ವಿದೇಶ

ಡೊನಾಲ್ಡ್ ಟ್ರಂಪ್ ಬಂಧನಕ್ಕೆ 'ವಾರೆಂಟ್' ಹೊರಡಿಸಿದ ಇರಾನ್!

ವಿಶ್ವದ ದೊಡ್ಡಣ್ಣ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನಕ್ಕಾಗಿ ಇರಾನ್ ವಾರೆಂಟ್ ಹೊರಡಿಸಿದ್ದು,ಇಂಟರ್ ಪೋಲ್ ಸಹಾಯ ಕೇಳಿದೆ.

ಡೊನಾಲ್ಡ್ ಟ್ರಂಪ್ ಬಂಧನಕ್ಕೆ 'ವಾರೆಂಟ್' ಹೊರಡಿಸಿದ ಇರಾನ್!
ಡೊನಾಲ್ಡ್ ಟ್ರಂಪ್
Published On :

ತೆಹ್ರನ್: ವಿಶ್ವದ ದೊಡ್ಡಣ್ಣ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನಕ್ಕಾಗಿ ಇರಾನ್  ವಾರೆಂಟ್ ಹೊರಡಿಸಿದ್ದು,ಇಂಟರ್ ಪೋಲ್ ಸಹಾಯ ಕೇಳಿದೆ. 

ಬಾಗ್ದಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಜನವರಿಯಲ್ಲಿ ಡ್ರೋನ್ ದಾಳಿ ನಡೆಸಿ ಜನರಲ್ ಸೂಲೈಮನ್ ಮತ್ತಿತರ ಸಾವಿಗೆ ಕಾರಣವಾಗಿರುವ ಡೊನಾಲ್ಡ್ ಟ್ರಂಪ್ ಹಾಗೂ ಇತರ ಡಜನ್ ವ್ಯಕ್ತಿಗಳ ವಿರುದ್ಧ ಬಂಧನದ ವಾರೆಂಟ್ ಹೊರಡಿಸಲಾಗಿದೆ ಎಂದು ಸ್ಥಳೀಯ ಪ್ರಾಸಿಕ್ಯೂಟರ್ ಒಬ್ಬರು ಇಂದು ಹೇಳಿದ್ದಾರೆ.

ಜನವರಿಯಲ್ಲಿ ಮೂರು ದಾಳಿ ನಡೆಸಿ ಜನರಲ್ ಆಗಿದ್ದ ಖಾಸಿಂ ಸೂಲೈಮನ್ ಹತ್ಯೆಗೆ ಸಂಬಂಧಿಸಿದಂತೆ ಡೊನಾಲ್ಡ್ ಟ್ರಂಪ್ ಹಾಗೂ ಇತರ 30ಕ್ಕೂ ಹೆಚ್ಚು ಮಂದಿಯನ್ನು ಆರೋಪಿಗಳನ್ನಾಗಿ ಇರಾನ್ ಮಾಡಿದ್ದು,ಹತ್ಯೆ , ಭ್ರಷ್ಟಾಚಾರ ಪ್ರಕರಣಗಳನ್ನು ಎದುರಿಸಬೇಕಾಗುತ್ತದೆ ಎಂದು ತೆಹ್ರನ್ ಪ್ರಾಸಿಕ್ಯೂಟರ್ ಅಲಿ ಅಲ್ಕಾಸಿಮೆಹ್ರ್ ಹೇಳಿರುವುದಾಗಿ ಐಎಸ್ಎನ್ ಎ ಸುದ್ದಿಸಂಸ್ಥೆ ಸೋಮವಾರ ವರದಿ ಮಾಡಿದೆ.

ಟ್ರಂಪ್ ಹೊರತುಪಡಿಸಿ ಬೇರೆಯವರನ್ನು ಅಲ್ಕಾಸಿಮೆಹರ್ ಗುರುತಿಸಲಿಲ್ಲ,ಆದರೆ,  ಟ್ರಂಪ್ ಅಧ್ಯಕ್ಷ ಸ್ಥಾನ ಮುಗಿದ ನಂತರವೂ ಇರಾನ್ ತನ್ನ ಪ್ರಕರಣವನ್ನು  ಮುಂದುವರೆಸಲಿದೆ ಎಂದು ಅಲಿ ಹೇಳಿದ್ದಾರೆ.

ಇಂಟರ್ ಪೋಲ್ ತತ್ ಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಟ್ರಂಪ್ ಮತ್ತು ಇತರರಿಗೆ "ರೆಡ್ ನೋಟಿಸ್" ನೀಡಬೇಕೆಂದು ಇರಾನ್  ಕೋರಿದೆ ಎಂದು ಅಲ್ಕಾಸಿಮೆಹ್ರ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.