ವಿದೇಶ

ಎರಡನೇ ಮಗುವಿನ ನಿರೀಕ್ಷೆಯಲ್ಲಿ ಬ್ರಿಟಿಷ್ ಪ್ರಧಾನಿ ಬೋರಿಸ್ ದಂಪತಿ

ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಬೋರಿಸ್ ಜಾನ್ಸನ್ ಪತ್ನಿ ಕ್ಯಾರ್ರಿ(35) ಇನ್ಸ್ಟಾಗ್ರಾಮ್ ನಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಈ ಕ್ರಿಸ್ಮಸ್ ಗೆ ' ಮಳೆ ಬಿಲ್ಲು ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಎರಡನೇ ಮಗುವಿನ ನಿರೀಕ್ಷೆಯಲ್ಲಿ ಬ್ರಿಟಿಷ್ ಪ್ರಧಾನಿ ಬೋರಿಸ್ ದಂಪತಿ
ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತು ಕ್ಯಾರ್ರಿ
Published On :

ಲಂಡನ್: ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್  ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಬೋರಿಸ್ ಜಾನ್ಸನ್ ಪತ್ನಿ ಕ್ಯಾರ್ರಿ(35) ಇನ್ಸ್ಟಾಗ್ರಾಮ್ ನಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಈ ಕ್ರಿಸ್ಮಸ್ ಗೆ ರೇನ್ ಬೋ ಬೇಬಿ (ಮಳೆ ಬಿಲ್ಲು ಮಗು) ನಿರೀಕ್ಷೆಯಲ್ಲಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಮತ್ತೆ ಗರ್ಭಿಣಿಯಾಗಲು ಆಶೀರ್ವಾದ ಅನ್ನಿಸುತ್ತಿದೆ, ಮತ್ತೆ ಭೀತಿ ಕೂಡಾ ಇರುವುದಾಗಿ ಅವರು ಬರೆದುಕೊಂಡಿದ್ದಾರೆ. 2020ರಲ್ಲಿ ಮಗ ವಿಲ್ಫ್ರೆಡ್ ಗೆ ಕ್ಯಾರ್ರಿ  ಜನ್ಮ ನೀಡಿದ್ದರು. ನವಜಾತ ಮಗು ಮೃತಪಟ್ಟ ಬಳಿಕ ಹುಟ್ಟುವ ಮಗುವಿಗೆ 'ಮಳೆ ಬಿಲ್ಲು ಮಗು ಎಂದು ಕರೆಯಲಾಗುತ್ತದೆ.

ವರ್ಷದ ಆರಂಭದಲ್ಲಿ, ನನಗೆ ಗರ್ಭಪಾತವಾಯಿತು, ಅದು ನನ್ನ ಹೃದಯವನ್ನು ಮುರಿದಿತ್ತು. ನಾನು ಮತ್ತೆ ಗರ್ಭಿಣಿಯಾಗಲು ನಂಬಲಾಗದಷ್ಟು ಆಶೀರ್ವಾದ ಅಂದುಕೊಳ್ಳುತ್ತೇನೆ. ಆದರೆ, ಭೀತಿಯೂ ಕೂಡಾ ಸಾಕಷ್ಟಿದೆ ಎಂದಿದ್ದಾರೆ.

ಗರ್ಭಪಾತ ಸಮಸ್ಯೆ ಅನೇಕ ಜನರಿಗೆ ನಿಜವಾಗಿಯೂ ಕಷ್ಟವಾಗಬಹುದು, ವಿಶೇಷವಾಗಿ ಇನ್ಸ್ಟಾಗ್ರಾಮ್ ನಂತಹ ವೇದಿಕೆಗಳಲ್ಲಿ ಎಲ್ಲವೂ ಎಂದೆಂದಿಗೂ ಚೆನ್ನಾಗಿ ನಡೆಯುತ್ತಿರುವಂತೆ ಕಾಣಿಸಬಹುದು. ನಷ್ಟವನ್ನು ಅನುಭವಿಸಿದ್ದವರಿಂದ ಕೇಳಿದಾಗ ನಿಜಕ್ಕೂ ಸಾಂತ್ವನ ಸಿಕ್ಕಿತ್ತು. ಹಾಗಾಗಿ ಕೆಲವು ಸಣ್ಣ ರೀತಿಯಲ್ಲಿ ಹಂಚಿಕೊಳ್ಳುವುದರಿಂದ ಇತರರಿಗೂ ಸಹಾಯವಾಗಬಹುದು ಎಂದು ನಾನು ಭಾವಿಸುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ. ಇದೇ ವರ್ಷದ ಮೇ ತಿಂಗಳಲ್ಲಿ ಬೋರಿಸ್ ಮತ್ತು ಕ್ಯಾರ್ರಿ ವಿವಾಹವಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.