ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ ಖಾಯಂ ಸದಸ್ಯತ್ವಕ್ಕೆ ಬೈಡನ್ ಬೆಂಬಲ ಸಾಧ್ಯತೆ
ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್ ಅವರ ಆಡಳಿತ ಭಾರತ- ಅಮೆರಿಕ ಸಂಬಂಧವನ್ನು ಗಟ್ಟಿಗೊಳಿಸುವುದಕ್ಕೆ ಆದ್ಯತೆ ನೀಡಲಿದ್ದು, ಭಾರತದ ದೀರ್ಘಕಾಲದ ಕನಸಾಗಿರುವ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವಕ್ಕೆ ಬೈಡನ್ ಬೆಂಬಲ ನೀಡುವ ಸಾಧ್ಯತೆ ಇದೆ.

ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್ ಅವರ ಆಡಳಿತ ಭಾರತ- ಅಮೆರಿಕ ಸಂಬಂಧವನ್ನು ಗಟ್ಟಿಗೊಳಿಸುವುದಕ್ಕೆ ಆದ್ಯತೆ ನೀಡಲಿದ್ದು, ಭಾರತದ ದೀರ್ಘಕಾಲದ ಕನಸಾಗಿರುವ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವಕ್ಕೆ ಬೈಡನ್ ಬೆಂಬಲ ನೀಡುವ ಸಾಧ್ಯತೆ ಇದೆ.
ಭಯೋತ್ಪಾದನೆ ನಿರ್ಮೂಲನೆಗೆ ಸಹಕಾರ, ಹವಾಮಾನ ಬದಲಾವಣೆ, ಆರೋಗ್ಯ ಹಾಗೂ ವ್ಯಾಪಾರ ವಿಷಯಗಳಲ್ಲಿ ಭಾರತಕ್ಕೆ ಅಮೆರಿಕದ ನೂತನ ಸರ್ಕಾರ ಬೆಂಬಲ ನೀಡಲಿದೆ ಎಂದು ಬೈಡನ್ ನ ಚುನಾವಣಾ ಪ್ರಚಾರ ತಂಡ ಪ್ರಕಟಿಸಿರುವ ನೀತಿ ಪತ್ರದ ಮೂಲಕ ತಿಳಿದುಬಂದಿದೆ.
ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಬೈಡನ್, ಅಮೆರಿಕ- ಭಾರತದ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ತಮ್ಮ 14 ವರ್ಷಗಳ ಕನಸನ್ನು ನನಸು ಮಾಡುವ ಕ್ರಮಗಳನ್ನು ಕೈಗೊಳ್ಳಲಿದ್ದಾರೆ.
2020 ರಲ್ಲಿ ಭಾರತ-ಅಮೆರಿಕ ಎರಡೂ ವಿಶ್ವದ ಅತ್ಯಂತ ಆಪ್ತ ರಾಷ್ಟ್ರಗಳಾಗುವುದು ನನ್ನ ಕನಸು, ಅದು ಸಾಧ್ಯವಾದರೆ ಇಡೀ ವಿಶ್ವ ಸುರಕ್ಷಿತವಾಗಿರಲಿದೆ ಎಂದು 2006 ರಲ್ಲೇ ಅಮೆರಿಕಾದಲ್ಲಿದ್ದ ಭಾರತೀಯ ಪತ್ರಿಕೆ (ಈಗ ಮುಚ್ಚಲ್ಪಟ್ಟಿದೆ) ನೀಡಿದ್ದ ಸಂದರ್ಶನದಲ್ಲಿ ಬೈಡನ್ ಹೇಳಿದ್ದರು.
ಈಗ 2020 ರಲ್ಲಿರುವ ಸವಾಲುಗಳು ಬೈಡನ್ ಗೆ ತಮ್ಮ ಕನಸನ್ನು ನನಸು ಮಾಡುವುದಕ್ಕೆ ಅಡ್ಡಿಯಾಗಬಹುದಾದರೂ 20, ಜನವರಿ 2021 ರಿಂದ ಪ್ರಾರಂಭವಾಗುವ ತಮ್ಮ ಅಧ್ಯಕ್ಷೀಯ ಅವಧಿ ಮುಕ್ತಾಯಗೊಳ್ಳುವುದಕ್ಕೂ ಮುನ್ನ ಅದನ್ನು ಸಾಧಿಸುವ ವಿಶ್ವಾಸವಿದೆ.
ಭಾರತಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಖಾಯಂ ಸ್ಥಾನ ನೀಡುವುದಕ್ಕೆ ಬೆಂಬಲಿಸುವುದು ಬೈಡನ್ ಆದ್ಯತೆಯ ಪಟ್ಟಿಯಲ್ಲಿದ್ದು, ಭಾರತಕ್ಕೆ ಇದು ಅತ್ಯಂತ ಸಕಾರಾತ್ಮಕ ವಿಷಯವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


