Quarantined

ಹೊಸ ಸ್ವರೂಪದ ಕೊರೋನಾ ವೈರಸ್ ಆತಂಕ: ಧಾರವಾಡ ಜಿಲ್ಲೆಯಲ್ಲಿ ಬ್ರಿಟನ್‍ನಿಂದ ಆಗಮಿಸಿದ ಐವರಿಗೆ ಕ್ವಾರಂಟೈನ್
ಬ್ರಿಟನ್‌ನಿಂದ ಆಗಮಿಸಿದ ಐವರು ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಧಾರವಾಡ ಜಿಲ್ಲೆಯ ಅಧಿಕಾರಿಗಳು ಸೋಮವಾರ ಗೃಹ ಸಂಪರ್ಕತಡೆಗೆ ಕಳುಹಿಸಿದ್ದಾರೆ ಎಂದು ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಧಾನಿ ಮೋದಿ ಕ್ವಾರಂಟೈನ್ ಗೆ ತೆರಳುವುದಿಲ್ಲವೇ..? ಶಿವಸೇನೆ ಪ್ರಶ್ನೆ
ಆಯೋಧ್ಯೆಯ ಶ್ರೀ ರಾಮ ಮಂದಿರ ಭೂಮಿ ಪೂಜೆ ಸಂದರ್ಭದಲ್ಲಿ ಶ್ರೀರಾಮಮಂದಿರ ತೀರ್ಥ ಕ್ಷೇತ್ರ ಅಧ್ಯಕ್ಷ ನೃತ್ಯ ಗೋಪಾಲ್ ದಾಸ್ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ನೃತ್ಯ ಗೋಪಾಲ್ ದಾಸ್ ಅವರ ಜತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಮೋದಿ ಕ್ವಾರಂಟೈನ್ ಗೆ ತೆರಳಲಿದ್ದಾರೆಯೇ? ಎಂದು ಶಿವಸೇನೆ ಪ್ರಶ್ನಿಸಿದೆ.

ತಲಕಾವೇರಿ: ನಾಪತ್ತೆಯಾಗಿರುವ ಅರ್ಚಕರ ಪುತ್ರಿಯರು ವಿದೇಶದಿಂದ ಆಗಮನ, ಕ್ವಾರಂಟೈನ್
ನಾಪತ್ತೆಯಾಗಿರುವ ಕೊಡಗು ಜಿಲ್ಲೆಯ ತಲಕಾವೇರಿ ದೇಗುಲದ ಅರ್ಚಕರು ಇಬ್ಬರು ಪುತ್ರಿಯರು ಆಸ್ಟ್ರೇಲಿಯಾಮತ್ತು ನ್ಯೂಜಿಲೆಂಡ್‌ನಿಂದ ಮಡಿಕೇರಿಗೆ ಆಗಮಿಸಿದ್ದು, ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಜಿಲ್ಲಾಡಳಿತ ಕಣ್ತಪ್ಪಿಸಿ ಕ್ವಾರಂಟೈನಲ್ಲಿರುವ ವ್ಯಕ್ತಿಯನ್ನು ಭೇಟಿ ಮಾಡಿದ ಭೂಪನ ವಿರುದ್ಧ ದೂರು ದಾಖಲು
ಅಜ್ಮೀರದಿಂದ ಬೆಳಗಾವಿಗೆ ಆಗಮಿಸುತ್ತಿದ್ದ ವೇಳೆ ಕ್ವಾರಂಟೈನ್ ಆಗಿರುವ ಕೊರೋನಾ ಶಂಕಿತರನ್ನು ಜಿಲ್ಲಾಡಳಿತದ ಕಣ್ತಪ್ಪಿಸಿ ಭೇಟಿ ಮಾಡಿರುವ ಭೂಪನ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ವಿದೇಶದಿಂದ ಬರುವ ಕನ್ನಡಿಗರನ್ನು ಅವರ ಜಿಲ್ಲೆಯಲ್ಲೇ ಕ್ವಾರಂಟೈನ್: ಸಚಿವ ಆರ್.ಅಶೋಕ್
ವಿದೇಶದಿಂದ ಬರುವ ಕನ್ನಡಿಗರನ್ನು ಅವರವರ ಜಿಲ್ಲೆಗಳಲ್ಲಿಯೇ ಕ್ವಾರಂಟೈನ್ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ

ಛತ್ತೀಸ್ ಗಢ: 14 ಗಡಿ ಭದ್ರತಾ ಪಡೆ ಯೋಧರಿಗೆ ಕ್ವಾರಂಟೈನ್!
ಆಗ್ರಾದಿಂದ ಹಿಂತಿರುಗಿದ ನಂತರ ಕೊರೋನಾವೈರಸ್ ಶಂಕೆ ಮೇಲೆ ಛತ್ತೀಸ್ ಗಢದ 14 ಗಡಿ ಭದ್ರತಾ ಪಡೆ ಯೋಧರನ್ನು ಕ್ವಾರಂಟೈನ್ ಮಾಡಲಾಗಿದೆ. ಅವರ ಅಂತಿಮ ಪರೀಕ್ಷೆ ವರದಿಗಾಗಿ ಕಾಯಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಲಂಕಾ ನೌಕಾಪಡೆಯ 60 ಮಂದಿಗೆ ಕೊರೋನಾ ಸೋಂಕು: 4,000 ಸಿಬ್ಬಂದಿಗಳು ಕ್ವಾರಂಟೇನ್ ಗೆ
ಲಂಕಾ ನೌಕಾಪಡೆಯ 60 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಅವರ ಸಂಪರ್ಕದಲ್ಲಿದ್ದ 4,000 ಸಿಬ್ಬಂದಿಗಳನ್ನು ಕ್ವಾರಂಟೇನ್ ಗೆ ಒಳಪಡಿಸಲಾಗಿದೆ.

ರಾಮನಗರ ಜೈಲು ಸಿಬ್ಬಂದಿಯ ಕ್ವಾರಂಟೈನ್: ಬಸವರಾಜ ಬೊಮ್ಮಾಯಿ
ರಾಮನಗರದಲ್ಲಿ ಐವರಿಗೆ ಪಾಸಿಟಿವ್ ಆಗಿದೆ. ಅವರನ್ನು ವಿಕ್ಟೋರಿಯಾಗೆ ಸ್ಥಳಾಂತರ ಮಾಡುತ್ತಿದ್ದೇವೆ. ಉಳಿದವರು ಹಜ್ ಭವನಕ್ಕೆ ಶಿಫ್ಟ್ ಆಗುತ್ತಾರೆ. ಜೈಲು ಸಿಬ್ಬಂದಿಗಳು ಕ್ವಾರೈಂಟೆನ್ ಆಗುತ್ತಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಕೊವಿಡ್-19: ದೇಶದಲ್ಲಿ ಶೇ.76 ರಷ್ಟು ಪುರುಷರಿಗೆ ಸೋಂಕು, 25 ಸಾವಿರ ತಬ್ಲಿಘಿ ಸದಸ್ಯರ, ಸಂಪರ್ಕದಲ್ಲಿದ್ದರಿಗೆ ಕ್ವಾರಂಟೈನ್
ಮಹಾಮಾರಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದೇಶಾದ್ಯಂತ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ಒಟ್ಟು 693 ಹೊಸ ಪ್ರಕರಣಗಳು ಪತ್ತೆಯಾಗಿವೆ.

