ವಿದೇಶ

ಕಿಮ್ ಜಾಂಗ್ ಉನ್ ಏಲ್ಲಿ? ಸತತ 20ನೇ ದಿನವೂ ಸಾರ್ವಜನಿಕರ ಕಣ್ಣಿಗೆ ಬೀಳದ ಉತ್ತರ ಕೊರಿಯಾ ನಾಯಕ!

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆರೋಗ್ಯದ ಪರಿಸ್ಥಿತಿ ಹಾಗೂ ಅವರ ನಂತರ ಯಾರು ಪರಮಾಣು ಸಶಕ್ತ ರಾಷ್ಟ್ರವನ್ನು ಮುನ್ನಡೆಸಲಿದ್ದಾರೆ ಎಂಬುದರ ಬಗ್ಗೆ ಊಹಾಪೋಹಗಳು ಎದ್ದಿರುವಂತೆ ಸತತ 20ನೇ ದಿನವೂ ಅವರು ಸಾರ್ವಜನಿಕರ ಕಣ್ಣಿಗೆ ಬೀಳದಿರುವುದು ಸಾಕಷ್ಟು ಕೌತುಕ ಮೂಡಿಸಿದೆ.

ಕಿಮ್ ಜಾಂಗ್ ಉನ್ ಏಲ್ಲಿ? ಸತತ 20ನೇ ದಿನವೂ ಸಾರ್ವಜನಿಕರ ಕಣ್ಣಿಗೆ ಬೀಳದ ಉತ್ತರ ಕೊರಿಯಾ ನಾಯಕ!
ಕಿಮ್ ಜಾಂಗ್ ಉನ್
Published On :

ಸಿಯೋಲ್: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆರೋಗ್ಯದ ಪರಿಸ್ಥಿತಿ ಹಾಗೂ ಅವರ ನಂತರ ಯಾರು ಪರಮಾಣು ಸಶಕ್ತ ರಾಷ್ಟ್ರವನ್ನು ಮುನ್ನಡೆಸಲಿದ್ದಾರೆ ಎಂಬುದರ ಬಗ್ಗೆ ಊಹಾಪೋಹಗಳು ಎದ್ದಿರುವಂತೆ ಸತತ 20ನೇ ದಿನವೂ ಅವರು ಸಾರ್ವಜನಿಕರ ಕಣ್ಣಿಗೆ ಬೀಳದಿರುವುದು ಸಾಕಷ್ಟು ಕೌತುಕ ಮೂಡಿಸಿದೆ.

ಪಿಟ್ಸ್ ಬರ್ಗ್ ನಲ್ಲಿ ಏಪ್ರಿಲ್ 11 ರಂದು ನಡೆದಿದ್ದ ಆಡಳಿತಾರೂಢ ಕಾರ್ಮಿಕ ಪಕ್ಷದ ಪೊಲಿಟ್ ಬ್ಯುರೊ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಕಿಮ್ ಕೊನೆಯ ಬಾರಿಗೆ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದರು.ವಿದೇಶಿ ಮುಖಂಡರಿಗೆ ಸಂದೇಶಗಳನ್ನು ಕಳುಹಿಸುವಂತಹ ವ್ಯವಹಾರಗಳನ್ನು ಅವರು ನಿರ್ವಹಿಸುವ  ಬಗ್ಗೆ ರಾಜ್ಯ ಮಾಧ್ಯಮಗಳು ವರದಿಗಳನ್ನು ನೀಡಿವೆ, ಆದರೆ ಅವರ ಯಾವುದೇ ಫೋಟೋ ಅಥವಾ ವಿಡಿಯೋ ಬಿಡುಗಡೆಯಾಗಿಲ್ಲ ಎಂದು ಸಿಯೋಲ್ ಮೂಲದ ಯೋನ್ಹಾಪ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ಉತ್ತರ ಕೊರಿಯಾ ರಾಷ್ಟ್ರ ನಿರ್ಮಾತೃ ಹಾಗೂ ಕಿಮ್ ಜಾಂಗ್ ಉನ್ ಅವರ ತಾತ ದಿವಂಗತ ಕಿಮ್ ಇಲ್ ಸುಂಗ್ ಅವರ 108ನೇ ಜನ್ಮದಿನದ ಸ್ಮರಣೆ ಕಾರ್ಯಕ್ರಮಕ್ಕೂ ಗೈರು ಹಾಜರಾದ ಹಿನ್ನೆಲೆಯಲ್ಲಿ ಕಿಮ್ ಆವರ ಆರೋಗ್ಯದ ಬಗ್ಗೆ ಊಹಾಪೋಹಗಳು ಎದ್ದಿವೆ. 2011ರಲ್ಲಿ ಕಿಂಗ್ ಜಾನ್ ಉನ್ ಅಧಿಕಾರಕ್ಕೆ ಬಂದಾಗಿನಿಂದಲೂ ಏಪ್ರಿಲ್ 15 ರಂದು ನಡೆಯುವ ವಾರ್ಷಿಕೋತ್ಸವ ಸಮಾರಂಭಕ್ಕೆ ಗೈರು ಹಾಜರು ಆಗಿರಲಿಲ್ಲ.

ಶಸ್ತ್ರ ಚಿಕಿತ್ಸೆಯ ನಂತರ ಕಿಮ್ ಜಾಂಗ್ ಉನ್ ತೀವ್ರ ಅಪಾಯದ ಸ್ಥಿತಿಯಲ್ಲಿದ್ದಾರೆ ಎಂಬುದು ಗುಪ್ತಚರ ಮಾಹಿತಿಯಿಂದ ತಿಳಿದುಬಂದಿದೆ ಎಂಬ ಅಮೆರಿಕಾದ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ  ಸಿಎನ್ ಎನ್ ಕಳೆದ ವಾರ ವರದಿ ಭಿತ್ತರಿಸಿದ ಬಳಿಕ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡವು.

ಆದರೆ, ಈ ಇಂತಹ ಸುದ್ದಿಗಳನ್ನು ಅಲ್ಲಗಳೆದಿದ್ದ ಉತ್ತರ ಕೊರಿಯಾ ರಾಜ್ಯ ಮಾಧ್ಯಮಗಳು, ಕಿಮ್ ಜಾಮ್ ಉನ್ ವ್ಯವಹಾರಿಕ ಪತ್ರಗಳು ಹಾಗೂ ಗೌರವಾನ್ವಿತ ನಾಗರಿಕರಿಗೆ ಗಿಫ್ಟ್ ಗಳನ್ನು ಕಳುಹಿಸಿಕೊಟ್ಟಿದ್ದಾರೆ ಎಂದು ವರದಿ ಮಾಡಿದ್ದವು. ತಮ್ಮ ನಾಯಕನಿಗಾಗಿ ಉತ್ತರ ಕೊರಿಯಾ ಜನರು ಒಗ್ಗೂಡಬೇಕು ಎಂದು ರೊಡೊಂಗ್ ಸಿನ್ ಮನ್ ಶುಕ್ರವಾರ ಒತ್ತಾಯಿಸಿದ್ದಾಗಿ ಯೋನ್ಹಾಪ್ ನ್ಯೂಸ್ ಏಜೆನ್ಸಿ ವರದಿ ಮಾಡಿತ್ತು. ಉತ್ತರ ಕೊರಿಯಾ ಕ್ಯಾಬಿನೆಟ್ ನ್ಯೂಸ್ ಪೇಪರ್  ಮಿಂಜು ಚೊಸಾನ್  ಇದೇ ರೀತಿಯ ವರದಿ ಪ್ರಕಟಿಸಿತ್ತು.

ವ್ಯವಹಾರಗಳು ಎಂದಿನಂತೆ ನಡೆಯುತ್ತಿವೆ ಎಂದು ಉತ್ತರ ಕೊರಿಯಾದ  ಟಾಪ್ 3 ಲೀಡರ್ ಪಾಕ್ ಪೊಂಗ್ - ಜು ಮತ್ತು ಪ್ರೀಮಿಯರ್ ಕಿಮ್ ಜೆ- ಯಾಂಗ್ ಹೇಳಿಕೆಯನ್ನು ಪ್ರಕಟಿಸಿದ್ದವು.

ಈ ಮಧ್ಯೆ ಇಂತಹ ಹೇಳಿಕೆಯನ್ನು ತಳ್ಳಿಹಾಕಿರುವ ದಕ್ಷಿಣ ಕೊರಿಯಾ ಅಧಿಕಾರಿಗಳು, ಉತ್ತರ ಕೊರಿಯಾ ನಾಯಕನ ವಿಷಯದಲ್ಲಿ ಏನೋ ನಡೆದಿದೆ. ಎಲ್ಲವೂ ಸರಿಯಾಗಿಲ್ಲ, ಪೂರ್ವ ಕರಾವಳಿ ವಲಯ ವೊನ್ ಸಾನ್ ನಲ್ಲಿ ಆತ ವಾಸಿಸುತ್ತಿರುವುದಾಗಿ ನಂಬಲಾಗಿತ್ತು ಎಂದು ಹೇಳಿದ್ದಾರೆ. 

ಕಿಮ್  ಜಾಂಗ್ ಉನ್ ಸಾರ್ವಜನಿಕ ಜೀವನದಿಂದ ಕಣ್ಮರೆಯಾಗಿರುವುದು ಅಪರೂಪವಲ್ಲ,  2014 ಸೆಪ್ಟೆಂಬರ್ ನಲ್ಲಿ ಕೂಡಾ 40 ದಿನಗಳ ಕಾಲ ಸಾರ್ವಜನಿಕ ಜೀವನದಿಂದ ಕಣ್ಮರೆಯಾಗಿ ಮತ್ತೆ ಕಾಣಿಸಿಕೊಂಡಿದ್ದರು. ಕಿಮ್ ಜಾನ್ ಉನ್ ಅವರ ಕಾಲಿನಿಂದ ಉಣ್ಣನ್ನು ತೆಗೆಯಲಾಯಿತು ಎಂದು ಎಷ್ಟೋ ದಿನದ ನಂತರ ಸಿಯೋಲ್ ಗುಪ್ತಚರ ಸಂಸ್ಥೆಗಳು ಹೇಳಿಕೆ ನೀಡಿದ್ದವು. 

ಒಟ್ಟಿನಲ್ಲಿ ಕಿಮ್ ಜಾಂಗ್ ಉನ್ ಏಕಾಏಕಿ ಅದೃಶ್ಯದ ಕುರಿತು ತರಹೇವಾರಿ ವರದಿಗಳು ಹೊರಬರುತ್ತಿದ್ದು, ಇದೆಲ್ಲದಕ್ಕೂ ಆತನ ಬಹಿರಂಗವಾಗಿ ಮತ್ತೆ ಕಾಣಿಸಿಕೊಳ್ಳುವುದೊಂದೇ ಪರಿಹಾರವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.