ವಿದೇಶ

ವಿಶ್ವಕ್ಕೆ ಕಂಟಕವಾದ ಕೊರೋನಾ ವೈರಸ್: 4001 ಸಾವು, 1.14 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆ

ಮಹಾಮಾರಿ ಕೊರೋನಾ ವೈರಸ್ ವಿಶ್ವದಾದ್ಯಂತ ತನ್ನ ಕಬಂಧ ಬಾಹುವನ್ನು ವಿಸ್ತರಿಸಿದ್ದು, ವಿಶ್ವದ 110 ದೇಶಗಳಲ್ಲಿ ವೈರಸ್ ವ್ಯಾಪಿಸಿರುವ ಪರಿಣಾಮ ಈ ವರೆಗೆ 4001 ಮಂದಿ ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ.

ವಿಶ್ವಕ್ಕೆ ಕಂಟಕವಾದ ಕೊರೋನಾ ವೈರಸ್: 4001 ಸಾವು, 1.14 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆ
ಸಂಗ್ರಹ ಚಿತ್ರ
Published On :

ಪ್ಯಾರಿಸ್: ಮಹಾಮಾರಿ ಕೊರೋನಾ ವೈರಸ್ ವಿಶ್ವದಾದ್ಯಂತ ತನ್ನ ಕಬಂಧ ಬಾಹುವನ್ನು ವಿಸ್ತರಿಸಿದ್ದು, ವಿಶ್ವದ 110 ದೇಶಗಳಲ್ಲಿ ವೈರಸ್ ವ್ಯಾಪಿಸಿರುವ ಪರಿಣಾಮ ಈ ವರೆಗೆ 4001 ಮಂದಿ ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ. 

ಇದರಂತೆ ಸೋಂಕಿತರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಈ ವರೆಗೂ ವಿಶ್ವದಾದ್ಯಂತ 1.14 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿರುವುದಾಗಿ ವರದಿಗಳು ತಿಳಿಸಿವೆ. 

ಈ ನಡುವೆ ಭಾರತದಲ್ಲಿ ದಿನೇ ದಿನೇ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸೋಮವಾರ ಮತ್ತೆ 8 ಜನರಲ್ಲಿ ಸೋಂಕು ತಗುಲಿರುವುದು ಖಚಿತಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಕೊರೋನಾ ವೈರಾಣು ಪೀಡಿತರ ಸಂಖ್ಯೆ 47ಕ್ಕೆ ಏರಿಕೆಯಾಗಿದೆ. ಆತಂಕದಲ ವಿಚಾರವೆಂದರೆ ಕೇರಳದ ಎರ್ನಾಕುಲಂನಲ್ಲಿ ಇಟಲಿಯಿಂದ ಮರಳಿದ್ದ 3 ವರ್ಷದ ಮಗುವಿಗೂ ಕೊರೋನಾ ಕಾಣಸಿಕೊಂಡಿದೆ. 

ಭಾರತದಲ್ಲಿ ಮಗುವಿಗೆ ಕೊರೋನಾ ಕಾಣಿಸಿಕೊಕಂಡಿದ್ದು ಇದೇ ಮೊದಲು. ಇತರೆ ಪ್ರಕರಣಗಳು ಬೆಂಗಳೂರು, ಪಂಜಾಬ್, ಪುಣೆ. ದೆಹಲಿ, ಉತ್ತರಪ್ರದೇಶ ಹಾಗೂ ಜಮ್ಮುವಿನಲ್ಲಿ ದೃಢಪಟ್ಟಿವೆ. 

ಅಮೆರಿಕಾದಿಂದ ಬಂದ ಒಬ್ಬ ಬೆಂಗಳೂರಿಗನಿಗೆ, ದುಬೈಗೆ ಹೋಗಿ ಬಂದಿದ್ದ ಪುಣೆಯ ದಂಪತಿ, ಇರಾನ್'ಗೆ ಹೋಗಿ ಬಂದ ಜಮ್ಮುವಿನ ಒಬ್ಬರಿಗೆ, ಆಗ್ರಾದಲ್ಲಿ ಕೊರೋನಾಪೀಡಿತರ ಸಂಪರ್ಕಕ್ಕೆ ಹೋಗಿ ಬಂದ ಉತ್ತರಪ್ರದೇಶದ ಮೇರಠ್'ನ ಒಬ್ಬರಿಗೆ ಹಾಗೂ ಇಟಲಿಗೆ ಹೋಗಿ ಬಂದ ದೆಹಲಿ ಹಾಗೂ ಪಂಜಾಬ್'ನ ಹೋಶಿಯಾರ್'ಪುರದ ತಲಾ ಒಬ್ಬರಿಗೆ ಕೊರೋನಾ ತಗುಲಿದೆ. ಆದರೆ, ಯಾವುದೇ ಸಾವು ಸಂಭವಿಸಿಲ್ಲ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.