ವಾಯುಮಾಲಿನ್ಯ ಹೆಚ್ಚಳ: ದಟ್ಟ ಹೊಗೆಯಿಂದಾಗಿ ಚೀನಾದಲ್ಲಿ ಆಟದ ಮೈದಾನಗಳು, ಹೆದ್ದಾರಿಗಳು ಬಂದ್
ಕೆಲ ದಿನಗಳ ಹಿಂದಷ್ಟೆ ಜಾಗತಿಕ ತಾಪಮಾನ ಏರಿಕೆಯನ್ನು ತಡೆಗಟ್ಟಲು ಸ್ಕಾಟ್ ಲೆಂಡಿನಲ್ಲಿ COP26 ಸಭೆ ಕರೆಯಲಾಗಿತ್ತು. ಚೀನಾ ಅಧ್ಯಕ್ಷ ಶಿ ಜಿನ್ಪಿಂಗ್ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ.

ಬೀಜಿಂಗ್: ವಾಯುಮಾಲಿನ್ಯ ಹೆಚ್ಚಳದಿಂದಾಗಿ ಚೀನಾದ ಹೆದ್ದಾರಿಗಳು, ಆಟದ ಮೈದಾನಗಳು ಸ್ಥಗಿತಗೊಂಡಿವೆ. ಇತ್ತೀಚಿಗಷ್ಟೆ ಜಾಗತಿಕವಾಗಿ ವಾಯುಮಾಲಿನ್ಯ ಹೆಚ್ಚಳ ಕಂಡಿರುವ ವರದಿ ಪ್ರಕಟಗೊಂಡಿತ್ತು. ಅದರಲ್ಲಿ ವಾಯುಮಾಲಿನ್ಯ ಹೆಚ್ಚಳಕ್ಕೆ ಚೀನ ಅತ್ಯಧಿಕ ಕಾಣಿಕೆಯಿತ್ತಿರುವುದು ಕಂಡುಬಂದಿತ್ತು.
ಕೆಲ ದಿನಗಳ ಹಿಂದಷ್ಟೆ ಜಾಗತಿಕ ತಾಪಮಾನ ಏರಿಕೆಯನ್ನು ತಡೆಗಟ್ಟಲು ಸ್ಕಾಟ್ ಲೆಂಡಿನಲ್ಲಿ COP26 ಸಭೆ ಕರೆಯಲಾಗಿತ್ತು. ಭಾರತ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಜಗತ್ತಿನ ಬಹುತೇಕ ದೇಶಗಳ ನಾಯಕರು ಅದರಲ್ಲಿ ಪಾಲ್ಗೊಂಡಿದ್ದರು. ಆದರೆ ಚೀನಾ ಅಧ್ಯಕ್ಷ ಶಿ ಜಿನ್ಪಿಂಗ್ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ.
ಇದೀಗ ಚೀನಾದಲ್ಲಿ ಹೆಚ್ಚಿರುವ ವಾಯುಮಾಲಿನ್ಯಕ್ಕೆ ಪ್ರತಿಕೂಲ ಹವಾಮಾನ ಪರಿಸ್ಥಿತಿ ಕಾರಣ ಎಂದು ಚೀನಾ ಅಧಿಕಾರಿಗಳು ತೇಪೆ ಹಚ್ಚಲು ಯತ್ನಿಸಿದ್ದಾರೆ. ಆದರೆ ಕಲ್ಲಿದ್ದಲು ಉತ್ಪಾದನೆ ಹೆಚ್ಚಾಗಿರುವುದೇ ಇದಕ್ಕೆ ಕಾರಣ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ.
Related Article
ವಾಯು ಮಾಲಿನ್ಯದಿಂದ ಉತ್ತರ ಭಾರತದ ಜನರ ಆಯುಷ್ಯ 9 ವರ್ಷ ಕಡಿತ ಸಾಧ್ಯತೆ; ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ 11.5 ವರ್ಷ!
ರಾಜ್ಯದಲ್ಲಿ ಜನರೇಟರ್‌ಗಳಿಗೆ ಮಾಲಿನ್ಯ ನಿಯಂತ್ರಣ ಸಾಧನ ಅಳವಡಿಕೆ ಕಡ್ಡಾಯ
ಮಸೀದಿ, ಚರ್ಚ್, ಮಂದಿರ ಶಬ್ದ ಮಾಲಿನ್ಯ ಪರಿಶೀಲನೆ: ಆನಂದ್ ಸಿಂಗ್
ಸ್ಕ್ರಾಪೇಜ್ ನೀತಿಯು ಮಾಲಿನ್ಯ ತಗ್ಗಿಸಲು, ಪರಿಸರ ಸಂರಕ್ಷಿಸಲು ಸಹಾಯ ಮಾಡುತ್ತದೆ: ಪ್ರಧಾನಿ ಮೋದಿ
ಶಬ್ದ ಮಾಲಿನ್ಯ ನಿಯಮ ಉಲ್ಲಂಘನೆಗೆ ನವದೆಹಲಿಯಲ್ಲಿ ಭಾರೀ ದಂಡ!
ಬೆಂಗಳೂರಿನಲ್ಲಿ ಒಂದು ವರ್ಷದಲ್ಲಿ ನೈಟ್ರೋಜನ್ ಡೈಆಕ್ಸೈಡ್ ಮಾಲಿನ್ಯ ಶೇ.90 ರಷ್ಟು ಹೆಚ್ಚಳ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


