ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ವೆನಿಜುವೆಲದಲ್ಲಿ ಹೊಸ ಕರೆನ್ಸಿ ನೋಟು ಬಿಡುಗಡೆ
ಇದುವರೆಗೂ ವೆನಿಜುವೆಲ ದೇಶದಲ್ಲಿ ಲಭ್ಯವಿದ್ದ ಅತ್ಯಧಿಕ ಮೊತ್ತದ ಕರೆನ್ಸಿ ಎಂದರೆ 10 ಲಕ್ಷ ಬೊಲಿವರ್. ಇದೀಗ ನೂತನ ಕರೆನ್ಸಿ ಅದಕ್ಕೆ ಬದಲಿಯಾಗಿ ರೂಪಿಸಲಾಗಿರುವ ಕರೆನ್ಸಿ 10 ಬೊಲಿವರ್.

ಕಾರಕಾಸ್: ಜಗತ್ತಿನಲ್ಲೇ ಅತ್ಯಂತ ಕೆಟ್ಟ ಆರ್ಥಿಕ ದುಸ್ಥಿತಿಯನ್ನು ಎದುರಿಸುತ್ತಿರುವ ದೇಶ ಎನ್ನುವ ಕುಖ್ಯಾತಿಗೆ ಪಾತ್ರವಾದ ವೆನಿಜುವೆಲ, 6 ಸೊನ್ನೆಗಳನ್ನು ತೆಗೆದುಹಾಕಿದ ಹೊಸ ಕರೆನ್ಸಿ ನೋಟನ್ನು ಬಿಡುಗಡೆಗೊಳಿಸಿದೆ.
ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಲು ಕರೆನ್ಸಿ ನೋಟುಗಳ ಮುದ್ರಣದ ಯೋಜನೆ ಇಲ್ಲ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಇದುವರೆಗೂ ವೆನಿಜುವೆಲ ದೇಶದಲ್ಲಿ ಲಭ್ಯವಿದ್ದ ಅತ್ಯಧಿಕ ಮೊತ್ತದ ಕರೆನ್ಸಿ ಎಂದರೆ 10 ಲಕ್ಷ ಬೊಲಿವರ್. ಇದೀಗ ನೂತನ ಕರೆನ್ಸಿ ಅದಕ್ಕೆ ಬದಲಿಯಾಗಿ ರೂಪಿಸಲಾಗಿರುವ ಕರೆನ್ಸಿ 10 ಬೊಲಿವರ್ ಎಂದು ಹೇಳಲಾಗುತ್ತಿದೆ. ಆದರೆ ನೂತನ ಕರೆನ್ಸಿಯ ಮೌಲ್ಯ 10 ಲಕ್ಷ ಬೊಲಿವರ್ ಗಳಿಗಿಂತ ಹೆಚ್ಚು.
10 ಲಕ್ಷ ಬೊಲಿವರ್ 1 ಡಾಲರ್ ಗೂ ಕಡಿಮೆ ಮೌಲ್ಯ ಹೊಂದಿತ್ತು. ಇದೀಗ ಬಿಡುಗಡೆಯಾಗಿರುವ ನೂತನ 10 ಬೊಲಿವರ್ ಕರೆನ್ಸಿ 25 ಡಾಲರ್ ಗಿಂತ ಕಡಿಮೆ ಮೌಲ್ಯವನ್ನು ಹೊಂದಿದೆ.
Related Article
ಫ್ರಾನ್ಸ್ ಮಾಜಿ ಅಧ್ಯಕ್ಷ ನಿಕೋಲಸ್ ಸರ್ಕೋಜಿಗೆ ಒಂದು ವರ್ಷ ಜೈಲು ಶಿಕ್ಷೆ
ಜರ್ಮನಿ: ಹಿಟ್ಲರನ ನಾಜಿ ಕಮಾಂಡರ್ ಪಿಎ ಆಗಿದ್ದ 96 ವರ್ಷದ ಮಹಿಳೆ ವಿಚಾರಣೆ: ಆರೋಪ ದಾಖಲಾದಾಗ ಆಕೆಗೆ 21
ಪಾಕಿಸ್ತಾನ: ಧರ್ಮ ನಿಂದನೆ ಎಸಗಿದ್ದ ಮಹಿಳೆಗೆ ಮರಣದಂಡನೆ
ಅಪರಿಚಿತನಿಂದ ರೋಹಿಂಗ್ಯಾ ನಿರಾಶ್ರಿತರ ನಾಯಕನನ್ನು ಗುಂಡಿಕ್ಕಿ ಹತ್ಯೆ: ಆಮ್ನೆಸ್ಟಿ ಖಂಡನೆ
ತೀವ್ರ ವಿದ್ಯುತ್ ಬಿಕ್ಕಟ್ಟು.. ಕತ್ತಲಲ್ಲಿ ಚೀನಾ!; ಕಾರ್ಖಾನೆಗಳಲ್ಲಿ ಪಾತಾಳಕ್ಕೆ ಕುಸಿದ ಉತ್ಪಾದನೆ
ವಿಮಾನ ಸಂಚಾರ ಪುನರಾರಂಭಿಸಲು ತಾಲಿಬಾನ್ ನಾಯಕತ್ವದ ಅಫ್ಘಾನಿಸ್ತಾನ ಸರ್ಕಾರ ಭಾರತಕ್ಕೆ ಮನವಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


