ಅಪರಿಚಿತನಿಂದ ರೋಹಿಂಗ್ಯಾ ನಿರಾಶ್ರಿತರ ನಾಯಕನನ್ನು ಗುಂಡಿಕ್ಕಿ ಹತ್ಯೆ: ಆಮ್ನೆಸ್ಟಿ ಖಂಡನೆ
ಮ್ಯಾನ್ಮಾರ್ ನಲ್ಲಿ ಸೇನಾಡಳಿತ ಹೇರಿಕೆಯಾದುದನ್ನು ಪ್ರತಿಭಟಿಸಿ ಮೊಹಿಬುಲ್ಲ ಅವರು ಬಾಂಗ್ಲಾದಲ್ಲಿ ರಾಲಿ ನಡೆಸಿದ್ದರು. ಇದು ಬಾಂಗ್ಲಾ ಮಾಧ್ಯಮಗಳ ಕೆಂಗಣ್ಣಿಗೆ ಕಾರಣವಾಗಿತ್ತು.

ಧಾಕಾ: ಮ್ಯಾನ್ಮಾರ್ ನ ಅಲ್ಪಸಂಖ್ಯಾತ ರೋಹಿಂಗ್ಯಾ ಮುಸ್ಲಿಂ ಸಮುದಾಯದ ನಾಯಕನಾಗಿ ಗುರುತಿಸಿಕೊಂಡಿದ್ದ ಮೊಹಿಬುಲ್ಲಾರನ್ನು ಬಾಂಗ್ಲಾದೇಶದ ನಿರಾಶ್ರಿತರ ಶಿಬಿರದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಮೊಹಿಬುಲ್ಲ ಅವರು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ರೋಹಿಂಗ್ಯಾಗಳಿಗೆ ಆಗುತ್ತಿರುವ ಅನ್ಯಾಯದ ಕುರಿತು ದನಿಯೆತ್ತಿ ಮಾತನಾಡಿದ್ದರು. 2019ರಲ್ಲಿ ಅಮೆರಿಕದ ಶ್ವೇತಭವನಕ್ಕೆ ಭೇಟಿ ನೀಡಿ ಅಧ್ಯಕ್ಷ ಟ್ರಂಪ್ ಅವರ ಜೊತೆ ಮಾತುಕತೆ ನಡೆಸಿದ್ದರು.
ಮ್ಯಾನ್ಮಾರ್ ನಲ್ಲಿ ಸೇನಾಡಳಿತ ಹೇರಿಕೆಯಾದುದನ್ನು ಪ್ರತಿಭಟಿಸಿ ಮೊಹಿಬುಲ್ಲ ಅವರು ಬಾಂಗ್ಲಾದಲ್ಲಿ ರಾಲಿ ನಡೆಸಿದ್ದರು. 2,00,000 ಮಂದಿ ರೋಹಿಂಗ್ಯಾಗಳು ಈ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಇದು ಬಾಂಗ್ಲಾ ಮಾಧ್ಯಮಗಳ ಕೆಂಗಣ್ಣಿಗೆ ಕಾರಣವಾಗಿತ್ತು.
ಇದನ್ನೂ ಓದಿ: ಮ್ಯಾನ್ಮಾರ್ ಗೆ ರೋಹಿಂಗ್ಯನ್ನರ ವಾಪಸಾತಿಯಲ್ಲಿ ಪ್ರಮುಖ ಪಾತ್ರ ವಹಿಸಲು ಭಾರತಕ್ಕೆ ಬಾಂಗ್ಲಾ ಪ್ರಧಾನಿ ಮನವಿ
ಧಾಕಾದ ಕಾಕ್ಸ್ ಬಜಾರ್ ನಲ್ಲಿ ಅಪರಿಚಿತ ವ್ಯಕ್ತಿಯೋರ್ವ 40ರ ಯುವನಾಯಕ ಮೊಹಿಬುಲ್ಲ ಅವರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ಯಾವುದೇ ಸಂಘಟನೆ ಕೃತ್ಯದ ಹೊಣೆ ಹೊತ್ತುಕೊಂಡಿಲ್ಲ.
Related Article
ಮಾನವ ಕಳ್ಳ ಸಾಗಣೆ ಪ್ರಕರಣ: 13 ಬಾಂಗ್ಲಾದೇಶಿಗರ ವಿರುದ್ಧ ಎನ್ ಐಎ ಚಾರ್ಜ್ ಶೀಟ್ ದಾಖಲು
ಬಾಂಗ್ಲಾ ವಿಮಾನ ಹಾರಾಟದ ವೇಳೆ ಪೈಲಟ್ ಗೆ ಹೃದಯಾಘಾತ: ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ
ಬೆಳಗಾವಿ: ಚೀನಾ ಮತ್ತು ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಹೋರಾಡಿದ್ದ ಹಿರಿಯ ನಿವೃತ್ತ ಯೋಧ ವಸಂತ್ ಲಾಡ್ ನಿಧನ
ಬಾಂಗ್ಲಾದೇಶದಲ್ಲಿ 4 ಹಿಂದೂ ದೇವಾಲಯಗಳು ಧ್ವಂಸ!
ಬಾಂಗ್ಲಾದೇಶಿಗಳ ಮಾನವ ಕಳ್ಳಸಾಗಣೆ ಪ್ರಕರಣ: ಕರ್ನಾಟಕದಲ್ಲಿ ಎನ್ಐಎ ಶೋಧಕಾರ್ಯಾಚರಣೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


