ದೇಶರಷ್ಯಾದ ಕೋವಿಡ್ -19 ಲಸಿಕೆಯ 3ನೇ ಹಂತದ ಪ್ರಯೋಗ ಭಾರತದಲ್ಲಿ ನಡೆಸಲು ಕೇಂದ್ರ ಚಿಂತನೆ: ನೀತಿ ಆಯೋಗದ ಸದಸ್ಯ
ರಷ್ಯಾ ಕಂಡುಹಿಡಿದಿರುವ ಕೋವಿಡ್ -19 ಲಸಿಕೆ 'ಸ್ಪುಟ್ನಿಕ್ ವಿ' ಯ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಅನ್ನು ಭಾರತದಲ್ಲಿ ನಡೆಸಲು ಅವಕಾಶ ನೀಡಬೇಕು ಎಂಬ ರಷ್ಯಾ ಸರ್ಕಾರದ ಮನವಿಯನ್ನು ಕೇಂದ್ರ ಸರ್ಕಾರ ಪರಿಗಣಿಸುತ್ತಿದೆ ಎಂದು ನೀತಿ ಆಯೋಗದ ಸದಸ್ಯರೊಬ್ಬರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.