Ladakh standoff

ಮೋದಿ- ಕ್ಸೀ ಜಿನ್ಪಿಂಗ್ ದ್ವಿಪಕ್ಷೀಯ ಮಾತುಕತೆ: ಗಸ್ತು ಒಪ್ಪಂದಕ್ಕೆ ಉಭಯ ನಾಯಕರ ಅನುಮೋದನೆ
ಪೂರ್ವ ಲಡಾಖ್‌ನಲ್ಲಿನ ನೈಜ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಭಾರತ ಮತ್ತು ಚೀನಾ ತಮ್ಮ ಮಿಲಿಟರಿಗಳಿಂದ ಗಸ್ತು ತಿರುಗುವ ಒಪ್ಪಂದವನ್ನು ದೃಢಪಡಿಸಿದ ಎರಡು ದಿನಗಳ ನಂತರ ಈ ದ್ವಿಪಕ್ಷೀಯ ಸಭೆ ನಡೆದಿದ್ದು, ಇದು 4 ವರ್ಷಗಳ ಕಾಲದ ಬಿಕ್ಕಟ್ಟನ್ನು ಕೊನೆಗೊಳಿಸುವವಲ್ಲಿ ಪ್ರಮುಖ ಪ್ರಗತಿಯಾಗಿದೆ.

ಲಡಾಖ್ ಬಿಕ್ಕಟ್ಟು: ಭಾರತ-ಚೀನಾ ಮತ್ತೊಂದು ಸುತ್ತಿನ ಮಾತುಕತೆ; ಚರ್ಚೆಯಲ್ಲಿ ಕಂಡು ಬಾರದ ಪ್ರಗತಿ
ಭಾರತ ಮತ್ತು ಚೀನಾದ ಅಧಿಕಾರಿಗಳು ಬುಧವಾರ ಬೀಜಿಂಗ್‌ನಲ್ಲಿ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ) ಉದ್ದಕ್ಕೂ ಇರುವ ಬಿಕ್ಕಟ್ಟಿನ ಕುರಿತು ಬುಧವಾರ ಮತ್ತೊಂದು ಸುತ್ತಿನ ರಾಜತಾಂತ್ರಿಕ ಮಾತುಕತೆ ನಡೆಸಿದ್ದು, ಈ ಚರ್ಚೆಯಲ್ಲಿ ಯಾವುದೇ ಪ್ರಗತಿಯ ಲಕ್ಷಣಗಳು ಕಂಡು ಬಂದಿಲ್ಲ ಎಂದು ತಿಳಿದುಬಂದಿದೆ.

ಚೀನಾದಿಂದ ಯಾವುದೇ ಬೆದರಿಕೆಯನ್ನು ದೇಶ ತಡೆಯುವಲ್ಲಿ ಎಐಎಫ್ ನ ಕಠಿಣ ನಿಲುವು ನೆರವು- ಬದೌರಿಯಾ
ಪೂರ್ವ ಲಡಾಖ್‌ನಲ್ಲಿ ಚೀನಾದೊಂದಿಗಿನ ವಿವಾದಕ್ಕೆ ಪ್ರತಿಕ್ರಿಯೆಯಾಗಿ ಭಾರತೀಯ ವಾಯುಪಡೆ ತಾಳಿದ ಕಠಿಣ ನಿಲುವು ಎದುರಾಳಿಯನ್ನು ದೊಡ್ಡಮಟ್ಟದಲ್ಲಿ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ವಾಯುಸೇನೆ ಮುಖ್ಯಸ್ಥ ಆರ್ ಕೆ ಎಸ್ ಬದೌರಿಯಾ ಹೇಳಿದ್ದಾರೆ.

ವಿದೇಶಿ ನೆಲದಲ್ಲೂ ನಿಂತು ನಮ್ಮ ಶತ್ರುಗಳನ್ನು ಎದುರಿಸುವ ತಾಕತ್ತು ಈಗ ಭಾರತಕ್ಕಿದೆ: ಅಜಿತ್ ದೋವಲ್
ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡಲು ಯಾರಾದರು ಯತ್ನಿಸಿದರೆ ಅವರನ್ನು ವಿದೇಶಿ ನೆಲದಲ್ಲೂ ನಿಂತು ಎದುರಿಸುವ ತಾಕತ್ತು ಈಗ ಭಾರತಕ್ಕಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪರೋಕ್ಷವಾಗಿ ಚೀನಾಗೆ ಟಾಂಗ್ ನೀಡಿದ್ದಾರೆ.

ಲಡಾಕ್ ನ ಪ್ರತಿ ಇಂಚು ಭೂಮಿ ಬಗ್ಗೆಯೂ ಎಚ್ಚರವಾಗಿದ್ದೇವೆ, ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ: ಅಮಿತ್ ಶಾ
ಲಡಾಕ್ ನಲ್ಲಿ ಚೀನಾದೊಂದಿಗೆ ಕಳೆದ ಐದೂವರೆ ತಿಂಗಳಿನಿಂದ ಸತತ ಸೇನೆಯ ಸಂಘರ್ಷದ ಬಗ್ಗೆ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಪ್ರತಿ ಇಂಚು ಭೂಮಿ ಬಗ್ಗೆ ಕಾಳಜಿ ಹೊಂದಿದ್ದು ಅದನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಲಡಾಖ್ ಸಂಘರ್ಷ: ಪಾಕ್ ನಂತರ ಚೀನಾದ ಕುತಂತ್ರ ಎಂದ ರಾಜನಾಥ್ ಸಿಂಗ್
ಪಾಕಿಸ್ತಾನದ ನಂತರ ಚೀನಾ ಕೂಡ ಭಾರತದ ಗಡಿಯಲ್ಲಿ ವಿವಾದವನ್ನು ಸೃಷ್ಟಿಸುತ್ತಿದೆ, ಅದು "ಕುತಂತ್ರದ" ಒಂದು ಭಾಗ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ ಹೇಳಿದ್ದಾರೆ.

ಪೂರ್ವ ಲಡಾಖ್ ನ ಕಾರ್ಗತ್ತಲಲ್ಲಿ ಆಗಸದಲ್ಲಿ ಆರ್ಭಟಿಸಿದ ಚಿನೂಕ್ ಹೆಲಿಕಾಪ್ಟರ್: ವಿಡಿಯೋ!
ಪೂರ್ವ ಲಡಾಖ್ ನಲ್ಲಿ ಚೀನಾ ಸೇನೆ ಉಪಟಳ ನೀಡುತ್ತಿರುವ ಹಿನ್ನೆಲೆಯಲ್ಲಿ ಸಮರ ಸಿದ್ಧತೆ ನಡೆಸುತ್ತಿರುವ ಭಾರತೀಯ ವಾಯುಸೇನೆಯೂ ರಾತ್ರಿಯ ಕಾರ್ಗತ್ತಲಲ್ಲಿ ಆಗಸದಲ್ಲಿ ಚಿನೂಕ್ ಹೆಲಿಕಾಪ್ಟರ್ ಅಬ್ಬರಿಸಿದೆ.

ಏಕಕಾಲದಲ್ಲಿ ಪಾಕಿಸ್ತಾನ-ಚೀನಾ ವಿರುದ್ಧ ಯುದ್ಧ ಮಾಡಲು ಭಾರತೀಯ ಸೇನೆ ಸನ್ನದ್ಧ: ಐಎಎಫ್ ಮುಖ್ಯಸ್ಥ ಆರ್ ಕೆಎಸ್ ಭದುರಿಯಾ
ಪೂರ್ವ ಲಡಾಖ್‌ನಲ್ಲಿ ಚೀನಾದ ಪಿಎಲ್‌ಎ ಜೊತೆ ನಡೆಯುತ್ತಿರುವ ಗಡಿ ವಿವಾದದ ನಡುವೆಯೇ, ಭಾರತೀಯ ವಾಯುಸೇನೆ ಏಕಕಾಲದಲ್ಲಿ ಪಾಕಿಸ್ತಾನ-ಚೀನಾ ವಿರುದ್ಧ ಯುದ್ಧ ಮಾಡಲು ಸರ್ವಸನ್ನದ್ಧವಾಗಿದೆ ಎಂದು ಐಎಎಫ್ ಮುಖ್ಯಸ್ಥ ಆರ್ ಕೆಎಸ್ ಭದುರಿಯಾ ಹೇಳಿದ್ದಾರೆ.

ತಂತ್ರಕ್ಕೆ ಪ್ರತಿತಂತ್ರ: ಚೀನಾಗೆ ಸೆಡ್ಡು ಹೊಡೆಯಲು ಗಡಿಯಲ್ಲಿ ಸಬ್ ಸಾನಿಕ್ 'ನಿರ್ಭಯಾ ಕ್ಷಿಪಣಿ' ನಿಯೋಜಿಸಿದ ಭಾರತ!
ಪೂರ್ವ ಲಡಾಕ್ ನಲ್ಲಿ ಸದ್ಯ ಅತ್ಯಂತ ಕಠಿಣ, ಅಹಿತಕರ ವಾತಾವರಣ ನಿರ್ಮಾಣವಾಗಿದ್ದು ಚೀನಾವನ್ನು ಎದುರಿಸಲು ಗಡಿಯಲ್ಲಿ 800 ಕಿ.ಮೀ ದೂರಕ್ಕೆ ಸಾಗಬಲ್ಲ ನಿರ್ಭಯಾ ಕ್ಷಿಪಣಿ ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನೂ ಭಾರತ ನಿಯೋಜಿಸಿದೆ.

