ಉಕ್ರೇನಿಗರ ಸಾವು-ನೋವಿನ ಲಾಭ ನೀವು ಪಡೆಯುತ್ತಿದ್ದೀರಿ: ರಷ್ಯಾದಿಂದ ತೈಲ ಖರೀದಿಸಿದ ಭಾರತ ವಿರುದ್ದ ಉಕ್ರೇನ್ ಸಚಿವ ವಾಗ್ದಾಳಿ
ರಷ್ಯಾದಿಂದ ಅಗ್ಗದ ತೈಲ ಖರೀದಿಗಾಗಿ ಪಾಶ್ಚಿಮಾತ್ಯ ಮಾಧ್ಯಮಗಳು ಭಾರತದ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿವೆ. ಆದರೆ ಇದೀಗ ಉಕ್ರೇನ್ ಸರ್ಕಾರವು ಮೋದಿ ಸರ್ಕಾರದ ಈ ನಿರ್ಧಾರವನ್ನು ಬಹಿರಂಗವಾಗಿ ಪ್ರಶ್ನಿಸಿದೆ.

ಕೈವ್: ರಷ್ಯಾದಿಂದ ಅಗ್ಗದ ತೈಲ ಖರೀದಿಗಾಗಿ ಪಾಶ್ಚಿಮಾತ್ಯ ಮಾಧ್ಯಮಗಳು ಭಾರತದ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿವೆ. ಆದರೆ ಇದೀಗ ಉಕ್ರೇನ್ ಸರ್ಕಾರವು ಮೋದಿ ಸರ್ಕಾರದ ಈ ನಿರ್ಧಾರವನ್ನು ಬಹಿರಂಗವಾಗಿ ಪ್ರಶ್ನಿಸಿದೆ.
ಉಕ್ರೇನ್‌ನ ವಿದೇಶಾಂಗ ಸಚಿವ ಡಿಮಿಟ್ರೋ ಕುಲೇಬಾ ಅವರು ರಷ್ಯಾದಿಂದ ಅಗ್ಗದ ತೈಲವನ್ನು ಖರೀದಿಸಿದ್ದಕ್ಕಾಗಿ ಭಾರತ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೆ ಇದು 'ನೈತಿಕವಾಗಿ ಅನ್ಯಾಯ' ಎಂದು ಹೇಳಿದರು. ರಷ್ಯಾದ ಆಕ್ರಮಣದಿಂದಾಗಿ ಉಕ್ರೇನ್ ಜನರು ಪ್ರತಿದಿನ ತೊಂದರೆ ಅನುಭವಿಸುತ್ತಿರುವಾಗ ಭಾರತಕ್ಕೆ ಈ ಅಗ್ಗದ ತೈಲವನ್ನು ಖರೀದಿಸುವ ಅವಕಾಶ ಸಿಕ್ಕಿದೆ ಎಂದು ಕುಲೇಬಾ ಹೇಳಿದರು. ಈ ತಿಂಗಳಲ್ಲಿ ರಷ್ಯಾದಿಂದ ಭಾರತ ಅತೀ ಹೆಚ್ಚು ತೈಲವನ್ನು ಖರೀದಿಸಿದ ಹಿನ್ನೆಲೆಯಲ್ಲಿ ಉಕ್ರೇನ್ ವಿದೇಶಾಂಗ ಸಚಿವರ ಈ ಹೇಳಿಕೆ ನೀಡಿದ್ದಾರೆ.
'ಉಕ್ರೇನ್‌ನ ಜನರು ರಷ್ಯಾದ ದಾಳಿಯಿಂದ ಬಳಲುತ್ತಿದ್ದಾರೆ. ಅಲ್ಲದೆ ಪ್ರತಿದಿನ ನೂರಾರು ಮಂದಿ ಸಾಯುತ್ತಿರುವ ಕಾರಣ ಭಾರತಕ್ಕೆ ರಷ್ಯಾದ ತೈಲವನ್ನು ಅಗ್ಗದ ದರದಲ್ಲಿ ಖರೀದಿಸುವ ಅವಕಾಶ ಬಂದಿದೆ' ಎಂದು ಹೇಳಿದರು. 'ನಮ್ಮ ಕಷ್ಟದಿಂದ ನೀವು ಪ್ರಯೋಜನ ಪಡೆಯುವುದು ಸರಿಯೇ? ನಿಮ್ಮ ಸಹಾಯ ನಮಗೆ ಹೆಚ್ಚು ಬೇಕು ಎಂದಿರುವ ಅವರು, ಫೆಬ್ರವರಿಯಿಂದ ಯುರೋಪಿಯನ್ ರಾಷ್ಟ್ರಗಳು ರಷ್ಯಾದಿಂದ ಆತೀ ಹೆಚ್ಚು ತೈಲವನ್ನು ಖರೀದಿಸಿವೆ ಎಂಬ ಭಾರತ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿಕೆಗೆ ಕುಲೇಬಾ ತಿರುಗೇಟು ನೀಡಿದ್ದಾರೆ.
ಉಕ್ರೇನ್ ವಿರುದ್ಧದ ರಷ್ಯಾ ದಾಳಿಯನ್ನು ಭಾರತ ಖಂಡಿಸಬೇಕು
ಉಕ್ರೇನ್‌ನ ವಿದೇಶಾಂಗ ಸಚಿವರು, 'ಯುರೋಪಿಯನ್ ಒಕ್ಕೂಟದತ್ತ ಬೆರಳು ತೋರಿಸಿ ಓಹ್ ಅವರು ಅದೇ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳುವುದು ಸರಿಯಲ್ಲ'. ರಷ್ಯಾದ ತೈಲವನ್ನು ಭಾರತ ಆಮದು ಮಾಡಿಕೊಳ್ಳುವುದನ್ನು ಉಕ್ರೇನ್‌ನಲ್ಲಿನ ಮಾನವ ಸಂಕಟದ ಕೋನದಿಂದ ನೋಡಬೇಕಾಗಿದೆ. ಈ ಯುದ್ಧವನ್ನು ಕೊನೆಗೊಳಿಸುವಲ್ಲಿ ಭಾರತ ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಮುಖ ಪಾತ್ರ ವಹಿಸಬಹುದು ಎಂದು ಕುಲೇಬಾ ಹೇಳಿದರು. ಮೋದಿ 'ಜಾಗತಿಕ ಸನ್ನಿವೇಶದಲ್ಲಿ ಭಾರತ ಪ್ರಮುಖ ವ್ಯಕ್ತಿ. ಭಾರತದ ಪ್ರಧಾನಿ ತಮ್ಮ ಆಲೋಚನೆಗಳಿಂದ ಬದಲಾವಣೆ ತರಬಹುದು ಎಂದರು.
'ಈ ಸಂಘರ್ಷ ಉಕ್ರೇನ್‌ನಲ್ಲಿನ ಯುದ್ಧವಲ್ಲ. ಇದು ಉಕ್ರೇನ್ ವಿರುದ್ಧ ರಷ್ಯಾದ ದಾಳಿ ಎಂದು ಭಾರತೀಯ ವಿದೇಶಾಂಗ ನೀತಿಯು ಹಿಂಜರಿಕೆಯಿಲ್ಲದೆ ಹೇಳುವ ಅವಕಾಶಕ್ಕಾಗಿ ನಾವು ಕಾಯುತ್ತಿದ್ದೇವೆ. ಉಕ್ರೇನ್ ಯುದ್ಧದ ನಂತರವೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಿರ್ಧಾರವನ್ನು ಭಾರತ ಅಧಿಕೃತವಾಗಿ ಟೀಕಿಸಿಲ್ಲ. ವಿಶ್ವಸಂಸ್ಥೆಯಲ್ಲಿ ಬಂದ ಪ್ರಸ್ತಾವನೆಗೆ ಭಾರತ ಮತ ಹಾಕಲಿಲ್ಲ. ಭಾರತದ ಮಧ್ಯಸ್ಥಿಕೆಯು ರಷ್ಯಾದ ಅಧ್ಯಕ್ಷರ ಚಿಂತನೆಯಲ್ಲಿ ಬದಲಾವಣೆ ತರಬಹುದೇ ಎಂದು ಕೇಳಿದ್ದಕ್ಕೆ, ಕುಲೇಬಾ ಅವರು ದೃಢ ಹೆಜ್ಜೆ ಇಡುವುದು ಅವಶ್ಯಕ. ನೀವು ಪ್ರಯತ್ನಿಸದಿದ್ದರೆ ಏನೂ ಬದಲಾಗುವುದಿಲ್ಲ ಎಂದು ಅವರು ಹೇಳಿದರು.
ತೆರೆಮರೆಯಲ್ಲಿ ಯುದ್ಧವನ್ನು ನಿಲ್ಲಿಸಲು ಭಾರತ ಪ್ರಯತ್ನಿಸುತ್ತದೆ
'ಇದು ಯುದ್ಧದ ಸಮಯವಲ್ಲ ಎಂದು ಪ್ರಧಾನಿ ಮೋದಿ ಹೇಳಿದಾಗ ನಾವು ಕೆಲವು ಪ್ರೋತ್ಸಾಹದಾಯಕ ಸಂದೇಶಗಳನ್ನು ನೋಡಿದ್ದೇವೆ. ಮುಂಬರುವ ವರ್ಷಗಳಲ್ಲಿ ಭಾರತದ ಕಡೆಯಿಂದ ಹೆಚ್ಚು ಸಕ್ರಿಯ ಮತ್ತು ತೆರೆಮರೆಯ ರಾಜತಾಂತ್ರಿಕ ಚಟುವಟಿಕೆಗಳನ್ನು ನಾವು ಎದುರು ನೋಡುತ್ತಿದ್ದೇವೆ. ಯುದ್ಧವನ್ನು ಯಾವುದೇ ರೀತಿಯಲ್ಲಿ ಕೊನೆಗೊಳಿಸಲು ಇದು ಒಂದು ಪ್ರಮುಖ ಪ್ರಯತ್ನವಾಗುತ್ತದೆ. ಇನ್ನು 2022ರ ಫೆಬ್ರವರಿ 24ರಂದು ರಷ್ಯಾ ದಾಳಿಯನ್ನು ಪ್ರಾರಂಭಿಸಿದ್ದು ಇನ್ನು ಮುಂದುವರೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


