ಕೋವಿಡ್ ಸೋಂಕಿಗೆ ತುತ್ತಾದ ಜಗತ್ತಿನ ಮೊದಲ ನಾಯಿ ಮೃತ್ಯು
ಅಮೆರಿಕಾದಲ್ಲಿನ ಕೋವಿಡ್ 19 ಸೋಂಕು ದೃಢ ಪಟ್ಟಿದ್ದ ಜರ್ಮನ್ ಷಫರ್ಡ್ ನಾಯಿಯೊಂದು ನ್ಯೂಯಾರ್ಕ್ ನಲ್ಲಿ ಮೃತಪಟ್ಟಿದೆ.

ನ್ಯೂಯಾರ್ಕ್: ಅಮೆರಿಕಾದಲ್ಲಿನ ಕೋವಿಡ್ 19 ಸೋಂಕು ದೃಢ ಪಟ್ಟಿದ್ದ ಜರ್ಮನ್ ಷಫರ್ಡ್ ನಾಯಿಯೊಂದು ನ್ಯೂಯಾರ್ಕ್ ನಲ್ಲಿ ಮೃತಪಟ್ಟಿದೆ.
ರಾಬರ್ಟ್ ಹಾಗೂ ಅಲಿಸನ್ ಹಲವಾರು ವಾರಗಳಿಂದ ಕೊರೋನಾವೈರಸ್ ನಿಂದ ಬಳಲುತ್ತಿದ್ದರು. ಈ ನಡುವೆ ಏಪ್ರಿಲ್ ಮಧ್ಯದಲ್ಲಿ ತಮ್ಮ 7 ವರ್ಷದ ನಾಯಿ ಜರ್ಮನ್ ಷೆಫರ್ಡ್ ಗೆ ಸಹ ಉಸಿರಾಟದ ತೊಂದರೆಗಳು ಕಾಣಿಸಿದ್ದವು ಸ್ಟೇಟನ್ ದ್ವೀಪದ ರಾಬರ್ಟ್ ಮತ್ತು ಆಲಿಸನ್ ಮಹೋನಿ ನ್ಯಾಷನಲ್ ಜಿಯಾಗ್ರಫಿಕ್‌ಗೆ ತಿಳಿಸಿದರು. ಪಶುವೈದ್ಯರು ಮೇ ನಲ್ಲಿ ನಾಯಿಯನ್ನು ಪರೀಕ್ಷಿಸಿದರು ಮತ್ತು ಕೋವಿಡ್ ಸೋಂಕಿರುವುದು ಸಾಬೀತಾಗಿದೆ.
ಯು.ಎಸ್. ಕೃಷಿ ಇಲಾಖೆ ಜೂನ್‌ನಲ್ಲಿ ನ್ಯೂಯಾರ್ಕ್ ರಾಜ್ಯದ ಜರ್ಮನ್ ಷಫರ್ಡ್ ಕೋವಿಡ್ 19 ಸೋಂಕಿಗೆ ಒಳಪಟ್ಟ ದೇಶದ ಮೊದಲ ನಾಯಿ ಎಂದು ಘೋಷಿಸಿದೆ, ಆದರೆ ಮಾಲೀಕರ ಹೆಸರು ಬಹಿರಂಗಪಡಿಸಿಲ್ಲ.
ಏಪ್ರಿಲ್ ನಲ್ಲಿ ಉಸಿರಾಟದ ತೊಂದರೆ ಮತ್ತು ಮೂಗಿನಲ್ಲಿ ಲೋಳೆಯ ಸಮಸ್ಯೆನಂತರ ನಾಯಿ ಆರೋಗ್ಯ ಕುಸಿದಿತ್ತು. ಹೆಪ್ಪುಗಟ್ಟಿದ ರಕ್ತವನ್ನು ವಾಂತಿ ಮಾಡಲು ಪ್ರಾರಂಭಿಸಿದ ನಂತರ ಜುಲೈ 11 ರಂದು ನಾಯಿಗೆ ದಯಾಮರಣ ದಯಪಾಲಿಸಲಾಗಿತ್ತು ಎಂದು ನ್ಯಾಷನಲ್ ಜಿಯಾಗ್ರಫಿಕ್ಸ್ ಗೆ ಮಾಹಿತಿನೀಡಲಾಗಿದೆ.
ಕೊರೋನಾವೈರಸ್ ನಿಂದ ನಾಯಿ ಸಾವನ್ನಪ್ಪಿದೆ ಎನ್ನುವುದು ಸಾಬೀತಾಗಿಲ್ಲ, ರಕ್ತ ಪರೀಕ್ಷೆಗಳಲ್ಲಿ ನಾಯಿಯಲ್ಲಿ ಕ್ಯಾನ್ಸರ್ ಲಿಂಫೋಮಾ ವಿರುದ್ಧ ರೋಗನಿರೋಧಕ ವ್ಯವಸ್ಥೆ ಕಂಡುಬಂದಿದೆ ಎಂದು ಪಶುವೈದ್ಯರು ಕುಟುಂಬಕ್ಕೆ ತಿಳಿಸಿದ್ದಾರೆ.
ನ್ಯೂಯಾರ್ಕ್ ನಗರದ ಆರೋಗ್ಯ ಇಲಾಖೆಯ ವಕ್ತಾರರು, ನಾಯಿಯ ಮೃತದೇಹವನ್ನು ನೆಕ್ರೋಪ್ಸಿ ಪರೀಕ್ಷೆಗಾಗಿ ತೆಗೆದುಕೊಳ್ಳಲು ವ್ಯವಸ್ಥೆ ಮಾಡಿದ್ದರು. ಆದರೆ ಪಶುವೈದ್ಯರೊಂದಿಗೆ ಮಾತನಾಡಿದ್ದ ವೇಳೆ ನಾಯಿಯ ಮೃತದೇಹವನ್ನು ಈಗಾಗಲೇ ದಹನ ಮಾಡಲಾಗಿದೆ ಎಂದು ತಿಳಿದುಬಂದಿತು.
ಯುನೈಟೆಡ್ ಸ್ಟೇಟ್ಸ್ ನಲ್ಲಿ ಪ್ರಾಣಿಗಳಲ್ಲಿ ಕೊರೋನಾವೈರಸ್ ದೃಢಪಟ್ತ ಪ್ರಕರಣಗಳ ಪೈಕಿ 12 ನಾಯಿಗಳು, 10 ಬೆಕ್ಕುಗಳು, ಹುಲಿ ಮತ್ತು ಸಿಂಹಗಳೂ ಸೇರಿವೆ. ಕೊರೋನಾ ಹರಡುವಲ್ಲಿ ಪ್ರಾಣಿಗಳು ಮಹತ್ವದ ಪಾತ್ರ ವಹಿಸುತ್ತವೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಸಂಶೋಧನೆಗಳು ಹೇಳಿದ್ದರೂ ಕೆಲವು ಸಂದರ್ಭಗಳಲ್ಲಿ ವೈರಸ್ ಜನರಿಂದ ಪ್ರಾಣಿಗಳಿಗೆ ಹರಡಬಹುದು ಎಂದು ಹೇಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


