ಕೊರೋನಾ ಬಗ್ಗುಬಡಿಯಲು ಔಷಧಿ ಸಿದ್ಧಪಡಿಸಿದ ಚೀನಾ: ರೋಗಿಗಳಿಗೆ ಫವಿಪಿರಾವಿರ್ ಲಸಿಕೆ, ಬಹುಬೇಗ ಜ್ವರ ಇಳಿಕೆ
ವಿಶ್ವದಾದ್ಯಂತ ಮರಣಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್'ನ್ನು ಬಗ್ಗುಬಡಿಯಲು ಚೀನಾ ಔಷಧಿಯನ್ನು ಕಂಡು ಹಿಡಿದಿದ್ದು, ಫವಿಪಿರಾವಿರ್ ಎಂಬ ಲಸಿಕೆಯನ್ನು ಚೀನಾ ವಿಜ್ಞಾನಿಗಳು ಯಶಸ್ವಿಯಾಗಿ ರೋಗಿಗಳ ಮೇಲೆ ಪ್ರಯೋಗಿಸಿದ್ದಾರೆ.

ಬೀಜಿಂಗ್: ವಿಶ್ವದಾದ್ಯಂತ ಮರಣಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್'ನ್ನು ಬಗ್ಗುಬಡಿಯಲು ಚೀನಾ ಔಷಧಿಯನ್ನು ಕಂಡು ಹಿಡಿದಿದ್ದು, ಫವಿಪಿರಾವಿರ್ ಎಂಬ ಲಸಿಕೆಯನ್ನು ಚೀನಾ ವಿಜ್ಞಾನಿಗಳು ಯಶಸ್ವಿಯಾಗಿ ರೋಗಿಗಳ ಮೇಲೆ ಪ್ರಯೋಗಿಸಿದ್ದಾರೆ.
ಈ ಪ್ರಯೋಗದ ವೇಳೆ ರೋಗಿಗಳಲ್ಲಿ ಯಾವುದೇ ಅಡ್ಡ ಪರಿಣಾಮ ಕಂಡು ಬಂದಿಲ್ಲ. ಜೊತೆಗೆ ರೋಗಿಗಳಲ್ಲಿ ಜ್ವರ ನಿಯಂತ್ರಣದ ಅವಧಿ 4.2 ದಿನಗಳಿಂದ 2.5 ದಿನಗಳಲ್ಲಿ ಇಳಿದಿದೆ ಎಂದು ಸ್ವತಃ ಸರ್ಕಾರವೇ ಅಧಿಕೃತವಾಗಿ ಪ್ರಕಟಿಸಿದೆ. ಹೀಗಾಗಿ ವಿಶ್ವದಲ್ಲಿ 1.80 ಲಕ್ಷಕ್ಕೂ ಹೆಚ್ಚು ಜನರಿಗೆ ಕಾಣಿಸಿಕೊಂಡಿರುವ ವೈರಸ್ ನಿಯಂತ್ರಣ ನಿಟ್ಟಿನಲ್ಲಿ ಹೊಸ ಭರವಸೆಗಳು ಮೂಡಲು ಆರಂಭವಾಗಿವೆ.
ಫವಿಪಿರಾವಿರ್ ಎಂಬ ಲಸಿಕೆಯನ್ನು 2014ರಲ್ಲೇ ಜಪಾನ್ ನಲ್ಲಿ ಅಭಿವೃದ್ಧಿದಪಡಿಸಲಾಗಿತ್ತು. ವಿವಿಧ ರೀತಿಯ ವೈರಸ್ ನಿಯಂತ್ರಣಕ್ಕಾಗಿ ಇದನ್ನು ಬಳಸಲಾಗುತ್ತಿತ್ತು. ಈ ಲಸಿಕೆಯನ್ನೇ ಇದೀಗ ಚೀನಾದ ವಿಜ್ಞಾನಿಗಳು ಕೊರೋನಾ ಸೋಂಕು ಪೀಡಿತರ ಮೇಲೆ ಪ್ರಯೋಗ ನಡೆಸಿದ್ದಾರೆ. ಈ ವೇಳೆ ಉತ್ತಮ ಫಲಿತಾಂಶ ಕಂಡು ಬಂದಿದೆ ಎಂದು ವಿಜ್ಞಾನಿಗಳ ತಂಡ ಹೇಳಿದೆ.
ಮಾರುಕಟ್ಟೆಗೆ ಬಿಡುಗಡೆಗೂ ಮುನ್ನ ರೋಗಿಗಳ ಮೇಲೆ ನಡೆಸುವ ಕ್ಲಿನಿಕಲ್ ಪ್ರಯೋಗದ ವೇಳೆ ಲಸಿಕೆ ಪರಿಣಾಮಕಾರಿ ಫಲಿತಾಂಶ ನೀಡಿದೆ. 35 ರೋಗಿಗಳ ಮೇಲೆ ಈ ಲಸಿಕೆ ಪ್ರಯೋಗಿಸಲಾಗಿತ್ತು. ಈ ವೇಳೆ ಜ್ವರ ನಿಯಂತ್ರಣಕ್ಕೆ ಬರುವ ಅವಧಿ ಗಣನೀಯವಾಗಿ ಇಳಿಕೆಯಾಗಿದೆ. ಗುಣಮುಖವಾಗುವ ಲಕ್ಷಣಗಳೂ ಕಂಡು ಬಂದಿದೆ. ಜೊತೆಗೆ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಕಂಡು ಬಂದಿಲ್ಲ. ಹೀಗಾಗಿ ಇದನ್ನು ಶೀಘ್ರ ಕೊರೋನಾ ನವಿಯಂತ್ರಣಕ್ಕೆ ಬಳಸುವ ಔಷಧಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


