ವಿದೇಶಿ ನೆಲದಲ್ಲೂ ನಿಂತು ನಮ್ಮ ಶತ್ರುಗಳನ್ನು ಎದುರಿಸುವ ತಾಕತ್ತು ಈಗ ಭಾರತಕ್ಕಿದೆ: ಅಜಿತ್ ದೋವಲ್
ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡಲು ಯಾರಾದರು ಯತ್ನಿಸಿದರೆ ಅವರನ್ನು ವಿದೇಶಿ ನೆಲದಲ್ಲೂ ನಿಂತು ಎದುರಿಸುವ ತಾಕತ್ತು ಈಗ ಭಾರತಕ್ಕಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪರೋಕ್ಷವಾಗಿ ಚೀನಾಗೆ ಟಾಂಗ್ ನೀಡಿದ್ದಾರೆ.

ನವದೆಹಲಿ: ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡಲು ಯಾರಾದರು ಯತ್ನಿಸಿದರೆ ಅವರನ್ನು ವಿದೇಶಿ ನೆಲದಲ್ಲೂ ನಿಂತು ಎದುರಿಸುವ ತಾಕತ್ತು ಈಗ ಭಾರತಕ್ಕಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪರೋಕ್ಷವಾಗಿ ಚೀನಾಗೆ ಟಾಂಗ್ ನೀಡಿದ್ದಾರೆ.
ಭಾರತ ಇಲ್ಲಿಯವರೆಗೂ ಯಾರ ಮೇಲೂ ಮೊದಲಿಗೆ ದಾಳಿ ಮಾಡಿಲ್ಲ. ಆದರೆ ಹೊಸ ಕಾರ್ಯತಂತ್ರದ ಭಾಗವಾಗಿ ಭದ್ರತಾ ಬೆದರಿಕೆಗಳನ್ನು ಎದುರಿಸಲು ನಾವು ಪೂರ್ವಭಾವಿಯಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ಹೇಳಿದ್ದಾರೆ. ಪೂರ್ವ ಲಡಾಖ್ ನಲ್ಲಿ ಚೀನಾ ಸೇನೆ ಉಪಟಳ ನೀಡುತ್ತಿರುವ ಬೆನ್ನಲ್ಲೇ ಅಜಿತ್ ದೋವಲ್ ರ ಈ ಹೇಳಿಕೆ ಹೆಚ್ಚು ಮಹತ್ವ ಪಡೆದುಕೊಂಡಿದೆ.
ರಿಷಿಕೇಶದಲ್ಲಿ ಪರಮಾರ್ಥ್ ನಿಕೇತನ್ ಆಶ್ರಮದಲ್ಲಿ ಮಾತನಾಡಿದ ಅಜಿತ್ ದೋವಲ್ ಅವರು ನಮ್ಮ ಶತ್ರುಗಳನ್ನು ಎದುರಿಸಲು ನಮ್ಮ ನೆಲವೇ ಅಲ್ಲ. ವಿದೇಶಿ ನೆಲದಲ್ಲೂ ನಿಂತು ಹೋರಾಟ ಮಾಡುತ್ತೇವೆ. ಎಲ್ಲಿಂದ ನಮಗೆ ಬೆದರಿಕೆ ಬರುತ್ತದೆಯೋ ಅಲ್ಲಿಗೆ ಭಾರತ ಯುದ್ಧವನ್ನು ತೆಗೆದುಕೊಂಡು ಹೋಗುತ್ತದೆ ಎಂದು ಹೇಳಿದ್ದಾರೆ.
ಇದೇ ವೇಳೆ ಅಜಿತ್ ದೋವಲ್ ಅವರು ಈ ಹೇಳಿಕೆಯನ್ನು ಯಾವುದೇ ಒಂದು ದೇಶವನ್ನು ಗುರಿಯಾಗಿಸಿಕೊಂಡು ಹೇಳಿದ್ದಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


