ಪಾಕಿಸ್ತಾನದಲ್ಲಿ 2300 ವರ್ಷಗಳಷ್ಟು ಹಳೇಯ ಬುದ್ಧನ ದೇವಾಲಯ ಪತ್ತೆ
ಪಾಕಿಸ್ತಾನದಲ್ಲಿ ಉತ್ಖನನ ಸಂದರ್ಭದಲ್ಲಿ 2300 ವರ್ಷಗಳಷ್ಟು ಹಳೆಯದಾದ ಬುದ್ಧನ ದೇವಾಲಯ ಹಾಗೂ ಉಂಗುರ ಮತ್ತು ನಾಣ್ಯದ ನಿಧಿ ಬೆಳಕಿಗೆ ಬಂದಿದೆ. ಇದು ಸ್ಥಳೀಯ ಜನರು ಅಚ್ಚರಿಗೊಳಗಾಗುವಂತೆ ಮಾಡಿದೆ.

ಪಾಕಿಸ್ತಾನ: ಪಾಕಿಸ್ತಾನದಲ್ಲಿ ಉತ್ಖನನ ಸಂದರ್ಭದಲ್ಲಿ 2300 ವರ್ಷಗಳಷ್ಟು ಹಳೆಯದಾದ ಬುದ್ಧನ ದೇವಾಲಯ ಹಾಗೂ ಉಂಗುರ ಮತ್ತು ನಾಣ್ಯದ ನಿಧಿ ಬೆಳಕಿಗೆ ಬಂದಿದೆ. ಇದು ಸ್ಥಳೀಯ ಜನರು ಅಚ್ಚರಿಗೊಳಗಾಗುವಂತೆ ಮಾಡಿದೆ.
ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಸ್ವಾತ್ ಜಿಲ್ಲೆಯ ಬರಿಕೋಟೆ ತಹಸಿಲ್‌ನ ಬಾಜಿರಾ ಪಟ್ಟಣದಲ್ಲಿ ಈ ಬುದ್ಧ ದೇವಾಲಯವು ಕಂಡುಬಂದಿದೆ. ಈ ನಿಟ್ಟಿನಲ್ಲಿ, ಹಿರಿಯ ಅಧಿಕಾರಿಯೊಬ್ಬರು, “ಪಾಕಿಸ್ತಾನ ಮತ್ತು ಇಟಲಿಯ ಪುರಾತತ್ವಶಾಸ್ತ್ರಜ್ಞರು ವಾಯುವ್ಯ ಪಾಕಿಸ್ತಾನದ ಐತಿಹಾಸಿಕ ಸ್ಥಳದಲ್ಲಿ ಜಂಟಿ ಉತ್ಖನನದ ಸಮಯದಲ್ಲಿ 2300 ವರ್ಷಗಳಷ್ಟು ಹಳೆಯದಾದ ಬೌದ್ಧ ದೇವಾಲಯವನ್ನು ಕಂಡುಹಿಡಿದಿದ್ದಾರೆ.
ದೇವಾಲಯದ ಹೊರತಾಗಿ, ಪುರಾತತ್ತ್ವಜ್ಞರು ಕಂಡುಹಿಡಿದ 2,700 ಬೌದ್ಧ ಕಲಾಕೃತಿಗಳಲ್ಲಿ ನಾಣ್ಯಗಳು, ಉಂಗುರಗಳು, ಪಾತ್ರೆಗಳು ಮತ್ತು ಗ್ರೀಸ್‌ನ ರಾಜ ಮಿನಾಂದಾರ್‌ನ ಕಾಲದ ಖರೋಷ್ಠಿ ಭಾಷೆಯಲ್ಲಿ ಬರೆಯಲಾದ ವಸ್ತುಗಳು ಸೇರಿವೆ. ಸ್ವಾತ್ ಜಿಲ್ಲೆಯ ಐತಿಹಾಸಿಕ ನಗರವಾದ ಬಾಜಿರಾದಲ್ಲಿ ಉತ್ಖನನದ ಸಮಯದಲ್ಲಿ ಹೆಚ್ಚಿನ ಪುರಾತತ್ತ್ವ ಶಾಸ್ತ್ರದ ಸ್ಥಳಗಳನ್ನು ಕಾಣಬಹುದು ಎಂದು ಇಟಾಲಿಯನ್ ತಜ್ಞರ ಅಭಿಪ್ರಾಯ.
ಈ ಹಿಂದೆ 2020 ರಲ್ಲಿ ಇಲ್ಲಿ ವಿಷ್ಣು ದೇವಾಲಯದ ಅವಶೇಷಗಳು ಕಂಡುಬಂದಿದ್ದವು. ಪಾಕಿಸ್ತಾನದಲ್ಲಿ ಇಂತಹ ಪುರಾತನ ದೇವಾಲಯಗಳ ಅವಶೇಷಗಳು ಕಂಡುಬಂದಿರುವುದು ಇದೇ ಮೊದಲಲ್ಲವಾದರೂ, 2020 ರ ಆರಂಭದಲ್ಲಿ, ಪಾಕಿಸ್ತಾನದ ಸ್ವಾತ್ ಜಿಲ್ಲೆಯಲ್ಲಿ ಉತ್ಖನನದ ಸಮಯದಲ್ಲಿ, ಪುರಾತತ್ತ್ವಜ್ಞರು ವಿಷ್ಣು ದೇವಾಲಯದ ಅವಶೇಷಗಳನ್ನು ಕಂಡುಕೊಂಡರು.
ಈ ದೇವಾಲಯದ ಅವಶೇಷಗಳು ಕನಿಷ್ಠ 1,000 ವರ್ಷಗಳಷ್ಟು ಹಳೆಯದಾದ ಹಿಂದೂ ದೇವಾಲಯವಿದೆ ಎಂದು ತೋರಿಸಿದೆ. ಅದನ್ನು ಪಾಕಿಸ್ತಾನ ಮತ್ತು ಇಟಲಿಯ ಪುರಾತತ್ವಶಾಸ್ತ್ರಜ್ಞರ ಜಂಟಿ ತಂಡವು ಕಂಡುಹಿಡಿದಿತ್ತು. ಈ ದೇವಾಲಯದ ಅವಶೇಷಗಳನ್ನು ಬಾರಿಕೋಟ್ ಘುಂಡೈ ಬೆಟ್ಟಗಳ ನಡುವೆ ಉತ್ಖನನ ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


