21 ವರ್ಷಕ್ಕೆ ಖ್ಯಾತ ಟಿಕ್‌ಟಾಕ್ ಸ್ಟಾರ್ ಮೇಘಾ ಠಾಕೂರ್ ಹಠಾತ್ ನಿಧನ!
ಖ್ಯಾತ ಇಂಡೋ-ಕೆನಡಿಯನ್ ಟಿಕ್‌ಟಾಕ್ ತಾರೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಕ್ರಿಯಳಾಗಿದ್ದ ಮೇಘಾ ಠಾಕೂರ್ 21 ವರ್ಷಕ್ಕೆ ಹಠಾತ್ ನಿಧನ ಹೊಂದಿದ್ದಾರೆ.

ಖ್ಯಾತ ಇಂಡೋ-ಕೆನಡಿಯನ್ ಟಿಕ್‌ಟಾಕ್ ತಾರೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಕ್ರಿಯಳಾಗಿದ್ದ ಮೇಘಾ ಠಾಕೂರ್ 21 ವರ್ಷಕ್ಕೆ ಹಠಾತ್ ನಿಧನ ಹೊಂದಿದ್ದಾರೆ.
ಮೇಘಾ ಠಾಕೂರ್ ಹಠಾತ್ ಸಾವು ಆಕೆಯ ಕುಟುಂಬ ಹಾಗೂ ಅವರ ಅಭಿಮಾನಿಗಳಿಗೆ ತೀವ್ರ ದುಃಖವನ್ನುಂಟು ಮಾಡಿದೆ. ಮೇಘಾ ಠಾಕೂರ್ ಸಾವಿನ ಸುದ್ದಿಯನ್ನು ಆಕೆಯ ಪೋಷಕರು ಖಚಿತಪಡಿಸಿದ್ದಾರೆ. ಅವರು ತಮ್ಮ ಮಗಳ ನಿಧನವನ್ನು ದೃಢೀಕರಿಸುವ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ಈ ದುಃಖದ ಸುದ್ದಿಯನ್ನು ಜಗತ್ತಿಗೆ ತಿಳಿಸಿದ್ದಾರೆ.
ಟಿಕ್-ಟಾಕ್ ತಾರೆಯ ಪೋಷಕರು ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ 'ನಮ್ಮ ಸುಂದರ ಮಗಳು ನವೆಂಬರ್ 24ರಂದು ಹಠಾತ್ ನಿಧನರಾಗಿದ್ದಾರೆ ಎಂದು ತಿಳಿಸಲು ನಮಗೆ ಬಹಳ ದುಃಖವಾಗುತ್ತಿದೆ.

ಈ ಭಾವನಾತ್ಮಕ ಪೋಸ್ಟ್‌ನಲ್ಲಿ ತಮ್ಮ ಮಗಳನ್ನು ಶಕ್ತಿಯುತ ಯುವತಿ ಎಂದು ಕರೆದಿದ್ದಾರೆ. 'ಮೇಘಾ ಆತ್ಮವಿಶ್ವಾಸ ಮತ್ತು ಸ್ವಾವಲಂಬಿ ಯುವತಿ. ಅವಳು ತನ್ನ ಅಭಿಮಾನಿಗಳನ್ನು ತುಂಬಾ ಪ್ರೀತಿಸುತ್ತಿದ್ದಳು. ಆದ್ದರಿಂದ ಅವಳು ತನ್ನ ಸಾವಿನ ಬಗ್ಗೆ ಎಲ್ಲರಿಗೂ ತಿಳಿಯಬೇಕೆಂದು ಬಯಸಿದ್ದಳು. ಈ ಸಮಯದಲ್ಲಿ, ನಾವು ಮೇಘಾಗೆ ನಿಮ್ಮ ಪ್ರಾರ್ಥನೆ ಮತ್ತು ಸಂತಾಪವನ್ನು ಕೋರುತ್ತೇವೆ. ನಿಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಅವಳ ಮುಂದಿನ ಪ್ರಯಾಣದಲ್ಲಿ ಆಕೆಯೊಂದಿಗೆ ಇರುತ್ತದೆ ಎಂದು ಬರೆದಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಮೇಘಾ ಠಾಕೂರ್ ತನ್ನ ನೋಟ ಮತ್ತು ಕರ್ವಿ ಫಿಗರ್ ನಿಂದ ಪ್ರಸಿದ್ಧರಾಗಿದ್ದರು. ಆಕೆ ಆಗಾಗ್ಗೆ ದೇಹದ ಸಕಾರಾತ್ಮಕತೆಯ ಬಗ್ಗೆ ಮಾತನಾಡುತ್ತಾಳೆ. ಅಲ್ಲದೆ ತಮ್ಮ ಅಭಿಮಾನಿಗಳನ್ನು ಪ್ರೇರೇಪಿಸುತ್ತಿರುತ್ತಾಳೆ. ಮಾಧ್ಯಮ ವರದಿಗಳ ಪ್ರಕಾರ, ಅವಳ ಮೂಲತಃ ಮಧ್ಯಪ್ರದೇಶದ ಇಂದೋರ್‌ಗೆ ಸೇರಿದವಳಾಗಿದ್ದು ತನ್ನ ಹೆತ್ತವರೊಂದಿಗೆ ಕೆನಡಾದ ಒಂಟಾರಿಯೊದ ಬ್ರಾಂಪ್ಟನ್‌ನಲ್ಲಿ ವಾಸಿಸುತ್ತಿದ್ದಳು. ಅವರು ಟ್ವಿಟರ್‌ನಲ್ಲಿ 93,000 ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 102,000 ಅನುಯಾಯಿಗಳನ್ನು ಹೊಂದಿದ್ದಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


