ಕೊರೋನಾ ವೈರಸ್: ಅಮೆರಿಕ, ಚೀನಾವನ್ನೂ ಹಿಂದಿಕ್ಕಿದ ಇಟಲಿ, ಸಾವಿನ ಸಂಖ್ಯೆ 10 ಸಾವಿರ ಕ್ಕೇರಿಕೆ
ಕೊರೋನಾ ವೈರಸ್ ಇಟಲಿಯಲ್ಲಿ ತನ್ನ ಅಟ್ಟಹಾಸವನ್ನು ಮುಂದುವರೆಸಿದ್ದು, ಕೇವಲ 24 ಗಂಟೆಯಲ್ಲಿ 1,000 ಜನರನ್ನು ಬಲಿ ತೆಗೆದುಕೊಳ್ಳುವ ಮೂಲಕ ಅಲ್ಲಿ ಸಾವಿನ ಸಂಖ್ಯೆ 10 ಸಾವಿರ ಗಡಿ ದಾಟಿದೆ.

ಸ್ಪೇನ್: ಕೊರೋನಾ ವೈರಸ್ ಇಟಲಿಯಲ್ಲಿ ತನ್ನ ಅಟ್ಟಹಾಸವನ್ನು ಮುಂದುವರೆಸಿದ್ದು, ಕೇವಲ 24 ಗಂಟೆಯಲ್ಲಿ 1,000 ಜನರನ್ನು ಬಲಿ ತೆಗೆದುಕೊಳ್ಳುವ ಮೂಲಕ ಅಲ್ಲಿ ಸಾವಿನ ಸಂಖ್ಯೆ 10 ಸಾವಿರ ಗಡಿ ದಾಟಿದೆ.
ಇಟಲಿಯಲ್ಲಿ ಕೊರೋನಾಗೆ ಶುಕ್ರವಾರ ಒಂದೇ ದಿನ 1000ಕ್ಕೂ ಅಧಿಕ ಮಂದಿ ಬಲಿಯಾಗಿದ್ದು, ಆ ಮೂಲಕ ಕೊರೋನಾಗೆ ಬಲಿಯಾದವರ ಸಂಖ್ಯೆ 10,023ಕ್ಕೇರಿದೆ. ಅಂತೆಯೇ ಸೋಂಕಿತರ ಸಂಖ್ಯೆ 1,15,000ಕ್ಕೆ ಏರಿಕೆಯಾಗಿದೆ.
ಇದಕ್ಕೂ ಮೊದಲು ಮಾ. 21ರಂದು ಇಟಲಿಯಲ್ಲಿ 793 ಜನರು ಸಾವನ್ನಪ್ಪಿದ್ದರು. ಆದರೆ, ನಿನ್ನೆ ಒಂದೇ ದಿನ ಸುಮಾರು 1,000 ಜನರನ್ನು ಬಲಿ ತೆಗೆದುಕೊಳ್ಳುವ ಮೂಲಕ ಕೊರೋನಾ ವೈರಸ್ ತನ್ನ ಪ್ರಾಬಲ್ಯವನ್ನು ಪ್ರದರ್ಶಿಸಿದೆ. ಇಟಲಿಯಲ್ಲಿ ಸೋಮವಾರ- 602, ಮಂಗಳವಾರ- 743, ಬುಧವಾರ- 683, ಗುರುವಾರ- 712, ಶುಕ್ರವಾರ- 1000 ಜನರು ಸಾವನ್ನಪ್ಪಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.
ಫೆ. 19ರಂದು ಇಟಲಿಯಲ್ಲಿನ ಸ್ಯಾನ್ ಸಿರೋ ಸ್ಟೇಡಿಯಂನಲ್ಲಿ ಸಾಕರ್ ಪಂದ್ಯ ನಡೆದಿತ್ತು. ಇದಕ್ಕೆ ನಾನಾ ದೇಶಗಳ ಕ್ರೀಡಾಪ್ರೇಮಿಗಳು, ಆಟಗಾರರು ಬಂದಿದ್ದರು. ಒಟ್ಟು 40,000ಕ್ಕೂ ಅಧಿಕ ಜನರು ಭಾಗವಹಿಸಿದ್ದರು ಈ ಪಂದ್ಯದ ಬಳಿಕ ಚೀನಾದಲ್ಲಿ ಕೊರೋನಾ ವೈರಸ್ ಹರಡಿರುವ ಬಗ್ಗೆ ವರದಿಯಾಗಿತ್ತು. ಇಟಲಿಯಲ್ಲಿ ಆ ಪಂದ್ಯಾವಳಿ ನಡೆದ ಪ್ರದೇಶದಲ್ಲೇ ಅತಿಹೆಚ್ಚು ಕೊರೋನಾ ಸೋಂಕಿನ ಪ್ರಮಾಣ ಕಾಣಿಸಿಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


