ವಿದೇಶ

ಉಕ್ರೇನ್‌: ಲ್ಯಾಂಡಿಂಗ್ ವೇಳೆ ಸೇನಾ ವಿಮಾನ ಪತನ; 22 ಮಂದಿ ದುರ್ಮರಣ, ನಾಲ್ವರು ನಾಪತ್ತೆ

ಸೇನಾ ವಿಮಾನವೊಂದು ಲ್ಯಾಂಡಿಂಗ್‌ ನಡೆಸುವ ವೇಳೆ ಪತನವಾದ ಕಾರಣ ತರಬೇತಿ ಪಡೆದ ವಾಯುಸೇನೆಯ ಕನಿಷ್ಠ 22 ಯುವ ವಿದ್ಯಾರ್ಥಿಗಳು ಸಾವನಪ್ಪಿರುವ ಘಟನೆ ಉಕ್ರೇನ್‌ನ ಖಾರ್ಕಿವ್‌ ಬಳಿ ನಡೆದಿದೆ

ಉಕ್ರೇನ್‌: ಲ್ಯಾಂಡಿಂಗ್ ವೇಳೆ ಸೇನಾ ವಿಮಾನ ಪತನ; 22 ಮಂದಿ ದುರ್ಮರಣ, ನಾಲ್ವರು ನಾಪತ್ತೆ
ಸಾಂದರ್ಭಿಕ ಚಿತ್ರ
Published On :

ಕೇವ್ : ಸೇನಾ ವಿಮಾನವೊಂದು ಲ್ಯಾಂಡಿಂಗ್‌ ನಡೆಸುವ ವೇಳೆ ಪತನವಾದ ಕಾರಣ ತರಬೇತಿ ಪಡೆದ ವಾಯುಸೇನೆಯ ಕನಿಷ್ಠ 22 ಯುವ ವಿದ್ಯಾರ್ಥಿಗಳು ಸಾವನಪ್ಪಿರುವ ಘಟನೆ ಉಕ್ರೇನ್‌ನ ಖಾರ್ಕಿವ್‌ ಬಳಿ ನಡೆದಿದೆ. 

ಉಕ್ರೇನ್ ರಾಜಧಾನಿ ಕೈವ್‍ನಿಂದ ಸುಮಾರು 400 ಕಿ.ಮೀ. ದೂರವಿರುವ ಚುಹುಯಿವ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ನಡೆಸುವ ವೇಳೆ ಈ ಅವಘಡ ಸಂಭವಿಸಿದೆ.

ಆಂಟೊನೊವ್ -26 ಎಂಬ ಹೆಸರಿನ ಸೇನಾ ವಿಮಾನ ಇದಾಗಿದ್ದು ಪತನದ ತೀವ್ರತೆ ಭಾರೀ ಬೆಂಕಿ ಸಂಭವಿಸಿದ್ದು, 22 ಮಂದಿ ಸಜೀವ ದಹನರಾಗಿದ್ದಾರೆ ಎಂದು ಅಲ್ಲಿನ ಸರಕಾರ ಮಾಹಿತಿ ನೀಡಿದೆ. ಇನ್ನು ಈ ವಿಮಾನದಲ್ಲಿ ಒಟ್ಟು 27 ಮಂದಿಯಿದ್ದು ಈ ಪೈಕಿ 22 ಮಂದಿ ಸಾವನಪ್ಪಿದ್ದಾರೆ. ನಾಲ್ಕು ಮಂದಿ ನಾಪತ್ತೆಯಾಗಿದ್ದು ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಇಬ್ಬರಿಗೆ ಗಂಭಿರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಮೂರು ಮಂದಿಗಾಗಿ ಹುಡುಕಾಟ ಆರಂಭವಾಗಿದೆ ಎಂದು ತುರ್ತು ಸಚಿವಾಲಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.