ತಾಲಿಬಾನ್ ಮತ್ತು ಅಲ್ ಖೈದಾ ನಡುವೆ ಬೇರ್ಪಡಿಸಲಾಗದ ನಂಟು: ತಜ್ಞರ ವರದಿ
ತಾಲಿಬಾನ್ ಮತ್ತು ಅಲ್ ಖೈದಾ ವಿಚಾರಧಾರೆಗಳಲ್ಲಿ ಸಾಮ್ಯತೆ ಇದ್ದು, ಅವೆರಡೂ ಸಂಘಟನೆಗಳು ಒಂದೇ ರೀತಿ ಹೋರಾಟ ನಡೆಸಿವೆ ಹಾಗೂ ಜಗತ್ತಿನ ವಿರೋಧ ಕಟ್ಟಿಕೊಂಡಿವೆ. ಎಲ್ಲಕ್ಕಿಂತ ಹೆಚ್ಚಾಗಿ ಅವೆರಡೂ ಸಂಘಟನೆಗಳ ನಡುವೆ ವಿವಾಹ ಸಂಬಂಧಗಳೂ ಏರ್ಪಟ್ಟಿವೆ.

ಕಾಬೂಲ್: ಮೇ 2020 ಮತ್ತು ಎಪ್ರಿಲ್ 2021ರ ಅಫ್ಘಾನಿಸ್ತಾನದ ಬೆಳವಣಿಗೆಗಳ ಹಿಂದೆ ಅಲ್ ಖೈದಾ ಕೈವಾಡ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದರಿಂದಾಗಿ ತಾಲಿಬಾನ್ ಮತ್ತು ಅಲ್ ಖೈದಾ ನಡುವೆ ಬೇರ್ಪಡಿಸಲಾಗದ ನಂಟು ಇರುವುದಾಗಿ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಸಲ್ಲಿಕೆಯಾಗಿರುವ ತಜ್ಞರ ವರದಿಯಲ್ಲಿ ಹೇಳಲಾಗಿದೆ.
ತಾಲಿಬಾನ್ ಮತ್ತು ಅಲ್ ಖೈದಾ ವಿಚಾರಧಾರೆಗಳಲ್ಲಿ ಸಾಮ್ಯತೆ ಇದ್ದು, ಅವೆರಡೂ ಸಂಘಟನೆಗಳು ಒಂದೇ ರೀತಿ ಹೋರಾಟ ನಡೆಸಿವೆ ಹಾಗೂ ಜಗತ್ತಿನ ವಿರೋಧ ಕಟ್ಟಿಕೊಂಡಿವೆ. ಎಲ್ಲಕ್ಕಿಂತ ಹೆಚ್ಚಾಗಿ ಅವೆರಡೂ ಸಂಘಟನೆಗಳ ನಡುವೆ ವಿವಾಹ ಸಂಬಂಧಗಳೂ ಏರ್ಪಟ್ಟಿವೆ. ಇವೆಲ್ಲದರಿಂದಾಗಿ ಅವರೆಡು ಸಂಘಟನೆಗಳ ನಡುವೆ ಬಿಡಿಸಲಾಗದ ನಂಟಿರುವುದಾಗಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ತಾಲಿಬಾನ್ ಈ ಹಿಂದೆ ಅಮೆರಿಕ ಜೊತೆಗಿನ ಮಾತುಕತೆ ಸಂದರ್ಭದಲ್ಲಿ ಅಲ್ ಖೈದಾ ನಾಯಕರ ಸಲಹೆ ಪಡೆದುಕೊಂಡಿರುವ ಬಗ್ಗೆ ಸಾಕ್ಷ್ಯಾಧಾರಗಳು ಲಭ್ಯವಾಗಿದ್ದು ಇದು ಅಂತಾರಾಷ್ಟ್ರೀಯ ಸಮುದಾಯದ ನಾಯಕರ ನಿದ್ದೆಗೆಡಿಸಿದೆ. ಅಲ್ ಖೈದಾ ಸಲಹೆಯ ಮೇರೆಗೆ ತಾಲಿಬಾನ್ ಅಮೆರಿಕದ ಷರತ್ತುಗಳಿಗೆ ಒಪ್ಪಿಕೊಂಡಿತ್ತು. ಇದೀಗ ಈ ಷರತ್ತುಗಳಿಗೆ ತಾಲಿಬಾನ್ ಎಷ್ಟರಮಟ್ಟಿಗೆ ಬದ್ಧವಾಗಿರುವುದೆಂಬ ಕುತೂಹಲ ಮೊಳೆತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


