ಚೀನಾದೊಂದಿಗಿನ ಸಂಘರ್ಷ: ತೈವಾನ್ ನಿಂದ ಅತ್ಯಾಧುನಿಕ ಎಫ್-16 ಫೈಟರ್ ಜೆಟ್ ಗಳ ನಿಯೋಜನೆ
ಚೀನಾದೊಂದಿಗೆ ಸಂಘರ್ಷ, ಶೀತಲ ಸಮರ ಎದುರಿಸುತ್ತಿರುವ ತೈವಾನ್, ತನ್ನ ವಾಯುಪಡೆಗೆ ಅತ್ಯಾಧುನಿಕ ಎಫ್-16 ಫೈಟರ್ ಜೆಟ್ ಗಳನ್ನು ನಿಯೋಜನೆ ಮಾಡಿದ್ದು ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ.

ತೈವಾನ್: ಚೀನಾದೊಂದಿಗೆ ಸಂಘರ್ಷ, ಶೀತಲ ಸಮರ ಎದುರಿಸುತ್ತಿರುವ ತೈವಾನ್, ತನ್ನ ವಾಯುಪಡೆಗೆ ಅತ್ಯಾಧುನಿಕ ಎಫ್-16 ಫೈಟರ್ ಜೆಟ್ ಗಳನ್ನು ನಿಯೋಜನೆ ಮಾಡಿದ್ದು ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ.
ಚೀನಾ ತೈವಾನ್ ದ್ವೀಪವನ್ನು ತನ್ನ ಪ್ರಾಂತ್ಯ ಎಂದು ಹಕ್ಕು ಪ್ರತಿಪಾದನೆ ಮಾಡುತ್ತಿದ್ದು ತೈವಾನ್ ಚೀನಾದ ಅಪಾಯವನ್ನು ಎದುರಿಸುತ್ತಿದೆ.
ತೈವಾನ್ ನ ಅಧ್ಯಕ್ಷ ತ್ಸೈ ಇಂಗ್-ವೆನ್ 64 ಅಪ್ ಗ್ರೇಡೆಡ್ ಎಫ್-16 ಫೈಟರ್ ಜೆಟ್ ಗಳನ್ನು ವಾಯುಪಡೆಗೆ ಸೇರ್ಪಡೆಗೊಳಿಸಿದ್ದು, ತೈವಾನ್ ಬಳಿ ಇರುವ 141 ಎಫ್-16 ಎ/ಬಿ ಜೆಟ್ ಗಳನ್ನು ಈ ಹೊಸ ಯುದ್ಧ ವಿಮಾನಗಳು ಪ್ರತಿನಿಧಿಸಲಿವೆ. ಎಫ್-16 ಎ/ಬಿ ಜೆಟ್ 1990 ರ ಅವಧಿಯದ್ದಾಗಿದ್ದು, 2023 ರ ವೇಳೆಗೆ ಸೇವೆಯಿಂದ ಸಂಪೂರ್ಣವಾಗಿ ವಿರಾಮ ನೀಡಲಾಗುತ್ತದೆ.
ಅಪ್ ಗ್ರೇಡ್ ಆಗಿರುವ ಯೋಜನೆ ತೈವಾನ್ ಹಾಗೂ ಅಮೆರಿಕದ ರಕ್ಷಣಾ ವಲಯದ ನಡುವಿನ ಸಮನ್ವಯಕ್ಕೆ ಸಾಕ್ಷಿಯಾಗಿದೆ ಎಂದು ತೈವಾನ್ ನ ಅಧ್ಯಕ್ಷ ತ್ಸೈ ಇಂಗ್-ವೆನ್ ಹೇಳಿದ್ದಾರೆ.
ತೈವಾನ್ ವಿಷಯವಾಗಿ ಅಮೆರಿಕ-ಚೀನಾ ಸಂಬಂಧವೂ ಹದಗೆಟ್ಟಿದೆ. ಇತ್ತೀಚೆಗಷ್ಟೇ ನಡೆದ ಅಮೆರಿಕ ಅಧ್ಯಕ್ಷ ಜೋ ಬೈಡನ್-ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ನಡುವಿನ ವರ್ಚ್ಯುಯಲ್ ಸಭೆಯಲ್ಲಿ ಚೀನಾ ಅಧ್ಯಕ್ಷರು ಇದೇ ವಿಷಯವಾಗಿ ಅಮೆರಿಕಾಗೆ ಎಚ್ಚರಿಕೆಯನ್ನೂ ನೀಡಿ ಬೆಂಕಿಯ ಜೊತೆ ಸರಸವಾಡಬೇಡಿ ಎಂದು ಹೇಳಿದ್ದೂ ವರದಿಯಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


