ಅಂತರಿಕ್ಷದಲ್ಲಿ 200 ದಿನಗಳ ವಾಸ್ತವ್ಯದ ನಂತರ ಸ್ಪೇಸ್ ಎಕ್ಸ್ ಗಗನಯಾನಿಗಳು ಭೂಮಿಗೆ ವಾಪಸ್
ಹಿಂದಿರುಗುವ ವೇಳೆ ಅವರಿದ್ದ ನೌಕೆಯಲ್ಲಿ ಟಾಯ್ಲೆಟ್ ಕೆಟ್ಟು ಹೋಗಿತ್ತು. ಅದರಿಂದಾಗಿ ಶೌಚಕ್ಕೆ ಡಯಪರ್ ಬಳಸಬೇಕಾಗಿ ಬಂದಿತ್ತು. ಬಾಹ್ಯಾಕಾಶ ನಿಲ್ದಾಣದಿಂದ 8 ಗಂಟೆಗಳ ಸುದೀರ್ಘ ಪಯಣದ ನಂತರ ಸುರಕ್ಷಿತವಾಗಿ ವಾಪಸಾಗಿದ್ದಾರೆ.

ಕೇಪ್ ಕೆನೆವೆರಾಲ್: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತಿಂಗಳುಗಳಿಂದ ತಂಗಿದ್ದ ನಾಲ್ವರು ಸ್ಪೇಸ್ ಎಕ್ಸ್ ಗಗನಯಾನಿಗಳು ಭೂಮಿಗೆ ಸುರಕ್ಷಿತವಾಗಿ ಹಿಂದಿರುಗಿದ್ದಾರೆ. ನಾಲ್ವರು ಗಗನಯಾನಿಗಳು 200 ದಿನಗಳನ್ನು ಅಂತರಿಕ್ಷದಲ್ಲಿ ಕಳೆದಿದ್ದರು ಎನ್ನುವುದು ವಿಶೇಷ.
ಗಗನಯಾನಿಗಳಿದ್ದ ಕ್ಯಾಪ್ಸೂಲ್ ಗಲ್ಫ್ ಆಫ್ ಮೆಕ್ಸಿಕೊ ಪ್ರಾಂತ್ಯದಲ್ಲಿ ಭೂಮಿಯನ್ನು ಪ್ರವೇಶಿಸಿದೆ. ಪ್ರಖ್ಯಾತ ಎಲೆಕ್ಟ್ರಿಕ್ ಕಾರು ತಯಾರಿಕಾ ಸಂಸ್ಥೆ ಟೆಸ್ಲಾದ ಸ್ಥಾಪಕ ಎಲಾನ್ ಮಸ್ಕ್ ಒಡೆತನದ ಸಂಸ್ಥೆ ಸ್ಪೇಸ್ ಎಕ್ಸ್.
ನಾಲ್ವರು ಗಗನಯಾನಿಗಳು ಅಲ್ಲಿ ವಾಸ್ತವ್ಯ ಹೂಡಿದ್ದಾಗಲೇ ರಷ್ಯಾದ ಸಿನಿಮಾ ತಂಡ ಅಂತರಿಕ್ಷದಲ್ಲೇ ಸಿನಿಮಾ ಚಿತ್ರೀಕರಣ ನಡೆಸಲು ಬಾಹ್ಯಾಕಾಶ ನಿಲ್ದಾಣಕ್ಕೆ ಬಂದಿತ್ತು. ಅವರು 6 ತಿಂಗಳ ಕಾಲ ಅಲ್ಲಿ ತಂಗಲಿದ್ದಾರೆ.
ರಷ್ಯಾ ಸಿನಿಮಾ ತಂಡವನ್ನು ಬಾಹ್ಯಾಕಾಶ ನಿಲ್ದಾಣದಲ್ಲಿ ಹಿಂದೆ ಬಿಟ್ಟು ತಮ್ಮ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಾಲ್ವರು ಸ್ಪೇಸ್ ಎಕ್ಸ್ ಗಗನಯಾನಿಗಳು ವಾಪಸಾಗಿದ್ದಾರೆ.
ಹಿಂದಿರುಗುವ ವೇಳೆ ಅವರಿದ್ದ ನೌಕೆಯಲ್ಲಿ ಟಾಯ್ಲೆಟ್ ಕೆಟ್ಟು ಹೋಗಿತ್ತು. ಅದರಿಂದಾಗಿ ಶೌಚಕ್ಕೆ ಡಯಪರ್ ಬಳಸಬೇಕಾಗಿ ಬಂದಿತ್ತು. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ 8 ಗಂಟೆಗಳ ಸುದೀರ್ಘ ಪಯಣದ ನಂತರ ಸುರಕ್ಷಿತವಾಗಿ ವಾಪಸಾಗಿದ್ದಾರೆ.
Related Article
ಡ್ರೋನ್ ದಾಳಿ ಮೂಲಕ ಇರಾಕ್ ಪ್ರಧಾನಿ ಹತ್ಯೆ ಯತ್ನ: ಮೈನವಿರೇಳಿಸುವ ರೀತಿಯಲ್ಲಿ ಪಾರು
ತೈಲ ಟ್ಯಾಂಕರ್ ಪಲ್ಟಿ: ತೈಲಕ್ಕಾಗಿ ಮುಗಿಬಿದ್ದ ಜನ; ಈ ವೇಳೆ ಟ್ಯಾಂಕರ್ ಸ್ಫೋಟಗೊಂಡು ಕನಿಷ್ಠ 92 ಮಂದಿ ಸಜೀವದಹನ!
ಜರ್ಮನಿಯ ಹೈಸ್ಪೀಡ್ ರೈಲಿನಲ್ಲಿ ಚಾಕುವಿನಿಂದ ದಾಳಿ, ಹಲವರಿಗೆ ಗಾಯ
'ಸಕ್ಕರೆ ಬಾಂಬ್'ಗೆ ಜನ ಕಂಗಾಲ್: 1 ಕೆಜಿ ಸಕ್ಕರೆ ಬೆಲೆ ಪೆಟ್ರೋಲ್‌ಗಿಂತ ಹೆಚ್ಚು; ಇಮ್ರಾನ್ ಖಾನ್‌ಗೆ ಜನರ ಹಿಡಿ ಶಾಪ!
ವಾಯುಮಾಲಿನ್ಯ ಹೆಚ್ಚಳ: ದಟ್ಟ ಹೊಗೆಯಿಂದಾಗಿ ಚೀನಾದಲ್ಲಿ ಆಟದ ಮೈದಾನಗಳು, ಹೆದ್ದಾರಿಗಳು ಬಂದ್
ಶ್ವೇತ ಭವನದಲ್ಲಿ ದೀಪ ಬೆಳಗುವ ಮೂಲಕ ದೀಪಾವಳಿ ಶುಭಾಶಯ ಕೋರಿದ ಅಮೆರಿಕ ಅಧ್ಯಕ್ಷ ಜೋ ಬೈಡನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


