ಐರೋಪ್ಯ ಔಷಧ ನಿಯಂತ್ರಕ ಸಂಸ್ಥೆಯ ಒಪ್ಪಿಗೆಗೆ ಕಾದಿರುವ ಕೊರೋನಾ ಗುಳಿಗೆ
ಈ ತಿಂಗಳ ಆರಂಭದಲ್ಲಿ ಇದೇ ಗುಳಿಗೆಯ ಸಾರ್ವಜನಿಕ ಬಳಕೆಗೆ ಬ್ರಿಟನ್ ಒಪ್ಪಿಗೆ ನೀಡಿತ್ತು. ಆ ಮೂಲಕ ಮೊದಲ ಕೊರೊನಾ ಗುಳಿಗೆಗೆ ಅನುಮತಿ ನೀಡಿದ ಮೊದಲ ರಾಷ್ಟ್ರ ಎನ್ನುವ ಕೀರ್ತಿಗೆ ಬ್ರಿಟನ್ ಪಾತ್ರವಾಗಿತ್ತು.

ಆಮ್ ಸ್ಟರ್ ಡ್ಯಾಮ್: ಇದೇ ಮೊದಲ ಬಾರಿಗೆ ಔಷಧ ಸಂಸ್ಥೆಯೊಂದು ಕೊರೊನಾ ಚಿಕಿತ್ಸೆಯಲ್ಲಿ ಸಹಾಯವಾಗುವ ತನ್ನ ಗುಳಿಗೆಯ ಸಾರ್ವಜನಿಕ ಬಳಕೆಗೆ ಅನುಮತಿ ನೀದುವಂತೆ ಕೋರಿರುವ ವಿಷಯವನ್ನು ಐರೋಪ್ಯ ಔಷಧ ಸಂಸ್ಥೆ ಬಹಿರಂಗಪಡಿಸಿದೆ.
ಮರ್ಕ್ (Merck) ಎನ್ನುವ ಔಷಧ ಸಂಸ್ಥೆ ಮೊಲ್ನುಪಿರಾವಿರ್ (Molnupiravir) ಎನ್ನುವ ಕೊರೊನಾ ಗುಳಿಗೆಯನ್ನು ಅಭಿವೃದ್ಧಿಪಡಿಸಿದೆ. ಇದೀಗ ಐರೋಪ್ಯ ಔಷಧ ನಿಯಂತ್ರಕ ಸಂಸ್ಥೆಯ ಅನುಮತಿಗಾಗಿ ಕಾದಿದೆ.
ಕೊರೊನಾ ಪತ್ತೆಯಾದ 5 ದಿನಗಳ ಒಳಗೆ ಈ ಗುಳಿಗೆಯನ್ನು ರೋಗಿಗೆ ನೀಡಬೇಕು. ನಂತರದ 5 ದಿನಗಳ ಕಾಲ ದಿನಕ್ಕೆ ಎರಡು ಬಾರಿ ಈ ಗುಳಿಗೆಯನ್ನು ಸೇವಿಸಬೇಕು.
ಈ ಮಾತ್ರೆಯಿಂದ ಕೊರೊನಾ ಲಕ್ಷಣಗಳನ್ನು ಕಡಿಮೆ ಮಾಡುವುದಲ್ಲದೆ, ರೋಗಿಗಳು ಬೇಗನೆ ಗುಣಮುಖರಾಗುತ್ತಾರೆ ಎಂದು ಔಷಧ ಸಂಸ್ಥೆ ತಿಳಿಸಿದೆ. ಒಂದು ವೇಳೆ ಔಷಧ ಸಂಸ್ಥೆಯ ಈ ಭರವಸೆ ಸಾಬೀತಾದರೆ ಬೇಡಿಕೆ ಹೆಚ್ಚುವುದರಲ್ಲಿ ಸಂಶಯವಿಲ್ಲ.
ಈ ತಿಂಗಳ ಆರಂಭದಲ್ಲಿ ಇದೇ ಗುಳಿಗೆಯ ಸಾರ್ವಜನಿಕ ಬಳಕೆಗೆ ಬ್ರಿಟನ್ ಒಪ್ಪಿಗೆ ನೀಡಿತ್ತು. ಆ ಮೂಲಕ ಮೊದಲ ಕೊರೊನಾ ಗುಳಿಗೆಗೆ ಅನುಮತಿ ನೀಡಿದ ಮೊದಲ ರಾಷ್ಟ್ರ ಎನ್ನುವ ಕೀರ್ತಿಗೆ ಬ್ರಿಟನ್ ಪಾತ್ರವಾಗಿತ್ತು.
ಇದನ್ನೂ ಓದಿ: ಕೋವಿಡ್ ಸಮಯದಲ್ಲಿಯೂ 'ಸಲಗ' ಯಶಸ್ವಿಯಾಗಿರುವುದು ಪವಾಡ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


