ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾಜಿ ಪತ್ನಿ ಇವಾನಾ ನಿಧನ
ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾಜಿ ಪತ್ನಿ ಇವಾನಾ ಟ್ರಂಪ್( 73) ನಿಧನರಾಗಿದ್ದಾರೆ

ನ್ಯೂಯಾರ್ಕ್: ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾಜಿ ಪತ್ನಿ ಇವಾನಾ ಟ್ರಂಪ್(73) ನಿಧನರಾಗಿದ್ದಾರೆ.
ಇವಾನಾ ಟ್ರಂಪ್ ನ್ಯೂಯಾರ್ಕ್ ನಗರದ ತನ್ನ ಮನೆಯಲ್ಲಿ ನಿಧನರಾದರು ಎಂದು ಡೊನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ದಲ್ಲಿ ಬರೆದುಕೊಂಡಿದ್ದಾರೆ.
ಆಕೆ ಅತ್ಯುದ್ಭುತ, ಸುಂದರ ಮತ್ತು ಉತ್ಸಾಹಿ ಮಹಿಳೆಯಾಗಿದ್ದರು. ಪ್ರೇರಣಾದಾಯಕ ಜೀವನ ನಡೆಸಿದರು ಎಂದು ಟ್ರಂಪ್ ಬರೆದಿದ್ದಾರೆ.
ಜ್ಯೂನಿಯರ್ ಡೊನಾಲ್ಡ್, ಇವಾಂಕ ಮತ್ತು ಎರಿಕ್ ಹೆಸರಿನ ಮೂವರು ಮಕ್ಕಳು ಈ ದಂಪತಿಗೆ ಇದ್ದಾರೆ. ತನ್ನ ಮಕ್ಕಳ ಬಗ್ಗೆ ಆಕೆಗೆ ಅತ್ಯಂತ ಹೆಮ್ಮೆಯಿತ್ತು. ನಾವೂ ಸಹ ಅವಳ ವಿಚಾರದಲ್ಲಿ ಅಷ್ಟೇ ಹೆಮ್ಮೆ ಇರಿಸಿಕೊಂಡಿದ್ದವು. ಅವಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ರಂಪ್ ಹೇಳಿದ್ದಾರೆ.
ಇವಾನಾ ಟ್ರಂಪ್ ಅವರ ಸಾವಿಗೆ ನಿಖರ ಕಾರಣ ಏನು ಎನ್ನುವುದು ಈವರೆಗೆ ಪತ್ತೆಯಾಗಿಲ್ಲ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅವರು ಮೆಟ್ಟಿನಿಂದ ಉರುಳಿ ಮೃತಪಟ್ಟಿರಬಹುದು. ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಹೇಳಲಾಗುತ್ತಿದೆ. ಮನೆಯ ಮೆಟ್ಟಿಲಿನ ಬಳಿ ಪ್ರಜ್ಞೆ ಕಳೆದುಕೊಂಡಿದ್ದ ಸ್ಥಿತಿಯಲ್ಲಿ ಅವರು ಕಾಣಿಸಿಕೊಂಡ ತಕ್ಷಣ ವೈದ್ಯರಿಗೆ ವಿಷಯ ತಿಳಿಸಲಾಯಿತು.
ಆದರೆ ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಬರುವ ಒಳಗೆ ಅವರು ಮೃತಪಟ್ಟಿದ್ದರು. ಸಾವಿನ ನಿಖರ ಕಾರಣಗಳನ್ನು ಆರೋಗ್ಯ ಇಲಾಖೆ ಇನ್ನಷ್ಟೇ ತಿಳಿಸಬೇಕಿದೆ ಎಂದ ಎಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ರೂಪದರ್ಶಿ ಇವಾನಾ ಟ್ರಂಪ್, 1977 ರಲ್ಲಿ ಉದಯೋನ್ಮುಖ ರಿಯಲ್ ಎಸ್ಟೇಟ್ ಡೆವಲಪರ್ ಆಗಿದ್ದ ಡೊನಾಲ್ಡ್ ಟ್ರಂಪ್ ಅವರನ್ನು ವಿವಾಹವಾದರು. ಅವರ ಮೊದಲ ಮಗು, ಡೊನಾಲ್ಡ್ ಜೂನಿಯರ್ ಅದೇ ವರ್ಷ ಜನಿಸಿದರು. ಇವಾಂಕಾ 1981 ರಲ್ಲಿ ಜನಿಸಿದರು ಮತ್ತು ಎರಿಕ್ 1984 ರಲ್ಲಿ ಜನಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


