ಚೀನಾದ ಟಿಕ್ ಟಾಕ್ ಗೆ ಪಾಕ್ ಎಚ್ಚರಿಕೆ, ಬಿಗೊ ಲೈವ್ ಆ್ಯಪ್ ನಿಷೇಧ
ಪಾಕಿಸ್ತಾನ ತನ್ನ ಮಿತ್ರ ದೇಶ ಚೀನಾದ ಟಿಕ್ ಟಾಕ್ ಆ್ಯಪ್ ಅನ್ನು ತನ್ನ ದೇಶದಲ್ಲಿ ನಿಷೇಧಿಸುವುದಾಗಿ ಎಚ್ಚರಿಕೆಯನ್ನು ನೀಡಿದೆ. ಅಲ್ಲದೆ ಸಿಂಗಾಪೂರ್ ಮೂಲದ ಬಿಗೊ ಲೈವ್ ಆ್ಯಪ್ ಅನ್ನು ನಿಷೇಧಿಸಿದೆ.

ಇಸ್ಲಾಮಾಬಾದ್: ಪಾಕಿಸ್ತಾನ ತನ್ನ ಮಿತ್ರ ದೇಶ ಚೀನಾದ ಟಿಕ್ ಟಾಕ್ ಆ್ಯಪ್ ಅನ್ನು ತನ್ನ ದೇಶದಲ್ಲಿ ನಿಷೇಧಿಸುವುದಾಗಿ ಎಚ್ಚರಿಕೆಯನ್ನು ನೀಡಿದೆ. ಅಲ್ಲದೆ ಸಿಂಗಾಪೂರ್ ಮೂಲದ ಬಿಗೊ ಲೈವ್ ಆ್ಯಪ್ ಅನ್ನು ನಿಷೇಧಿಸಿದೆ.
ಅಶ್ಲೀಲತೆ ಮತ್ತು ಅನೈತಿಕತೆ ಪ್ರತಿಬಿಂಬಿಸುವ ವಿಡಿಯೋಗಳು ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಟಿಕ್ ಟಾಕ್ ಗೆ ನಿಷೇಧಿಸುವ ಎಚ್ಚರಿಕೆ ನೀಡಿದೆ ಮತ್ತು ಇದೇ ಕಾರಣದಿಂದ ಬಿಗೊ ಆ್ಯಪ್ ಅನ್ನು ನಿಷೇಧಿಸಿದೆ.
ಈ ಎರಡು ಆ್ಯಪ್ ಗಳಲ್ಲಿನ ವಿಷಯವು ಸಾಮಾನ್ಯವಾಗಿ ಸಮಾಜದ ಮೇಲೆ ಮತ್ತು ವಿಶೇಷವಾಗಿ ಯುವಕರ ಮೇಲೆ ಅತ್ಯಂತ ಕೆಟ್ಟ ಪರಿಣಾಮಗಳನ್ನು ಬೀರಬಹುದಾಗಿದೆ ಎಂದು ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಎರಡು ಕಂಪನಿಗಳಿಗೆ ದೂರು ನೀಡಲಾಗಿದೆ. ಆದರೆ ಈ ಕಂಪನಿಗಳ ಪ್ರತಿಕ್ರಿಯೆ ತೃಪ್ತಿಕರವಾಗಿಲ್ಲ ಎಂದು ಪಾಕ್ ದೂರ ಸಂಪರ್ಕ ಪ್ರಾಧಿಕಾರ ಸೋಮವಾರ ಟ್ವೀಟ್ ಮಾಡಿತ್ತು.
ಬೀಜಿಂಗ್ ಟೆಕ್ ದೈತ್ಯ ಬೈಟ್ ಡ್ಯಾನ್ಸ್ ಒಡೆತನದ ಟಿಕ್ ಟಾಕ್ ಮತ್ತು ಸಿಂಗಾಪುರ್ ಕಂಪನಿಯ ಒಡೆತನದ ಲೈವ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಬಿಗೊ ಲೈವ್ ಎರಡೂ ಪಾಕಿಸ್ತಾನದ ಹದಿಹರೆಯದವರು ಮತ್ತು ಯುವಕರಲ್ಲಿ ಅತ್ಯಂತ ಜನಪ್ರಿಯವಾಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


