ಜಪಾನ್: ಸೈಬರ್ ವಂಚಕರಿಂದ 721 ಕೋಟಿ ರೂ. ಮೌಲ್ಯದ ಕ್ರಿಪ್ಟೊ ಕರೆನ್ಸಿ ಕಳವು
ಕಳೆದ ವಾರ ಪಾಲಿ ನೆಟ್ ವರ್ಕ್ ಎಂಬ ಕ್ರಿಪ್ಟೊ ಕರೆನ್ಸಿ ಸಂಸ್ಥೆಯ ಕಂಪ್ಯೂಟರ್ ಗಳ ಮೇಲೆ ದಾಳಿ ನಡೆಸಿದ್ದ ಹ್ಯಾಕರ್ ಗಳು 4,400 ಕೋಟಿ ಕಳವು ಮಾಡಿದ್ದರು.ನಂತರ ಕಳವು ಮಾಡಿದ ಮೊತ್ತವನ್ನು ಹ್ಯಾಕರ್ ಗಳೇ ಹಿಂತಿರುಗಿಸಿದ್ದರು.

ಟೊಕಿಯೊ: ಜಪಾನಿ ಕ್ರಿಪ್ಟೊ ಕರೆನ್ಸಿ ವಿನಿಮಯ ಕೇಂದ್ರವೊಂದರಿಂದ ಹ್ಯಾಕರ್ ಗಳು 721 ಕೋಟಿ ರೂ. ಮೌಲ್ಯದ ಕ್ರಿಪ್ಟೊ ಕರೆನ್ಸಿಯನ್ನು ಕಳವು ಮಾಡಿರುವ ಘಟನೆ ನಡೆದಿದೆ. ಲಿಕ್ವಿಡ್ ಎನ್ನುವ ಸಂಸ್ಥೆಯಲ್ಲಿ ಈ ಭಾರೀ ಮೊತ್ತದ ಕಳವು ನಡೆದಿದೆ. ಇತ್ತೀಚಿನ ದಿನಗಳಲ್ಲಿ ನಡೆದ ಎರಡನೇ ಕಳವು ಪ್ರಕರಣ ಇದಾಗಿದೆ.
ಕ್ರಿಪ್ಟೊ ಕರೆನ್ಸಿಯನ್ನು ಸಂಗ್ರಹಿಸಿ ಇಡಲಾಗಿದ್ದ ವ್ಯಾಲೆಟ್ ನಲ್ಲಿ ಅನಧಿಕೃತ ಬಳಕೆದಾರ ಅಕ್ರಮವಾಗಿ ಹ್ಯಾಕ್ ಮಾಡುವ ಮೂಲಕ ಪ್ರವೇಶ ಪಡೆದಿರುವುದು ತಜ್ನರ ಗಮನಕ್ಕೆ ಬಂದಿತ್ತು. ಈ ಸಂಬಂಧ ಪರಿಶೀಲನೆ ನಡೆಸಿದಾಗ ಒಟ್ಟು 721 ಕೋಟಿ ರೂ. ಮೌಲ್ಯದ ಸಂಪತ್ತು ಕಳವಾಗಿರುವುದು ಪತ್ತೆಯಾಗಿತ್ತು.
ಕಳೆದ ವಾರ ಪಾಲಿ ನೆಟ್ ವರ್ಕ್ ಎಂಬ ಕ್ರಿಪ್ಟೊ ಕರೆನ್ಸಿ ಸಂಸ್ಥೆಯ ಕಂಪ್ಯೂಟರ್ ಗಳ ಮೇಲೆ ದಾಳಿ ನಡೆಸಿದ್ದ ಹ್ಯಾಕರ್ ಗಳು 4,400 ಕೋಟಿ ಮೌಲ್ಯದ ಸಂಪತ್ತನ್ನು ಕಳವು ಮಾಡಿದ್ದರು. ಆದರೆ ಕೆಲ ಸಮಯ ನಂತರ ಕಳವು ಮಾಡಿದ ಹ್ಯಾಕರ್ ಗಳೇ ಆ ಮೊತ್ತವನ್ನು ಹಿಂತಿರುಗಿಸಿ, ತಮ್ಮ ಉದ್ದೇಶ ಕಲವು ಮಾಡುವುದಲ್ಲ ಜಾಗೃತಿ ಮೂಡಿಸುವುದು ಎಂಬ ಸಂದೇಶ ಕಳಿಸಿದ್ದರು.
ಆ ಹ್ಯಾಕರ್ ಗಳು ಪಾಲಿ ನೆಟ್ ವರ್ಕ್ ಕ್ರಿಪ್ಟೊ ಕರೆನ್ಸಿ ಕೇಂದ್ರದ ಭದ್ರತಾ ವ್ಯವಸ್ಥೆಯಲ್ಲಿನ ಲೋಪವನ್ನು ಪತ್ತೆ ಹಚ್ಚಿ ಸೈಬರ್ ದಾಳಿ ನಡೆಸಿದ್ದರು. ಈ ರೀತಿಯ ಲೋಪವನ್ನು ಮುಂದೆ ಆಗದಂತೆ ಎಚ್ಚರ ವಹಿಸಿ ಎಂದು ಹ್ಯಾಕರ್ ಗಳು ತಿಳಿಸಿದ್ದರು. ಆ ಘಟನೆ ಮಾಸುವ ಮೊದಲೇ ಜಪಾನ್ ನಲ್ಲಿ ಲಿಕ್ವಿಡ್ ಕ್ರಿಪ್ಟೊ ಕರೆನ್ಸಿ ವಿನಿಮಯ ಕೇಂದ್ರದ ಮೇಲೆ ಸೈಬರ್ ದಾಳಿ ನಡೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


