29 ವರ್ಷಗಳಲ್ಲಿ ಅತ್ಯಂತ ಕೆಳಮಟ್ಟಕ್ಕೆ ಕುಸಿದ ಚೀನಾದ ಆರ್ಥಿಕತೆ
ಕಳೆದ ವರ್ಷ ಚೀನಾದ ಆರ್ಥಿಕತೆ ಶೇ.6. 1 ರಷ್ಟು ಏರಿಕೆಯಾಗಿದ್ದು, ಇದು 29 ವರ್ಷಗಳಲ್ಲಿ ಅತಿ ಕಡಿಮೆ ವಾರ್ಷಿಕ ಬೆಳವಣಿಗೆಯ ದರವಾಗಿದೆ ಎಂದು ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ ಇಂದು ಹೇಳಿದೆ.

ಕಳೆದ ವರ್ಷ ಚೀನಾದ ಆರ್ಥಿಕತೆ ಶೇ.6. 1 ರಷ್ಟು ಏರಿಕೆಯಾಗಿದ್ದು, ಇದು 29 ವರ್ಷಗಳಲ್ಲಿ ಅತಿ ಕಡಿಮೆ ವಾರ್ಷಿಕ ಬೆಳವಣಿಗೆಯ ದರವಾಗಿದೆ ಎಂದು ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ ಇಂದು ಹೇಳಿದೆ.
ದುರ್ಬಲ ದೇಶೀಯ ಬೇಡಿಕೆ ಮತ್ತು ಅಮೆರಿಕಾ ಜೊತೆಗಿನ 18 ತಿಂಗಳ ಕಾಲದ ವ್ಯಾಪಾರ ಯುದ್ಧವು ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕ ದೈತ್ಯಕ್ಕೆ ನಷ್ಟವನ್ನುಂಟುಮಾಡಿದೆ.
ಚೀನಾ ಮತ್ತು ಯುಎಸ್ ಬಹುನಿರೀಕ್ಷಿತ ಮೊದಲ ಹಂತದ ಒಪ್ಪಂದಕ್ಕೆ ಸಹಿ ಹಾಕಿದ ಒಂದು ದಿನದ ನಂತರ ಹೊಸ ದತ್ತಾಂಶವು ಬಂದಿದ್ದು,18 ತಿಂಗಳ ಸುದೀರ್ಘ ವ್ಯಾಪಾರ ಹೋರಾಟದಲ್ಲಿ ವಿಶ್ವದ ಎರಡು ದೊಡ್ಡ ಆರ್ಥಿಕತೆಗಳಿಗೆ ಪರಸ್ಪರ ರಫ್ತು ಮಾಡುವ ಅರ್ಧ ಟ್ರಿಲಿಯನ್ ಡಾಲರ್ ಮೌಲ್ಯದ ಶೇಕಡಾ 25 ರಷ್ಟು ಸುಂಕದ ಹೊಡೆತ ಬಿದ್ದಿದೆ.
ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ ಪ್ರಕಾರ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯು ಕಳೆದ ವರ್ಷ ಶೇಕಡಾ 6.1 ರಷ್ಟು ಏರಿಕೆಯಾಗಿದೆ. ಇದು 1990 ರ ನಂತರದ ಕಳಪೆ ಪ್ರದರ್ಶನವಾಗಿದೆ, ಆದರೆ ಇದು ಮಾನಸಿಕವಾಗಿ ಶೇ. 6ಕ್ಕಿಂತ ಹೆಚ್ಚಿನ ಮಟ್ಟದಲ್ಲಿದೆ. ಸರ್ಕಾರ ನಿಗದಿಪಡಿಸಿದ 6 ರಿಂದ 6.5 ಗುರಿಯೊಳಗೆ ಜಿಡಿಪಿ ಬೆಳವಣಿಗೆ ಉತ್ತಮವಾಗಿದೆ ಎಂದು ಅದು ಹೇಳಿದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


