ಒಂದೇ ವಿಡಿಯೊ ಕಾಲ್ ಮೂಲಕ 900 ಉದ್ಯೋಗಿಗಳನ್ನು ಕಿತ್ತುಹಾಕಿದ್ದ ಭಾರತೀಯ ಮೂಲದ ಸಿಇಒ ಕ್ಷಮೆಯಾಚನೆ
3 ನಿಮಿಷ ಅವಧಿಯ ಜೂಂ ಕಾಲ್ ವಿಡಿಯೊ ಜಗತ್ತಿನಾದ್ಯಂತ ವೈರಲ್ ಆಗಿತ್ತು. ಸಿಇಒ ಗಾರ್ಗ್ ಅವರಿಗೆ ಕೊಂಚವೂ ಮಾನವೀಯತೆಯೇ ಇಲ್ಲ ಎನ್ನುವ ಆರೋಪವನ್ನು ಅಸಂಖ್ಯ ಮಂದಿ ಮಾಡಿದ್ದರು.

ನವದೆಹಲಿ. ಅಮೆರಿಕದ ಬೆಟರ್.ಕಾಂ ಸಂಸ್ಥೆಯ ಸಿಇಒ, ಭಾರತೀಯ ಮೂಲದ ಗಾರ್ಗ್ ಕಡೆಗೂ ತಮ್ಮ ಕೃತ್ಯಕ್ಕೆ ಕ್ಷಮೆಯಾಚಿಸಿದ್ದಾರೆ. 900 ಮಂದಿ ಸಂಸ್ಥೆಯ ಉದ್ಯೋಗಿಗಳನ್ನು 3 ನಿಮಿಷ ಅವಧಿಯ ಜೂಮ್ ಕಾಲ್ ಮೂಲಕ ಕಿತ್ತು ಹಾಕಿದ್ದರು.

ಈ ಜೂಂ ಕಾಲ್ ವಿಡಿಯೊ ಜಗತ್ತಿನಾದ್ಯಂತ ವೈರಲ್ ಆಗಿತ್ತು. ಸಿಇಒ ಗಾರ್ಗ್ ಅವರಿಗೆ ಕೊಂಚವೂ ಮಾನವೀಯತೆಯೇ ಇಲ್ಲ ಎನ್ನುವ ಆರೋಪವನ್ನು ಅಸಂಖ್ಯ ಮಂದಿ ಮಾಡಿದ್ದರು.
ಇದೀಗ ಗಾರ್ಗ್ ತಮ್ಮ ತಪ್ಪಿಗೆ ಕ್ಷಮೆ ಯಾಚಿಸಿದ್ದಾರೆ. ಸಂಸ್ಥೆಯ ಏಳಿಗೆಗಾಗಿ ದುಡಿದ ಮಂದಿಯನ್ನು ತಾವು ಚೆನ್ನಾಗಿ ನಡೆಸಿಕೊಳ್ಳಬೇಕಿತ್ತು. ಕನಿಷ್ಟ ಪಕ್ಷ ಕೆಲಸದಿಂದ ತೆಗೆದುಹಾಕುವ ವೇಳೆ ಬೇರೆ ರೀತಿಯ ಮಾನವೀಯ ದಾರಿಯನ್ನು ಹಿಡಿಯಬಹುದಾಗಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


