ಮಹಾಮಾರಿ ಕೋವಿಡ್ ಸೋಂಕು ಮುಕ್ತವಾಗಿಯೇ ಉಳಿದಿರುವ ಉತ್ತರ ಕೊರಿಯಾ
ಉತ್ತರಕೊರಿಯದಲ್ಲಿ ಯಾವುದೇ ಕೋವಿಡ್ ಪ್ರಕರಣಗಳು ವರದಿಯಾಗಿಲ್ಲ ಎಂದು ಆಡಳಿತಾರೂಢ ಪಕ್ಷದ ಅಧಿಕೃತ ಪತ್ರಿಕೆಯಾದ ರೋಡೋಂಗ್ ಸಿನ್ಮುನ್ ವರದಿ ಮಾಡಿದೆ.

ಸಿಯೋಲ್: ಉತ್ತರಕೊರಿಯದಲ್ಲಿ ಯಾವುದೇ ಕೋವಿಡ್ ಪ್ರಕರಣಗಳು ವರದಿಯಾಗಿಲ್ಲ ಎಂದು ಆಡಳಿತಾರೂಢ ಪಕ್ಷದ ಅಧಿಕೃತ ಪತ್ರಿಕೆಯಾದ ರೋಡೋಂಗ್ ಸಿನ್ಮುನ್ ವರದಿ ಮಾಡಿದೆ.
ಆದರೆ, ಇನ್ನು ಮುಂದೆಯೂ ಈ ಮಾರಣಾಂತಿಕ ಸೋಂಕು ತಡೆಯಲು ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ದೇಶದ ಕೊರೋನಾ-ವೈರಸ್ ಮುಕ್ತ ಸ್ಥಾನ ಕಳೆದುಕೊಳ್ಳಬಹುದು ಎಂದಿದೆ.
ಜುಲೈನಲ್ಲಿ ದಕ್ಷಿಣ ಕೊರಿಯಾದಿಂದ ಆಗಮಿಸಿದ ಓರ್ವ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿತ್ತು. ತಕ್ಷಣ ಸರ್ಕಾರ ಇಡೀ ನಗರವನ್ನು ಸೀಲ್‌ಡೌನ್ ಮಾಡಿ, ಸೋಂಕು ಹರಡದಂತೆ ಕ್ರಮ ಕೈಗೊಂಡಿತ್ತು. ಆದರೆ, ನಂತರ ಆ ವ್ಯಕ್ತಿಯಲ್ಲಿ ಸೋಂಕು ಇಲ್ಲ ಎಂದು ತಿಳಿದುಬಂದಿತ್ತು. ಆ ವ್ಯಕ್ತಿಯನ್ನು ಕ್ವಾರಂಟೈನ್‌ನಲ್ಲಿ ಇರಿಸಿ, ಆತನ ಸಂಪರ್ಕಕ್ಕೆ ಬಂದವರ ತಪಾಸಣೆ ನಡೆಸಲಾಗಿತ್ತು.
ದಕ್ಷಿಣ ಕೊರಿಯಾ ಮತ್ತು ಟರ್ಕ್‌ಮೆನಿಸ್ತಾನ್ ಮತ್ತು ಕೆಲ ದ್ವೀಪ ರಾಷ್ಟ್ರಗಳು ಸೇರಿದಂತೆ ಕೆಲ ದೇಶಗಳು ಕೂಡ ಇಲ್ಲಿಯವರೆಗೆ ಯಾವುದೇ ಕೋವಿಡ್ ಪ್ರಕರಣಗಳನ್ನು ವರದಿ ಮಾಡಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


