ರಾಜಪ್ರಭುತ್ವದ ಕತಾರ್ ನಲ್ಲಿ ಇದೇ ಮೊದಲ ಬಾರಿಗೆ ಶಾಸಕಾಂಗ ಮಂಡಳಿ ಮತದಾನ
2022ರ ವಿಶ್ವಕಪ್ ಫುಟ್ ಬಾಲ್ ಆತಿಥ್ಯವನ್ನು ಕತಾರ್ ವಹಿಸಿಕೊಂಡಿದೆ. ಹೀಗಾಗಿ ರಾಜಪ್ರಭುತ್ವವನ್ನು ಹೊಂದಿರುವ ಕತಾರ್, ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರಗಳಿಂದ ಜಾಗತಿಕ ಮಟ್ಟದಲ್ಲಿ ಒತ್ತಡವನ್ನು ಎದುರಿಸುತ್ತಿದೆ.

ದೋಹಾ: ಇದೇ ಮೊದಲ ಬಾರಿಗೆ ಕತಾರ್ ನಾಗರಿಕರು ಶಾಸಕಾಂಗ ಮಂಡಳಿ ಆಯ್ಕೆಗಾಗಿ ಹಮ್ಮಿಕೊಳ್ಳಲಾಗಿದ್ದ ಮತದಾನದಲ್ಲಿ ಪಾಲ್ಗೊಡಿದ್ದಾರೆ. ಕತಾರ್ ಹಿಂದಿನಂದಲೂ ರಾಜನ ಆಳ್ವಿಕೆಗೆ ಒಳಪಟ್ಟಿದೆ.
ಇದೀಗ ನಡೆದಿರುವ ಮತದಾನವನ್ನು ಪ್ರಯೋಗ ಎಂದು ಕತಾರ್ ಅಧಿಕಾರಿಗಳು ಕರೆದಿದ್ದಾರೆ. 2022ರ ವಿಶ್ವಕಪ್ ಫುಟ್ ಬಾಲ್ ಆತಿಥ್ಯವನ್ನು ಕತಾರ್ ವಹಿಸಿಕೊಂಡಿದೆ. ಹೀಗಾಗಿ ರಾಜಪ್ರಭುತ್ವವನ್ನು ಹೊಂದಿರುವ ಕತಾರ್, ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರಗಳಿಂದ ಜಾಗತಿಕ ಮಟ್ಟದಲ್ಲಿ ಒತ್ತಡವನ್ನು ಎದುರಿಸುತ್ತಿದೆ.
ಜಗತ್ತಿನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮಾನದಂಡವನ್ನಾಗಿ ನೋಡುವ ಕಾಲದಲ್ಲಿ ಕತಾರ್ ಇನ್ನೂ ರಾಜಪ್ರಭುತ್ವ ವ್ಯವಸ್ಥೆ ಅಳವಡಿಸಿಕೊಂಡಿರುವುದಕ್ಕೆ ಹಲವು ದೇಶಗಳು ಆಕ್ಷೇಪ ವ್ಯಕ್ತಪಡಿಸಿವೆ. ಹೀಗಾಗಿ ಆ ನಿಟ್ಟಿನಲ್ಲಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಭದ್ರತಾ ಮಂಡಳಿ ಆಯ್ಕೆಗಾಗಿ ಮತದಾನ ಹಮ್ಮಿಕೊಳ್ಳಲಾಗಿತ್ತು.
Related Article
ಪಾಕಿಸ್ತಾನ: ಧರ್ಮ ನಿಂದನೆ ಎಸಗಿದ್ದ ಮಹಿಳೆಗೆ ಮರಣದಂಡನೆ
ಫ್ರಾನ್ಸ್ ಮಾಜಿ ಅಧ್ಯಕ್ಷ ನಿಕೋಲಸ್ ಸರ್ಕೋಜಿಗೆ ಒಂದು ವರ್ಷ ಜೈಲು ಶಿಕ್ಷೆ
ಏರ್ ಇಂಡಿಯಾ ಕುರಿತು ಸರ್ಕಾರ ಇದುವರೆಗೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ: ಪಿಯೂಷ್ ಗೋಯಲ್
ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ವೆನಿಜುವೆಲದಲ್ಲಿ ಹೊಸ ಕರೆನ್ಸಿ ನೋಟು ಬಿಡುಗಡೆ
ತಾಲಿಬಾನಿಗಳ ಹೊಸ ರೂಲ್: ಸ್ಟೈಲಿಷ್ ಕೇಶ ವಿನ್ಯಾಸ, ಕ್ಲೀನ್ ಶೇವ್, ಟ್ರಿಮ್ ಗೂ ನಿಷೇಧ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


