ಮುಂದಿನ ವರ್ಷದ ಆರಂಭದವರೆಗೆ ಕೋವಿಡ್-19 ಲಸಿಕೆ ನಿರೀಕ್ಷಿಸಬೇಡಿ: ಡಬ್ಲ್ಯೂಎಚ್ ಒ
ಕೊನೆಯ ಹಂತದ ಪ್ರಯೋಗದೊಂದಿಗೆ ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ದದ ಮೊದಲ ಲಸಿಕೆಯನ್ನು ಅಭಿವೃದ್ಧಿಪಡಿಸುವಲ್ಲಿ ಸಂಶೋಧಕರು ಉತ್ತಮ ಪ್ರಗತಿಯನ್ನು ಸಾಧಿಸುತ್ತಿದ್ದಾರೆ. ಆದರೆ, ಮುಂದಿನ ವರ್ಷದ ಆರಂಭದವರೆಗೂನಿರೀಕ್ಷಿಸಲಾಗದು ಎಂದು ಡಬ್ಲುೂಎಚ್ ಒ ತಜ್ಞರು ಹೇಳಿದ್ದಾರೆ.

ವಾಷಿಂಗ್ಟನ್: ಕೊನೆಯ ಹಂತದ ಪ್ರಯೋಗದೊಂದಿಗೆ ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ದದ ಮೊದಲ ಲಸಿಕೆಯನ್ನು
ಅಭಿವೃದ್ಧಿಪಡಿಸುವಲ್ಲಿ ಸಂಶೋಧಕರು ಉತ್ತಮ ಪ್ರಗತಿಯನ್ನು ಸಾಧಿಸುತ್ತಿದ್ದಾರೆ. ಆದರೆ, ಮುಂದಿನ ವರ್ಷದ ಆರಂಭದವರೆಗೂ
ನಿರೀಕ್ಷಿಸಲಾಗದು ಎಂದು ಡಬ್ಲುೂಎಚ್ ಒ ತಜ್ಞರು ಹೇಳಿದ್ದಾರೆ.
ನ್ಯಾಯಯುತ ಲಸಿಕೆ ವಿತರಣೆ ಖಾತ್ರಿ ನಿಟ್ಟಿನಲ್ಲಿ ಡಬ್ಯೂಎಚ್ ಒ ಕಾರ್ಯನಿರ್ವಹಿಸುತ್ತಿದೆ. ಈ ಮಧ್ಯೆ ಜಗತ್ತಿನಾದ್ಯಂತ ದಿನನಿತ್ಯ
ಸೋಂಕು ಪ್ರಕರಣಗಳು ದಾಖಲೆ ಮಟ್ಟದಲ್ಲಿ ಹೆಚ್ಚಾಗುತ್ತಿದ್ದು, ವೈರಸ್ ಹರಡುವಿಕೆ ನಿಗ್ರಹ ಪ್ರಮುಖವಾಗಿದೆ ಎಂದು ಡಬ್ಲುಎಚ್ ಒ
ತುರ್ತು ಕಾರ್ಯಕ್ರಮಗಳ ಮುಖ್ಯಸ್ಥ ಮೈಕ್ ರಯಾನ್ ತಿಳಿಸಿದ್ದಾರೆ.
ಅನೇಕ ಲಸಿಕಗಳು ಇದೀಗ ಮೂರನೇ ಪ್ರಾಯೋಗಿಕ ಹಂತದಲ್ಲಿದ್ದು, ಯಾವುದು ಕೂಡಾ ವಿಫಲವಾಗಿಲ್ಲ, ಈವರೆಗೂ ಸುರಕ್ಷತೆ ಮತ್ತು
ರೋಗ ನಿರೋಧಕ ಶಕ್ತಿಯನ್ನು ಉತ್ಪಾಧಿಸುವ ಸಾಮರ್ಥ್ಯ ಹೊಂದಿದ್ದು, ಸಂಶೋಧಕರು ಉತ್ತಮ ಪ್ರಗತಿ ಸಾಧಿಸಿದ್ದಾರೆ ಎಂದು ರಯಾನ್ ಹೇಳಿದ್ದಾರೆ.
ವಾಸ್ತವವಾಗಿ ಜನರು ಚಿಕಿತ್ಸೆ ಪಡೆಯಬೇಕಾಗದರೆ ಮುಂದಿನ ವರ್ಷದ ಆರಂಭವದವರೆಗೂ ಕಾಯಲೇಬೇಕಾಗುತ್ತದೆ. ಸಂಭಾವ್ಯ
ಲಸಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲು ಹಾಗೂ ಎಲ್ಲಾ ಕಡೆ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಡಬ್ಲ್ಯೂಎಚ್ ಒ ಕಾರ್ಯನಿರ್ವಹಿಸುತ್ತಿದೆ.ಇದು ಜಾಗತಿಕ ವಸ್ತುವಾಗಿದ್ದು, ನ್ಯಾಯಯುತವಾಗಿ ಹಂಚಿಕೆ ಮಾಡಬೇಕಾದದ್ದು ಅಗತ್ಯವಾಗಿದೆ. ಈ ಲಸಿಕೆಗಳು ಕೇವಲ ಶ್ರೀಮಂತರು ಅಥವಾ ಬಡವರಿಗಲ್ಲಾ, ಪ್ರತಿಯೊಬ್ಬರಿಗೂ ದೊರೆಯುವಂತಾಗಿದೆ ಎಂದು
ರಯಾನ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


