ಭಾರತದ ಪ್ರತಿರೋಧ ನಿಗ್ರಹಿಸುವುದು ಮತ್ತು ಅಮೆರಿಕಾ ಜೊತೆಗಿನ ಸಂಬಂಧಕ್ಕೆ ಅಡ್ಡಿ ಮಾಡುವುದು ಚೀನಾದ ಈಗಿನ ಗುರಿ: ವರದಿ
ಲಡಾಖ್ ನಲ್ಲಿ ಭಾರತೀಯ ಭೂ ಪ್ರದೇಶಗಳ ಮೇಲೆ ಚೀನಾ ಆಕ್ರಮಣದ ಮಧ್ಯೆ ಅಮೆರಿಕಾದೊಂದಿಗೆ ಬೆಳೆಯುತ್ತಿರುವ ಸಂಬಂಧಕ್ಕೆ ಅಡ್ಡಿಪಡಿಸುವುದು ಮತ್ತು ದಕ್ಷಿಣ ಏಷ್ಯಾದಲ್ಲಿ ಭಾರತದ ಪ್ರತಿರೋಧ ನಿಗ್ರಹಿಸುವುದು ಚೀನಾದ ಈಗಿನ ಗುರಿಯಾಗಿದೆ ಎಂದು ಅಮೆರಿಕಾದ ಪ್ರಭಾವಿ ಥಿಂಕ್ ಥ್ಯಾಂಕ್ ಅಭಿಪ್ರಾಯಪಟ್ಟಿದೆ.

ವಾಷಿಂಗ್ಟನ್: ಲಡಾಖ್ ನಲ್ಲಿ ಭಾರತೀಯ ಭೂ ಪ್ರದೇಶಗಳ ಮೇಲೆ ಚೀನಾ ಆಕ್ರಮಣದ ಮಧ್ಯೆ ಅಮೆರಿಕಾದೊಂದಿಗೆ ಬೆಳೆಯುತ್ತಿರುವ ಸಂಬಂಧಕ್ಕೆ ಅಡ್ಡಿಪಡಿಸುವುದು ಮತ್ತು ದಕ್ಷಿಣ ಏಷ್ಯಾದಲ್ಲಿ ಭಾರತದ ಪ್ರತಿರೋಧ ನಿಗ್ರಹಿಸುವುದು ಚೀನಾದ ಈಗಿನ ಗುರಿಯಾಗಿದೆ ಎಂದು ಅಮೆರಿಕಾದ ಪ್ರಭಾವಿ ಥಿಂಕ್ ಥ್ಯಾಂಕ್ ಅಭಿಪ್ರಾಯಪಟ್ಟಿದೆ.
ಚೀನಾ ಪಾಕಿಸ್ತಾನ ಹಾಗೂ ಶ್ರೀಲಂಕಾದೊಂದಿಗೆ ಆಳವಾದ ಸಂಬಂಧ ಹೊಂದುವ ಮೂಲಕ ಈ ಪ್ರದೇಶದಲ್ಲಿ ಪ್ರಾಬಲ್ಯ ಮೆರೆಯಲು ಪ್ರಯತ್ನಿಸುತ್ತಿದೆ ಎಂದು ಹಡ್ಸನ್ ಇನ್ಸಿಟಿಟ್ಯೂಟ್ ನಡೆಸಿದ ಕೊರೋನಾ ಯುಗದಲ್ಲಿ ಅಮೆರಿಕಾ- ಚೀನಾ ಸ್ಪರ್ಧೆ ಕುರಿತ ಜಾಗತಿಕ ಸರ್ವೆಯಲ್ಲಿ ವರದಿಯಾಗಿದೆ.
ಕೊಲ್ಲಿ ಮತ್ತು ಪಶ್ಚಿಮ ಹಿಂದೂ ಮಹಾಸಾಗರದಲ್ಲಿ ಅಮೆರಿಕದ ಪ್ರಾಮುಖ್ಯತೆಯನ್ನು ಪ್ರಶ್ನಿಸುವ ಚೀನಾದ ದೊಡ್ಡ ಕಾರ್ಯತಂತ್ರದ ಉದ್ದೇಶಕ್ಕೆ ದಕ್ಷಿಣ ಏಷ್ಯಾ ಪ್ರಮುಖವಾಗಿದೆ ಎಂದು ಈ ವಾರ ಬಿಡುಗಡೆಯಾದ ವರದಿ ತಿಳಿಸಿದೆ. ಪ್ರಪಂಚದಾದ್ಯಂತ ಕೊರೋನಾವೈರಸ್ ಸಾಂಕ್ರಾಮಿಕ ರೋಗವನ್ನು ರಾಜಕೀಯ, ಕಾರ್ಯತಂತ್ರ ಮತ್ತು ಆರ್ಥಿಕ ಲಾಭಕ್ಕಾಗಿ ಬಳಸಿಕೊಳ್ಳುವ ಚೀನಾದ ಪ್ರಯತ್ನಗಳನ್ನು ಅಧ್ಯಯನವು ಗಂಭೀರವಾಗಿ ಪರಿಗಣಿಸಿದೆ.
ದಕ್ಷಿಣ ಏಷ್ಯಾದಲ್ಲಿ ಚೀನಾಕ್ಕೆ ನಿಜವಾದ ಪ್ರತಿಸ್ಪರ್ಧಿ ಭಾರತವೇ ಆಗಿದೆ.ದಕ್ಷಿಣ ಏಷ್ಯಾದಲ್ಲಿ, ಆಗ್ನೇಯ, ಪೂರ್ವ ಅಥವಾ ಮಧ್ಯ ಏಷ್ಯಾಕ್ಕಿಂತ ಭಿನ್ನವಾದಂತಹ ನೈಸರ್ಗಿಕ ಪ್ರಾಬಲ್ಯವಿದೆ: ಭಾರತ. ಚೀನಾ ಅದನ್ನು ಸುಲಭವಾಗಿ ಪಕ್ಕಕ್ಕೆ ಸರಿಸಲು ಸಾಧ್ಯವಿಲ್ಲ ಎಂಬುದಾಗಿ ವರದಿ ಹೇಳಿದೆ.
ಚೀನಾವನ್ನು ಭಾರತ ಸಮಾನ ರಾಷ್ಟ್ರದ ರೀತಿಯಲ್ಲಿ ನೋಡುತ್ತಿದೆ.ಅಲ್ಲದೇ ಅದರ ಗುರಿಗಳ ಬಗ್ಗೆ ಜಾಗರೂಕವಾಗಿದೆ. ಪ್ರಸ್ತುತದಲ್ಲಿನ ಪ್ರಾದೇಶಿಕ ಗಡಿ ವಿವಾದ ಚೀನಾ ಮಂಗಳ ಗ್ರಹದಲ್ಲಿನ ಸಂಬಂಧ ಮೊದಲಾದವೆಲ್ಲವೂ ಸಹಭಾಗಿತ್ವಕ್ಕಿಂತಲೂ ಪ್ರತಿಸ್ಪರ್ಧೆಯನ್ನೆ ಉಂಟುಮಾಡಿವೆ.ಆದಾಗ್ಯೂ, ಭಾರತಕ್ಕೆ ಅಮೆರಿಕಾ,ಜಪಾನ್ ಮತ್ತಿತರ ರಾಷ್ಟ್ರಗಳು ಬೆಂಬಲಿಸಬೇಕಾದ ಅಗತ್ಯವಿದೆ ಎಂದು ವರದಿ ಒತ್ತಾಯಿಸಿದೆ.
ಒಂದು ವೇಳೆ ಭಾರತ ಪ್ರಾದೇಶಿಕ ಪೂರೈಕೆದಾರ ಪಾತ್ರವನ್ನು ವಹಿಸಬೇಕೆಂದು ಅಮೆರಿಕಾ ಬಯಸಿದರೆ ಮತ್ತು ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಅಮೆರಿಕಾ ಬಯಸಿದರೆ ಭಾರತದ ಆರ್ಥಿಕ ಮತ್ತು ಮಿಲಿಟರಿ ಸಾಮರ್ಥ್ಯಗಳನ್ನು ಹೆಚ್ಚಿಸಲು ಸಹಾಯ ಮಾಡಬೇಕಾಗುವುದು, ಚೀನಾದಿಂದ ಹೊರಗೆ ಬರುವ ಅಮೆರಿಕಾ ಮತ್ತು ಜಪಾನ್ ಕಂಪನಿಗಳಿಗೆ ಭಾರತದಲ್ಲಿ ನೆಲೆಯೂರಲು ಕಾರ್ಯತಂತ್ರ ರೂಪಿಸಬೇಕಾಗುತ್ತದೆ ಎಂದು ವರದಿ ಉಲ್ಲೇಖಿಸಿದೆ.
ಹಡ್ಸನ್ ಸಂಸ್ಥೆಯ ವರದಿಯಲ್ಲಿ ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾವನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗಿದ್ದು, ಹಣದ ಮೂಲಕ ಚೀನಾದ ಕಡೆಯಲ್ಲಿರುವ ಶ್ರೀಲಂಕಾ ಮತ್ತು ಪಾಕಿಸ್ತಾನವನ್ನು ತಮ್ಮ ಮೈತ್ರಿಯತ್ತ ಅಮೆರಿಕಾ ಪ್ರಯತ್ನಿಸಬಹುದು ಎಂದು ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


