ಕೊರೋನಾ ವೈರಸ್ ಕುರಿತ ಹೇಳಿಕೆ ನೀಡಿ ಎಡವಟ್ಟು ಮಾಡಿಕೊಂಡ ಟ್ರಂಪ್!
ಕೊರೋನಾ ವೈರಸ್ ಕುರಿತು ಹೇಳಿಕೆ ನೀಡಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಡವಟ್ಟು ಮಾಡಿಕೊಂಡಿದ್ದಾರೆ.

ವಾಷಿಂಗ್ ಟನ್: ಕೊರೋನಾ ವೈರಸ್ ಕುರಿತು ಹೇಳಿಕೆ ನೀಡಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಡವಟ್ಟು ಮಾಡಿಕೊಂಡಿದ್ದಾರೆ.
ಗೂಗಲ್ ಸಂಸ್ಥೆ ಕೊರೋನಾ ಪತ್ತೆ ಹಚ್ಚುವ, ಸ್ಕ್ರೀನಿಂಗ್ ಪೋರ್ಟಲ್ ನ್ನು ನಿರ್ಮಿಸುತ್ತಿದೆ, ಶೀಘ್ರವೇ ಇದನ್ನು ಮಾಡಲಾಗುತ್ತಿದೆ. ಕೊರೋನಾ ಸೋಂಕನ್ನು ಖಚಿತಪಡಿಸುವುದು ಹಾಗೂ ಹತ್ತಿರದಲ್ಲೇ ಪರೀಕ್ಷೆಗೆ ಅನುಕೂಲವಾಗುವ ಪ್ರದೇಶವನ್ನು ತಿಳಿಸುವುದಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದ್ದರು, ಆದರೆ ಗೂಗಲ್ ಬೇರೆಯದ್ದೇ ಮಾಹಿತಿ ನೀಡಿದೆ.
ಸುಮಾರು 1,700 ಇಂಜಿನಿಯರ್ ಗಳು ಇದಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಪ್ರತಿಮ ಪ್ರಗತಿ ಸಾಧಿಸಿದ್ದಾರೆ ಎಂದು ಟ್ರಂಪ್ ಹೇಳಿದ್ದರು. ಆದರೆ ಈ ಬಗ್ಗೆ ಗೂಗಲ್ ಸಂಸ್ಥೆ ಸ್ಪಷ್ಟನೆ ನೀಡಿದ್ದು, ತಾನು ಈರೀತಿಯ ಯಾವುದೇ ಪೋರ್ಟಲ್ ನಿರ್ಮಾಣ ಮಾಡ್ತಿಲ್ಲ ಆದರೆ ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿಯ ಪ್ರದೇಶದ ಜನತೆಗೆ ಕೊರೋನಾ ಪರೀಕ್ಷೆ ನಡೆಸುವ ಪ್ರದೇಶಗಳ ಬಗ್ಗೆ ಮಾಹಿತಿ ನೀಡಲು ತನ್ನ ಅಡಿಯಲ್ಲೇ ಬರುವ ವೆರಿಲಿ ಸಣ್ಣ ಪ್ರಾಯೋಗಿಕ ವೆಬ್ ಸೈಟ್ ನ್ನು ನಿರ್ಮಿಸುತ್ತಿದೆ ಎಂದು ಹೇಳಿದೆ.
ವೆರಿಲಿ ಸಂಸ್ಥೆ ಹೊರತರುತ್ತಿರುವ ವೆಬ್ ಸೈಟ್ ಇನ್ನೂ ನಿರ್ಮಾಣ ಹಂತದಲ್ಲಿದ್ದು, ಪ್ರಾರಂಭಿಕ ಹಂತದಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿಯ ಪ್ರದೇಶದಲ್ಲಿ ಜಾರಿಗೆ ತರಲಾಗುತ್ತದೆ ನಂತರದ ದಿನಗಳಲ್ಲಿ ಬೇರೆಡೆಗೆ ವಿಸ್ತರಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಗೂಗಲ್ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


