ವಿದೇಶ

ವಿಶ್ವದಲ್ಲೇ ಭಾರತದ್ದು ಅತಿದೊಡ್ಡ ಹಾಗೂ ಅನುಭವಿ ಪರ್ವತ ಸೇನಾ ದಳ: ಚೀನಾ ಶ್ಲಾಘನೆ!

ಪೂರ್ವ ಲಡಾಖ್ ನಲ್ಲಿ ಸೇನೆ ಜಮಾಯಿಸಿ ಭಾರತಕ್ಕೆ ಉಪಟಳ ನೀಡುತ್ತಿರುವ ಚೀನಾ ಇದೀಗ ಭಾರತದ್ದು ಅತೀ ದೊಡ್ಡ ಹಾಗೂ ಅನುಭವಿ ಪರ್ವತ ಸೇನಾ ದಳ ಎಂದು ಶ್ಲಾಘಿಸಿದೆ.

ವಿಶ್ವದಲ್ಲೇ ಭಾರತದ್ದು ಅತಿದೊಡ್ಡ ಹಾಗೂ ಅನುಭವಿ ಪರ್ವತ ಸೇನಾ ದಳ: ಚೀನಾ ಶ್ಲಾಘನೆ!
ಭಾರತೀಯ ಸೇನೆ
Published On :

ಜೀಜಿಂಗ್: ಪೂರ್ವ ಲಡಾಖ್ ನಲ್ಲಿ ಸೇನೆ ಜಮಾಯಿಸಿ ಭಾರತಕ್ಕೆ ಉಪಟಳ ನೀಡುತ್ತಿರುವ ಚೀನಾ ಇದೀಗ ಭಾರತದ್ದು ಅತೀ ದೊಡ್ಡ ಹಾಗೂ ಅನುಭವಿ ಪರ್ವತ ಸೇನಾ ದಳ ಎಂದು ಶ್ಲಾಘಿಸಿದೆ. 

ಭಾರತದ ಪರ್ವತ ಸೇನಾ ಪಡೆ ಯಾವುದೇ ಪ್ರತಿಕೂಲ ವಾತವರಣದಲ್ಲೂ ಎಂತಹುದೇ ದುರ್ಗಮ ಬೆಟ್ಟ ಗುಡ್ಡಗಳಲ್ಲಿ ಶತ್ರುಪಡೆಯ ವಿರುದ್ಧ ಹೋರಾಡಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಚೀನಾದ ಮಿಲಿಟರಿ ತಜ್ಞರೊಬ್ಬರು ಪ್ರಶಂಸಿಸಿದ್ದಾರೆ. 

ಭಾರತದ ಪರ್ವತ ಸೇನಾ ಪಡೆಗೆ ಬಹುಪರಾಕ್ ಹೇಳಿರುವುದು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್ಎ) ಯುದ್ಧೋಪಕರಣಗಳನ್ನು ತಯಾರಿಸಿಕೊಡುವ ಬಹುದೊಡ್ಡ ಸಂಸ್ಥೆಯ ತಜ್ಞನಾಗಿರುವ ಹುಯಾಂಗ್ ಗ್ಯೂಝಿ. 

ಇಂತಹ ಛಾಯಿ ಭಾರತದ ಪರ್ವತ ಸೇನಾ ಪಡೆಗೆ ಬಿಟ್ಟರೆ ಅಮೆರಿಕಾ, ರಷ್ಯಾ ಅಥವಾ ಇನ್ಯಾವ ಯುರೋಪಿಯನ್ ರಾಷ್ಟ್ರಗಳಿಗಿಲ್ಲ ಎಂದು ಗ್ಯೂಝಿ ಮಿಲಿಟರಿ ಪತ್ರಿಕೆಯಲ್ಲಿ ಬರೆದುಕೊಂಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.