ವಿದೇಶ

ಡ್ರಗ್ಸ್ ಖರೀದಿಗಾಗಿ 19 ನಕಲಿ ಐಡಿಗಳನ್ನು ಹೊಂದಿದ್ದ ಮೈಕೆಲ್ ಜಾಕ್ಸನ್! 

ಪಾಪ್ ಜಗತ್ತಿನ ಸ್ಟಾರ್ ಐಕಾನ್ ಮೈಕೆಲ್ ಜಾಕ್ಸನ್ ಡ್ರಗ್ಸ್ ಖರೀದಿಸಲು ಬರೊಬ್ಬರಿ 19 ನಕಲಿ ಗುರುತಿನ ಚೀಟಿಗಳನ್ನು ಹೊಂದಿದ್ದರು ಎಂದು ಹೊಸ ಡಾಕ್ಯುಮೆಂಟರಿಯಿಂದ ತಿಳಿದುಬಂದಿದೆ.

ಡ್ರಗ್ಸ್ ಖರೀದಿಗಾಗಿ 19 ನಕಲಿ ಐಡಿಗಳನ್ನು ಹೊಂದಿದ್ದ ಮೈಕೆಲ್ ಜಾಕ್ಸನ್! 
ಮೈಕಲ್ ಜಾಕ್ಸನ್
Published On :

ಲಾಸ್ ಏಂಜಲೀಸ್: ಪಾಪ್ ಜಗತ್ತಿನ ಸ್ಟಾರ್ ಐಕಾನ್ ಮೈಕೆಲ್ ಜಾಕ್ಸನ್ ಡ್ರಗ್ಸ್ ಖರೀದಿಸಲು ಬರೊಬ್ಬರಿ 19 ನಕಲಿ ಗುರುತಿನ ಚೀಟಿಗಳನ್ನು ಹೊಂದಿದ್ದರು ಎಂದು ಹೊಸ ಡಾಕ್ಯುಮೆಂಟರಿಯಿಂದ ತಿಳಿದುಬಂದಿದೆ.
 
2009 ರಲ್ಲಿ ಮೈಕಲ್ ಜಾಕ್ಸನ್ (50 ವರ್ಷ) ಲಾಸ್ ಏಂಜಲೀಸ್ ಮನೆಯಲ್ಲಿ ಹೃದಯಸ್ತಂಭನಕ್ಕೊಳಗಾಗಿ ಮೃತಪಟ್ಟಿದ್ದರು. ಇದಕ್ಕೆ ಕಾರಣ ಜಾಕ್ಸನ್ ಅವರ ವೈದ್ಯರು ಆಗಾಗ್ಗೆ ನೀಡುತ್ತಿದ್ದ ಅರಿವಳಿಕೆ ಪ್ರೊಪೋಫೋಲ್ ಎಂಬ ಔಷಧ ಎಂದು ತಿಳಿದುಬಂದಿತ್ತು. ಜಾಕ್ಸನ್ ವೈದ್ಯರ ವಿರುದ್ಧ ನರಹತ್ಯೆಯ ಆರೋಪ ಹೊರಿಸಿ ಅವರಿಗೆ ನಾಲ್ಕು ವರ್ಷ ಜೈಲು ಶಿಕ್ಷೆಯನ್ನೂ ವಿಧಿಸಲಾಗಿತ್ತು.

ಡ್ರಗ್ಸ್ ಖರೀದಿಗಾಗಿ 19 ನಕಲಿ ಐಡಿಗಳನ್ನು ಜಾಕ್ಸನ್ ಹೊಂದಿದ್ದರು ಎಂಬ ಮಾಹಿತಿ  ಜಾಕ್ಸನ್ ಕುರಿತ ಟಿಎಂಝೆಡ್ ಇನ್ವೆಸ್ಟಿಗೇಟ್ಸ್ ಎಂಬ ಹೊಸ ಡಾಕ್ಯುಮೆಂಟರಿಯ ಮೂಲಕ ತಿಳಿದುಬಂದಿದೆ.

ಟಿಎಂಝೆಡ್ ಇನ್ವೆಸ್ಟಿಗೇಟ್ಸ್ ಡಾಕ್ಯುಮೆಂಟರಿ ಮುಂದಿನ ತಿಂಗಳು ಫಾಕ್ಸ್ ವಾಹಿನಿಯಲ್ಲಿ ಪ್ರಸಾರವಾಗಲಿದೆ. 

ಜಾಕ್ಸನ್ ಅವರಿಗಿದ್ದ ಗೀಳನ್ನು ವೈದ್ಯಕೀಯ ಸಮೂಹ ಸುಗಮಗೊಳಿಸಿತು, ಎಂದು ತಿಳಿದುಬಂದಿದ್ದು, ಜಾಕ್ಸನ್ ಪ್ರವಾಸಕ್ಕೆ ತೆರಳುತ್ತಿದ್ದಾಗ ಅವರಿಗೆ ನಿದ್ದೆ ಬರುವ ಒಂದೇ ದಾರಿ ಎಂದರೆ ಅದು ಪ್ರೊಪೋಫೋಲ್ ಮಾತ್ರ ಆಗಿತ್ತು ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.