ಮ್ಯಾನೇಜ್ ಮೆಂಟ್ ಬೋರ್ಡ್ ಗಳಲ್ಲಿ ಮಹಿಳೆಯರಿಗೆ ಸ್ಥಾನ ಕಡ್ಡಾಯ: ಜರ್ಮನಿ ಐತಿಹಾಸಿಕ ನಿರ್ಣಯ
ಲಿಂಗ ಸಮಾನತೆಯ ನಿಟ್ಟಿನಲ್ಲಿ ಜರ್ಮನಿ ಐತಿಹಾಸಿಕ ತೀರ್ಮಾನ ಕೈಗೊಂಡಿದೆ. ಮಹಿಳೆಯರು ದೇಶದ ಕಂಪನಿಗಳ ಆಡಳಿತ ನಿರ್ವಹಣಾ ಮಂಡಳಿಯಲ್ಲಿ ಕಡ್ಡಾಯವಾಗಿ ಸದಸ್ಯರಾಗಿರಬೇಕು ಎಂಬ ಕಾನೂನನ್ನು ಅನುಮೋದಿಸಿದೆ.

ಬರ್ಲಿನ್: ಲಿಂಗ ಸಮಾನತೆಯ ನಿಟ್ಟಿನಲ್ಲಿ ಜರ್ಮನಿ ಐತಿಹಾಸಿಕ ತೀರ್ಮಾನ ಕೈಗೊಂಡಿದೆ. ಮಹಿಳೆಯರು ದೇಶದ ಕಂಪನಿಗಳ ಆಡಳಿತ ನಿರ್ವಹಣಾ ಮಂಡಳಿಯಲ್ಲಿ ಕಡ್ಡಾಯವಾಗಿ ಸದಸ್ಯರಾಗಿರಬೇಕು ಎಂಬ ಕಾನೂನನ್ನು ಅನುಮೋದಿಸಿದೆ.
ಜರ್ಮನಿ ಚಾನ್ಸೆಲರ್ ಏಂಜೆಲಾ ಮರ್ಕೆಲ್ ನೇತೃತ್ವದ ಕ್ರಿಶ್ಚಿಯನ್ ಡೆಮೋಕ್ರಾಟ್ಸ್, ಸೋಷಿಯಲ್ ಡೆಮೋಕ್ರಾಟ್ಸ್ ಸಮ್ಮಿಶ್ರ ಸರ್ಕಾರ ಈ ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿದೆ.
ಯಾವುದೇ ಕಂಪನಿಯ ನಿರ್ವಹಣಾ ಮಂಡಳಿಯಲ್ಲಿ ಮೂವರು ವ್ಯಕ್ತಿಗಳಿದ್ದರೆ ಅವರಲ್ಲಿ ಕನಿಷ್ಠ ಒಬ್ಬ ಮಹಿಳೆಯಾದರೂ ಇರಬೇಕು ಎಂದು ಸ್ಪಷ್ಪಪಡಿಸಿದೆ.
ಈವರೆಗೆ ಈ ನಿಯಮ ಸ್ವಯಂ ಪ್ರೇರಿತವಾಗಿ ಜಾರಿಯಲ್ಲಿದೆ. ಆದರೆ, ಲಿಂಗ ಸಮಾನತೆ ರೂಪಿಸುವಲ್ಲಿ ಸ್ವಯಂ ಪ್ರೇರಿತ ನಿಯಮ ಶೋಚನೀಯವಾಗಿ ವಿಫಲವಾಗಿವೆ ಎಂಬ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಜರ್ಮನಿ ಈ ಹೊಸ ಕಾನೂನು ಜಾರಿಗೆ ತಂದಿದೆ.ಇನ್ನು ಮುಂದೆ ಎಲ್ಲಾ ಕಂಪನಿಗಳ ಆಡಳಿ ನಿರ್ವಹಣಾ ಮಂಡಳಿಯಲ್ಲಿ ಮಹಿಳೆಯರು ಕಡ್ಡಾಯವಾಗಿ ಇರಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


