ವಿದೇಶ

ಚೀನಾದಿಂದ ಐದು ಸರಕುಗಳ ಆಮದಿಗೆ ಅಮೆರಿಕಾ ನಿರ್ಬಂಧ!

ಕಂಪ್ಯೂಟರ್-ಭಾಗಗಳು, ಹತ್ತಿ ಮತ್ತು ಕೂದಲಿನ ಉತ್ಪನ್ನಗಳು ಸೇರಿದಂತೆ ಚೀನಾದಿಂದ ಐದು ಸರಕುಗಳನ್ನು ಆಮದು ಮಾಡಿಕೊಳ್ಳುವುದನ್ನು ಅಮೆರಿಕಾ ನಿಷೇಧಿಸಿದೆ.

ಚೀನಾದಿಂದ ಐದು ಸರಕುಗಳ ಆಮದಿಗೆ ಅಮೆರಿಕಾ ನಿರ್ಬಂಧ!
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Published On :

ವಾಷಿಂಗ್ಟನ್: ಕಂಪ್ಯೂಟರ್-ಭಾಗಗಳು, ಹತ್ತಿ ಮತ್ತು ಕೂದಲಿನ ಉತ್ಪನ್ನಗಳು ಸೇರಿದಂತೆ ಚೀನಾದಿಂದ ಐದು ಸರಕುಗಳನ್ನು ಆಮದು ಮಾಡಿಕೊಳ್ಳುವುದನ್ನು ಅಮೆರಿಕಾ ನಿಷೇಧಿಸಿದೆ.

ಮುಸ್ಲಿಂ ಬಹುಸಂಖ್ಯಾತ ಕ್ಸಿನ್‌ಜಿಯಾಂಗ್ ಪ್ರಾಂತ್ಯದಲ್ಲಿನ ಬಂಧಿತ  ಕಾರ್ಮಿಕ ಶಿಬಿರಗಳಲ್ಲಿ ಅವುಗಳನ್ನು ಉತ್ಪಾದಿಸಲಾಗುತ್ತಿದೆ ಎಂದು ಅಮೆರಿಕಾ ಆರೋಪಿಸಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ ಜಗತ್ತಿನಾದ್ಯಂತ ಸೋಂಕು ಹರಡುವಿಕೆಗೆ ಚೀನಾ ಕಾರಣ ಎಂದು ಡೊನಾಲ್ಡ್ ಟ್ರಂಪ್ ಬಹಿರಂಗವಾಗಿ ದೂಷಿಸುವುದರೊಂದಿಗೆ ಅಮೆರಿಕಾ- ಚೀನಾ ನಡುವಣ ಸಂಬಂಧ ಕ್ಷೀಣಿಸಿದೆ.

 ಕ್ಸಿನ್‌ಜಿಯಾಂಗ್ ಪ್ರಾಂತ್ಯದಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆ, ಹಾಂಗ್ ಕಾಂಗ್, ಟಿಬೆಟ್, ಸ್ವಾತಂತ್ರ್ಯ, ತಂತ್ರಜ್ಞಾನ ಕಳವು ಮತ್ತಿತರ ಆರೋಪಗಳಿಂದಲೂ ಉಭಯ ದೇಶಗಳ ನಡುವಣ ಸಂಬಂಧ ಮತ್ತಷ್ಟು ಹದಗೆಟ್ಟಿದೆ.

 ಕ್ಸಿನ್‌ಜಿಯಾಂಗ್ ಪ್ರಾಂತ್ಯದಲ್ಲಿನ  ನಾಲ್ಕು 4 ವೃತ್ತಿಪರ ಕೌಶಲ್ಯ ಶಿಕ್ಷಣ ಮತ್ತು ತರಬೇತಿ ಕೇಂದ್ರಗಳಲ್ಲಿ ಬಂಧಿತ ಕಾರ್ಮಿಕರಿಂದ ಉತ್ಪಾದಿಸಲಾಗಿರುವ ಹತ್ತಿ, ಅಫೆರೆಲ್, ಕಂಪ್ಯೂಟರು ಭಾಗಗಳು ಮತ್ತು ಕೂದಲಿನ ಉತ್ಪನ್ನಗಳನ್ನು ನಿಷೇಧಿಸಲಾಗಿದೆ ಎಂದು ಅಮೆರಿಕಾದ ಒಳಾಡಳಿತ ಭದ್ರತಾ ಇಲಾಖೆ ( ಡಿಪಾರ್ಟ್ ಮೆಂಟ್ ಆಫ್ ಹೋಮ್ ಲ್ಯಾಂಡ್ ಸೆಕ್ಯೂರಿಟಿ) ಹೇಳಿಕೆಯಲ್ಲಿ ತಿಳಿಸಿದೆ.

ಚೀನಾ ಸರ್ಕಾರದಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವ ಕ್ಸಿನ್‌ಜಿಯಾಂಗ್ ಉಯಿಗೂರ್ ಸ್ವಾಯತ್ತ ಪ್ರದೇಶದಲ್ಲಿನ ರಾಜ್ಯ ಪ್ರಯೋಜಿತ ಕಾರ್ಮಿಕರಿಂದ ಈ ಸರಕುಗಳನ್ನು ಉತ್ಪಾದಿಸಲಾಗುತ್ತಿದೆ ಎಂದು ಅಮೆರಿಕಾ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.