ಜೋ ಬೈಡನ್ ಗೆಲುವು ಮಾನ್ಯ ಮಾಡಲು ಸಿದ್ಧವಿಲ್ಲ: ವ್ಲಾಡಿಮಿರ್ ಪುಟಿನ್
ಅಮೆರಿಕಾದ ಯಾವ ನಾಯಕನೊಂದಿಗಾದರೂ ತಾವು ಕಾರ್ಯನಿರ್ವಹಿಸಲು ಸಿದ್ದ ಎಂದಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆದರೆ, ಅಮೆರಿಕಾ ಹೊಸ ಅಧ್ಯಕ್ಷರಾಗಿ ಜೋ ಬೈಡನ್ ಅವರ ಗೆಲುವನ್ನು ಮಾನ್ಯ ಮಾಡಲು ತಾವು ಸಿದ್ಧರಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮಾಸ್ಕೋ: ಅಮೆರಿಕಾದ ಯಾವ ನಾಯಕನೊಂದಿಗಾದರೂ ತಾವು ಕಾರ್ಯನಿರ್ವಹಿಸಲು ಸಿದ್ದ ಎಂದಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆದರೆ, ಅಮೆರಿಕಾ ಹೊಸ ಅಧ್ಯಕ್ಷರಾಗಿ ಜೋ ಬೈಡನ್ ಅವರ ಗೆಲುವನ್ನು ಮಾನ್ಯ ಮಾಡಲು ತಾವು ಸಿದ್ಧರಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಜನರ ವಿಶ್ವಾಸ ಹೊಂದಿರುವ ನಾಯಕ ಚುನಾವಣೆಯಲ್ಲಿ ಗೆಲ್ಲುತ್ತಾನೆ ಎಂದು ಪುಟಿನ್ ಹೇಳಿದ್ದಾರೆ. ಆ ಗೆಲುವನ್ನು ಪ್ರತಿಪಕ್ಷಗಳು ಸಹ ಒಪ್ಪಬೇಕು. ಫಲಿತಾಂಶನ್ನು ಕಾನೂನುಬದ್ಧವಾಗಿ ಪ್ರಕಟಿಸಿದರೆ ಅದನ್ನು ನಾವು ಮಾನ್ಯ ಮಾಡುವುದಾಗಿ ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ ಹಾಗೂ ಪುಟಿನ್ ಆಪ್ತರು ಎಂಬ ಪ್ರಚಾರ ನಡೆಯುತ್ತಿದೆ. ಜೋ ಬಿಡೆನ್ ಅಮೆರಿಕಾ ಅಧ್ಯಕ್ಷರಾದರೆ, ರಷ್ಯಾ ವಿರುದ್ಧ ಮತ್ತಷ್ಟು ದಿಗ್ಬಂಧನಗಳನ್ನು ವಿಧಿಸಬಹುದು ಎಂದು ಪುಟಿನ್ ಅನುಮಾನಿಸುತ್ತಿದ್ದಾರೆ ಎಂಬುದು ವರದಿ.
ನವೆಂಬರ್ 8ರಂದು ನಡೆದ ಮತ ಏಣಿಕೆಯಲ್ಲಿ ಡೆಮಾಕ್ರೆಟಿಕ್ ಪಕ್ಷದ ಜೋ ಬೈಡನ್ 306 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಇನ್ನು ಹಾಲಿ ಅಧ್ಯಕ್ಷ, ಡೊನಾಲ್ಡ್ ಟ್ರಂಪ್ ಅವರು 232 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಜೋ ಬೈಡನ್ ಒಟ್ಟಾರೆ 51ರಷ್ಟು ಮತ ಪಡೆದಿದ್ದರೆ, ಡೊನಾಲ್ಡ್ ಟ್ರಂಪ್ 47.2ರಷ್ಟು ಮತ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


