ಕೋವಿಡ್-19ಗೆ ಬ್ರೆಜಿಲ್ ನಲ್ಲಿ 50 ಸಾವಿರಕ್ಕೂ ಹೆಚ್ಚು ಬಲಿ: ಅತಿ ಹೆಚ್ಚು ಕೊರೋನಾ ಸಾವು ಕಂಡ ಜಗತ್ತಿನ ಎರಡನೇ ರಾಷ್ಟ್ರ
213ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾವೈರಸ್ ಗೆ ಬ್ರೆಜಿಲ್ ನಲ್ಲಿ ಸಾವಿನ ಸಂಖ್ಯೆ 50 ಸಾವಿರ ಗಡಿ ದಾಟಿದೆ. ಆ ಮೂಲಕ ಬ್ರೆಜಿಲ್ ಅತೀ ಹೆಚ್ಚು ಕೊರೋನಾ ಸಾವು ಕಂಡ ಜಗತ್ತಿನ 2ನೇ ರಾಷ್ಟ್ರ ಎಂಬ ಕುಖ್ಯಾಗೆ ಭಾಜನವಾಗಿದೆ.

ಬ್ರೆಸಿಲಿಯಾ: 213ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾವೈರಸ್ ಗೆ ಬ್ರೆಜಿಲ್ ನಲ್ಲಿ ಸಾವಿನ ಸಂಖ್ಯೆ 50 ಸಾವಿರ ಗಡಿ ದಾಟಿದೆ. ಆ ಮೂಲಕ ಬ್ರೆಜಿಲ್ ಅತೀ ಹೆಚ್ಚು ಕೊರೋನಾ ಸಾವು ಕಂಡ ಜಗತ್ತಿನ 2ನೇ ರಾಷ್ಟ್ರ ಎಂಬ ಕುಖ್ಯಾಗೆ ಭಾಜನವಾಗಿದೆ.
ಬ್ರೆಜಿಲ್ ನಲ್ಲಿ ಕಳೆದ 24 ಗಂಟೆಗಳಲ್ಲಿ 17,400 ಹೊಸ ಪ್ರಕರಣಗಳು ಹಾಗೂ ಸೋಂಕಿನಿಂದ 640 ಮಂದಿ ಸಾವಿಗೀಡಾಗಿದ್ದಾರೆ. ಆ ಮೂಲಕ ಬ್ರೆಜಿಲ್ ನಲ್ಲಿ ಸೋಂಕಿತರ ಸಂಖ್ಯೆ 10,85,038ಕ್ಕೆ ಏರಿಕೆಯಾಗಿದ್ದು, ಕೊರೋನಾ ಸಾವಿನ ಸಂಖ್ಯೆ 50,617ಕ್ಕೆ ಏರಿಕೆಯಾಗಿದೆ. ಇನ್ನು ಈ ವರೆಗೂ ಬ್ರೆಜಿಲ್ ನಲ್ಲಿ 5,50,000 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ.
ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಕೋವಿಡ್–19ನಿಂದ ಈವರೆಗೆ 1,19,900 ಜನರು ಮೃತಪಟ್ಟಿದ್ದಾರೆ. ಅಲ್ಲಿನ ಒಟ್ಟು ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ 22,00,000 ದಾಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


