವ ವ್ಯಕ್ತಿ ಮನ ಬಂದಂತೆ ಗುಂಡಿನ ದಾಳಿ ನಡೆಸಿರುವುದಾಗಿ  ಗ್ರೀನ್ ವುಡ್ ಪೊಲೀಸ್  ಇಲಾಖೆ ಮುಖ್ಯಸ್ಥ ಜಿಮ್ ಐಸಾನ್ ಹೇಳಿದ್ದಾರೆ. ಒಟ್ಟಾರೆ, ನಾಲ್ಕು ಮಂದಿ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ. 

ಅಧಿಕಾರಿಗಳು ಮಾಲ್ ನಲ್ಲಿ ಶೋಧಿಸಿದಾಗ ಫುಡ್ ಕೋರ್ಟ್ ನ ಬಾತ್  ರೂಂ ಬಳಿ ಅನುಮಾನಾಸ್ಪದ ಬ್ಯಾಕ್ ಪ್ಯಾಕ್ ಒಂದು ಪತ್ತೆಯಾಗಿದೆ. ಇಂಡಿಯಾನಾ ಪೊಲೀಸ್, ಮೆಟ್ರೋಪಾಲಿಟನ್ ಪೋಲಿಸ್ ಮತ್ತು ಅನೇಕ ಇತರ ಏಜೆನ್ಸಿಗಳು ತನಿಖೆಯಲ್ಲಿ ಸಹಾಯ ಮಾಡುತ್ತಿವೆ ಎಂದು ಅವರು ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.