ರಷ್ಯಾದ ಕೋವಿಡ್-19 ಲಸಿಕೆ ಪ್ರತಿರೋಧ ಪ್ರಕ್ರಿಯೆಯನ್ನು ಉತ್ತೇಜಿಸುತ್ತದೆ: ಲ್ಯಾನ್ಸೆಟ್
ರಷ್ಯಾದ ಕೋವಿಡ್-19 ಲಸಿಕೆ ಪ್ರಕ್ರಿಯೆಯನ್ನು ಉತ್ತೇಜಿಸುತ್ತದೆ ಎಂದು "ದಿ ಲ್ಯಾನ್ಸೆಟ್" ಹೇಳಿದೆ.

ನವದೆಹಲಿ: ರಷ್ಯಾದ ಕೋವಿಡ್-19 ಲಸಿಕೆ ಪ್ರಕ್ರಿಯೆಯನ್ನು ಉತ್ತೇಜಿಸುತ್ತದೆ ಎಂದು "ದಿ ಲ್ಯಾನ್ಸೆಟ್" ಹೇಳಿದೆ.
ಸ್ಪುಟ್ನಿಕ್ V, ವಿಶ್ವದ ಮೊದಲ ಕೋವಿಡ್-19 ಲಸಿಕೆಯನ್ನು ದಾಖಲಿಸಿದ ಮೂರು ವಾರಗಳ ನಂತರ ಕ್ಲಿನಿಕಲ್ ಟ್ರಯಲ್ ಗಳ ಫಲಿತಾಂಶ ಬರತೊಡಗಿದ್ದು, ಆರಂಭಿಕ ಹಂತದ ಕ್ಲಿನಿಕಲ್ ಪ್ರಯೋಗಗಳು "ದಿ ಲ್ಯಾನ್ಸೆಟ್" ನಲ್ಲಿ ಪ್ರಕಟಗೊಂಡಿದ್ದು, ಒಳ್ಳೆಯ ಸುರಕ್ಷತಾ ಪ್ರೊಫೈಲ್ ನ್ನು ಹೊಂದಿದ್ದು, 42 ದಿನಗಳ ಟ್ರಯಲ್ ನಲ್ಲಿ ಯಾವುದೇ ಗಂಭೀರ ಪ್ರತಿಕೂಲ ಪರಿಣಾಮಗಳೂ ಗೋಚರಿಸಿಲ್ಲ ಎಂದು ಹೇಳಿದೆ. ಕ್ಲಿನಿಕಲ್ ಟ್ರಯಲ್ ಗಳಲ್ಲಿ ಲಸಿಕೆ ಪ್ರತಿರೋಧಗಳ ಪ್ರಕ್ರಿಯೆಯನ್ನು 21 ದಿನಗಳ ಒಳಗಾಗಿ ಉತ್ತೇಜಿಸುತ್ತದೆ ಎಂದು ಹೇಳಿದೆ.
ಈ ಕ್ಲಿನಿಕಲ್ ಟ್ರಯಲ್ ಗಳ ಬೆನ್ನಲ್ಲೇ ಸ್ಪುಟ್ನಿಕ್ V 40,000 ಜನರನ್ನೊಳಗೊಂಡ ಅತಿ ದೊಡ್ಡ ಟ್ರಯಲ್ ಗೆ ಸಜ್ಜುಗೊಂಡಿದ್ದು, ಅಕ್ಟೋಬರ್ ವೇಳೆಗೆ ಅತಿ ಹೆಚ್ಚು ರಿಸ್ಕ್ ಇರುವ ರೋಗಿಗಳಿಗೆ ಇದನ್ನು ನೀಡಬಹುದಾಗಿದ್ದು, ಇದು ಭಾರತಕ್ಕೂ ಸಹಕಾರಿಯಾಗುವ ನಿರೀಕ್ಷೆ ಇದೆ. ಲಸಿಕೆಯನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಲು ರಷ್ಯ ಸರ್ಕಾರ ಭಾರತದ ಜೊತೆಗೆ ಮಾತುಕತೆ ನಡೆಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


