ವಿದೇಶ

ಕೊರೊನಾ ಮಾರ್ಗಸೂಚಿ ಸಡಿಲಿಕೆ, ಪಾನಮತ್ತರಾಗಿ ಬೀದಿಗಳಲ್ಲಿ ಸಂಭ್ರಮಾಚರಣೆಗಿಳಿದ ನಾಗರಿಕರಿಂದ ಗೂಂಡಾ ಪ್ರವೃತ್ತಿ: ಹಲವೆಡೆ ಗುಂಪು ಘರ್ಷಣೆ 

ಮನೆಗಳಲ್ಲಿ ಕೂತು ಬೋರು ಹೊಡೆದಿದ್ದ ನಾರ್ವೆ ಜನತೆ ರಾತ್ರಿ ನೈಟ್ ಕ್ಲಬ್ಬುಗಳಲ್ಲಿ ಕಂಠಪೂರ್ತಿ ಕುಡಿದು ಸಂಭ್ರಮಾಚರಣೆ ನಡೆಸಿದೆ. ಇದೇ ವೇಳೆ ಹಲವೆಡೆ ಗುಂಪು ಘರ್ಷಣೆಗಳು ಸಂಭವಿರುವ ಬಗ್ಗೆ ವರದಿಯಾಗಿದೆ. ಒಂದೇ ರಾತ್ರಿಯಲ್ಲಿ 50 ದೂರುಗಳು ದಾಖಲಾಗಿರುವುದು ಪೊಲಿಸರಿಗೆ ತಲೆನೋವಾಗಿ ಪರಿಣಮಿಸಿದೆ.

ಕೊರೊನಾ ಮಾರ್ಗಸೂಚಿ ಸಡಿಲಿಕೆ, ಪಾನಮತ್ತರಾಗಿ ಬೀದಿಗಳಲ್ಲಿ ಸಂಭ್ರಮಾಚರಣೆಗಿಳಿದ ನಾಗರಿಕರಿಂದ ಗೂಂಡಾ ಪ್ರವೃತ್ತಿ: ಹಲವೆಡೆ ಗುಂಪು ಘರ್ಷಣೆ 
ಮೂಕ ಪ್ರೇಕ್ಷಕರಾಗಿರುವ ಪೊಲೀಸರು
Published On :

ಒಸ್ಲೊ: ನಾರ್ವೆ ದೇಶದಲ್ಲಿ ದೀರ್ಘಕಾಲದಿಂದ ಹೇರಲಾಗಿದ್ದ ಲಾಕ್ ಡೌನ್ ನಿರ್ಬಂಧ, ಕೊರೊನಾ ಮಾರ್ಗಸೂಚಿಗಳನ್ನು ಸರ್ಕಾರ ಸಡಿಲಿಸಿತ್ತು. ಮನೆಗಳಲ್ಲಿ ಕೂತು ಬೋರು ಹೊಡೆದಿದ್ದ ಜನತೆ ರಾತ್ರಿ ನೈಟ್ ಕ್ಲಬ್ಬುಗಳಲ್ಲಿ ಕಂಠಪೂರ್ತಿ ಕುಡಿದು ಸಂಭ್ರಮಾಚರಣೆ ನಡೆಸಿದೆ. ಇದೇ ವೇಳೆ ಹಲವೆಡೆ ಗುಂಪು ಘರ್ಷಣೆಗಳು ಸಂಭವಿರುವ ಬಗ್ಗೆ ವರದಿಯಾಗಿದೆ. ಒಂದೇ ರಾತ್ರಿಯಲ್ಲಿ 50 ದೂರುಗಳು ದಾಖಲಾಗಿರುವುದು ಪೊಲಿಸರಿಗೆ ತಲೆನೋವಾಗಿ ಪರಿಣಮಿಸಿದೆ. 

ಶನಿವಾರ ಮಧ್ಯಾಹ್ನದ ವೇಳೆಗೆ ಪ್ರಧಾನಿ ಎರ್ನಾ ಸೊಲ್ಬರ್ಗ್ ಅವರು ಕೊರೊನಾ ನಿರ್ಬಂಧ ಸಡಿಲಿಸುತ್ತಿರುವುದಾಗಿ ಘೋಷಣೆ ಮಾಡಿದ್ದರು. ಆ ಕ್ಷಣದಿಂದಲೇ ನಾಗರಿಕರ ಗೂಂಡಾ ವರ್ತನೆ ಗರಿಗೆದರಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಜನರು ಹುಚ್ಚು ಬಂದಂತೆ ಸಂಭ್ರಮಾಚರಣೆಯಲ್ಲಿ ತೊಡಗಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯುಂಟುಮಾಡಿದ್ದಾರೆ.

ದೇಶದೆಲ್ಲೆಡೆ ಈ ಪರಿಸ್ಥಿತಿ ಕಂಡುಬಂದಿದ್ದರೂ ರಾಜಧಾನಿ ಒಸ್ಲೋನಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿರುವುದಾಗಿ ಮೂಲಗಳು ತಿಳಿಸಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನೈಟ್ ಕ್ಲಬ್ ಓದರ್ ಒಬ್ಬ ಹೀಗಾಗುತ್ತದೆ ಎಂದು ನನಗೆ ಮುಂಚೆಯೇ ತಿಳಿದಿತ್ತು ಎಂಡು ಹೇಳಿದ್ದಾನೆ. ಒಂದೇ ಬಾರಿಗೆ ಎಲ್ಲಾ ಮಾರ್ಗಸೂಚಿಯನ್ನು ತೆಗೆಯುವುದಕ್ಕೆ ಬದಲಾಗಿ ಹಂತ ಹಂತವಾಗಿ ಲಾಕ್ ಡೌನ್ ನಿರ್ಬಂಧ ತೆಗೆಯಬೇಕಿತ್ತು ಎಂಡು ಹಲವರು ಸರ್ಕಾರದ ಕ್ರಮವನ್ನು ಟೀಕಿಸಿದ್ದಾರೆ.

Related Article

ಸೆ. 28ಕ್ಕೆ ಇಂದಿರಾ ನೂಯಿ ಜೀವನದ ಮೇಲೆ ಬೆಳಕು ಚೆಲ್ಲುವ ಪುಸ್ತಕ ಬಿಡುಗಡೆ; 2009ರ ಘಟನೆ ಮೆಲಕು!

12 ಹಾಗೂ ಮೇಲ್ಪಟ್ಟವರಿಗೆ ನೀಡಬಹುದಾದ ಡಿಎನ್ಎ ಲಸಿಕೆ ಅಭಿವೃದ್ಧಿಪಡಿಸಿದ ಮೊದಲ ದೇಶ ಭಾರತ: ಯುಎನ್ ಜಿಎಯಲ್ಲಿ ಪ್ರಧಾನಿ ಮೋದಿ

ಬೆಂಕಿ ಆರಿಸುವ ಸೋಗಿನಲ್ಲಿ ಪಾಕಿಸ್ತಾನ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ: ವಿಶ್ವಸಂಸ್ಥೆಯಲ್ಲಿ ಭಾರತ ಕಟುಟೀಕೆ

ಗಡಿಯಾಚೆಗಿನ ಭಯೋತ್ಪಾದನೆಗೆ ಭಾರತ-ಅಮೆರಿಕ ಜಂಟಿಯಾಗಿ ಖಂಡನೆ; 26/11 ದಾಳಿಯ ಅಪರಾಧಿಗಳಿಗೆ ಶಿಕ್ಷೆ ನೀಡಲು ಕರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.