ಕನ್ನಡ ಸೇರಿ 14 ಭಾರತೀಯ ಭಾಷೆಗಳಲ್ಲಿ ಅಮೆರಿಕಾ ನೆಲದಲ್ಲಿ ಜೋ ಬಿಡೆನ್ ಪ್ರಚಾರ!
ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರ ಎದುರಾಳಿ ಡೆಮಾಕ್ರಟಿಕ್ ಪಕ್ಷದ ಜೋ ಬಿಡನ್ ಚುನಾವಣಾ ಪ್ರಚಾರ ಭಾರತೀಯ ಮೂಲದ ಮತದಾರರ ಮೆಚ್ಚಿಸುವ ರೀತಿ ಸಜ್ಜುಗೊಳ್ಳುತ್ತಿದೆ.

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರ ಎದುರಾಳಿ ಡೆಮಾಕ್ರಟಿಕ್ ಪಕ್ಷದ ಜೋ ಬಿಡನ್ ಚುನಾವಣಾ ಪ್ರಚಾರ ಭಾರತೀಯ ಮೂಲದ ಮತದಾರರ ಮೆಚ್ಚಿಸುವ ರೀತಿ ಸಜ್ಜುಗೊಳ್ಳುತ್ತಿದೆ.
ಅಧ್ಯಕ್ಷೀಯ ಚುನಾವಣೆಯಲ್ಲಿ ಅತ್ಯಂತ ಪ್ರಭಾವಶಾಲಿಯಾಗಿರುವ ಭಾರತೀಯ ಮೂಲದ ಮತದಾರರನ್ನು ತಮ್ಮತ್ತ ಸೆಳೆಯಲು ಜೋ ಬಿಡೆನ್ ತಮ್ಮ ಪ್ರಚಾರ ಅಭಿಯಾನವನ್ನು 14 ಭಾಷೆಗಳಲ್ಲಿ ನಡೆಸಲು ಯೋಜಿಸಿದ್ದಾರೆ. ಪ್ರಮುಖ ರಾಜ್ಯಗಳಲ್ಲಿ ಡೆಮಾಕ್ರಟಿಕ್ , ರಿಪಬ್ಲಿಕನ್ ಪಕ್ಷಗಳು ಗೆಲ್ಲುವ ಸಾಧ್ಯತೆಗಳನ್ನು ಭಾರತೀಯ ಮೂಲದ ಈ ಮತದಾರರು ನಿರ್ಧರಿಸಲಿದ್ದಾರೆ.
ಜೋ ಬಿಡೆನ್ ಅಧ್ಯಕ್ಷೀಯ ಚುನಾವಣೆಯಲ್ಲಿ ನಿರ್ಣಾಯಕ ಭಾರತೀಯ ಮತದಾರರನ್ನು ಸೆಳೆಯಲು ಪ್ರಭಾವಶಾಲಿ ಘೋಷಣೆ ಸಿದ್ದಪಡಿಸುತ್ತಿದ್ದಾರೆ. "ಅಮೆರಿಕಾ ನಾಯಕ್ ಕೈಸಾ ಹೋ, ಜೋ ಬಿಡೆನ್ ಜೈಸಾ ಹೋ" (ಅಮೆರಿಕಾದ ನಾಯಕ ಬಿಡೆನ್‌ನಂತೆ ಇರಬೇಕು) ಎಂದು ಹಿಂದಿ, ಕನ್ನಡ ಹಾಗೂ ತೆಲುಗು ಸೇರಿದಂತೆ ಹಲವೆ ಭಾರತೀಯ ಭಾಷೆಗಳಲ್ಲಿ ಘೋಷಣೆ ಪ್ರಕಟಿಸಲಿದ್ದಾರೆ.
2006 ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ “ಅಬ್ ಕಿ ಟ್ರಂಪ್ ಸರ್ಕಾರ್”(ಈ ಬಾರಿ ಟ್ರಂಪ್ ಸರ್ಕಾರ) ಘೋಷಣೆ ಭಾರತೀಯರ ಮನಸ್ಸು ಸೆಳೆಯುವಲ್ಲಿ ಸಫಲಗೊಂಡಿದ್ದ ಹಿನ್ನಲೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಪ್ರಚಾರವನ್ನು ಒಟ್ಟು 14 ಭಾರತೀಯ ಭಾಷೆಗಳಲ್ಲಿ ನಡೆಸಲು ಜೋ ಬಿಡೆನ್‌ರ ಪ್ರಚಾರ ತಂತ್ರಜ್ಞರು ಯೋಜನೆ ಸಿದ್ಧಪಡಿಸಿದ್ದಾರೆ. ಭಾರತೀಯ ಮೂಲದ ಮತದಾರರನ್ನು ಅವರ ಮಾತೃಭಾಷೆಯಲ್ಲಿ ತಲುಪುವ ಯೋಜನೆ ರೂಪಿಸಲಾಗಿದೆ ಎಂದು ಬಿಡೆನ್ ಪ್ರಚಾರ ತಂಡದ ಸದಸ್ಯ ಅಜಯ್ ಭುಟೋರಿಯಾ ಹೇಳಿದ್ದಾರೆ.
ಕನ್ನಡ, ತೆಲುಗು, ಹಿಂದಿ, ಪಂಜಾಬಿ, ತಮಿಳು, ಬಂಗಾಳಿ, ಉರ್ದು, ಮಲಯಾಳಂ, ಒರಿಯಾ, ಮರಾಠಿ ಹಾಗೂ ನೇಪಾಳಿ ಸೇರಿದಂತೆ 14 ಭಾಷೆಗಳಲ್ಲಿ ಪ್ರಚಾರ ಅಭಿಯಾನ ನಡೆಸಲು ಜೋ ಬಿಡನ್ ಅವರ ಪ್ರಚಾರ ತಂಡದೊಂದಿಗೆ ಅಜಯ್ ಭಟೋರಿಯಾ ಪ್ರಯತ್ನ ನಡೆಸುತ್ತಿದ್ದಾರೆ.
ಭಾರತದಲ್ಲಿ ಚುನಾವಣಾ ಪ್ರಚಾರ ಮಾದರಿಯಲ್ಲಿ , ಜೋ ಬಿಡೆನ್ ಪ್ರಚಾರದಲ್ಲಿ ಸಂಭ್ರಮ ಮೂಡಿಸಲು ಪ್ರಯತ್ನಿಸುತ್ತಿದ್ದೇವೆ. ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಮತದಾರರಲ್ಲಿ ಉತ್ಸಾಹ ಮೂಡಿಸುವಂತೆ “ಅಮೆರಿಕಾ ನೇತ.. ಕೈಸಾ ಹೋ, ಬಿಡೆನ್ ಜೈಸಾ ಹೋ ಘೋಷಣೆಯನ್ನು ವ್ಯಾಪಕವಾಗಿ ಕೈಗೊಳ್ಳಲು ಯೋಜಿಸಲಾಗಿದೆ. ನವೆಂಬರ್ ೩ ರಂದು ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬಿಡನ್ ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಎದುರಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


