ಇಸ್ರೇಲ್ ಪ್ರಧಾನಿಗೂ ಕೊರೋನಾ ವೈರಸ್ ಭೀತಿ, ಸ್ವಯಂ ದಿಗ್ಭಂಧನ ಹೇರಿಕೊಂಡ ನೆತಾನ್ಯಹು
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ಅವರಿಗೂ ಕೊರೋನಾ ವೈರಸ್ ಭೀತಿ ಅವರಿಸಿದ್ದು, ಅವರ ಅಧಿಕಾರಿಯೊಬ್ಬರಿಗೆ ಸೋಂಕು ಕಾಣಿಸಿಕೊಂಡ ಪರಿಣಾಮ ನೆತಾನ್ಯಹು ಅವರು ಸ್ವಯಂ ದಿಗ್ಭಂಧನದ ಮೊರೆ ಹೋಗಿದ್ದಾರೆ.

ಟೆಲ್ ಅವೀವ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ಅವರಿಗೂ ಕೊರೋನಾ ವೈರಸ್ ಭೀತಿ ಅವರಿಸಿದ್ದು, ಅವರ ಅಧಿಕಾರಿಯೊಬ್ಬರಿಗೆ ಸೋಂಕು ಕಾಣಿಸಿಕೊಂಡ ಪರಿಣಾಮ ನೆತಾನ್ಯಹು ಅವರು ಸ್ವಯಂ ದಿಗ್ಭಂಧನದ ಮೊರೆ ಹೋಗಿದ್ದಾರೆ.
ನೆತಾನ್ಯಹು ಅವರ ಆಪ್ತ ಮತ್ತು ಇಸ್ರೇಲ್ ನ ನೆಸ್ಸೆಟ್ ವ್ಯವಹಾರಗಳ ಅಧಿಕಾರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಅವರಿಗೆ ನಿಕಟ ಸಂಪರ್ಕದಲ್ಲಿದ್ದರಿಂದ ನೆತಾನ್ಯಹು ಅವರಿಗೂ ಸೋಂಕು ತಗುಲಿರುವ ಶಂಕೆ ಮೇರೆಗೆ ಅವರು ಕ್ವಾರಂಟೈನ್ ಗೆ ಒಳಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ನೆತಾನ್ಯಹು ಕಚೇರಿ ವೈದ್ಯಕೀಯ ತಪಾಸಣಾ ವರದಿ ಬರುವ ಮುನ್ನವೇ ಅವರು ಮುಂಜಾಗ್ರತಾ ಕ್ರಮವಾಗಿ ಅವರೇ ಸ್ವಯಂ ದಿಗ್ಬಂಧನದಲ್ಲಿದ್ದಾರೆ ಎಂದು ಹೇಳಿದೆ.
ಇನ್ನು ಇಸ್ರೇಲ್ ನಲ್ಲೂ ಮಾರಕ ಕೊರೋನಾ ವೈರಸ್ ಮರಣ ಮುಂದುವರೆದಿದ್ದು, 4,347 ಮಂದಿ ಕೊರೋನಾ ಸೋಂಕಿತರಾಗಿದ್ದು, 16 ಮಂದಿ ಸಾವನ್ನಪ್ಪಿದ್ದಾರೆ. ಅಂತೆಯೇ 95 ಮಂದಿ ಗಂಭೀರ ಪರಿಸ್ಥಿತಿಯಲ್ಲಿದ್ದು, 134 ಮಂದಿ ಗುಣಮುಖರಾಗಿದ್ದಾರೆ. ಈ ಹಿಂದೆ ಇಟಲಿಯಲ್ಲಿ ಓರ್ವ ಇಸ್ರೇಲ್ ಪ್ರವಾಸಿಗ ಸಾವನ್ನಪ್ಪಿದ್ದ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


