ಇರಾನ್-ಅಮೆರಿಕ ಸಂಘರ್ಷ: ಇರಾಕ್ ಮೇಲೆ ಮತ್ತೆ ರಾಕೆಟ್ ದಾಳಿ
ಇರಾಕ್ ನಲ್ಲಿರುವ ಅಮೆರಿಕ ಸೇನಾ ಕ್ಯಾಂಪ್ ಗಳ ಮೇಲೆ ಇರಾನ್ ಸೇನೆ ರಾಕೆಟ್ ದಾಳಿ ನಡೆಸಿದ ಕೇವಲ 24 ಗಂಟೆಗಳ ಒಳಗೆ ಮತ್ತೊಂದು ಕ್ಷಿಪಣಿ ದಾಳಿ ವರದಿಯಾಗಿದ್ದು, ರಾಜಧಾನಿ ಬಾಗ್ದಾದ್‌ನ ಸುರಕ್ಷಿತ ಪ್ರದೇಶವಾದ ಹಸಿರು ವಲಯದಲ್ಲಿ ಎರಡು ರಾಕೆಟ್‌ಗಳನ್ನು ಹಾರಿಸಲಾಗಿದೆ.

24 ಗಂಟೆಗಳ ಒಳಗೆ ಬಾಗ್ದಾದ್ ಮೇಲೆ ಹಾರಿದ ಎರಡು ಕ್ಷಿಪಣಿಗಳು
ಬಾಗ್ದಾದ್: ಇರಾಕ್ ನಲ್ಲಿರುವ ಅಮೆರಿಕ ಸೇನಾ ಕ್ಯಾಂಪ್ ಗಳ ಮೇಲೆ ಇರಾನ್ ಸೇನೆ ರಾಕೆಟ್ ದಾಳಿ ನಡೆಸಿದ ಕೇವಲ 24 ಗಂಟೆಗಳ ಒಳಗೆ ಮತ್ತೊಂದು ಕ್ಷಿಪಣಿ ದಾಳಿ ವರದಿಯಾಗಿದ್ದು, ರಾಜಧಾನಿ ಬಾಗ್ದಾದ್‌ನ ಸುರಕ್ಷಿತ ಪ್ರದೇಶವಾದ ಹಸಿರು ವಲಯದಲ್ಲಿ ಎರಡು ರಾಕೆಟ್‌ಗಳನ್ನು ಹಾರಿಸಲಾಗಿದೆ.
ಈ ಪ್ರದೇಶದಲ್ಲಿ ಅಮೆರಿಕ ಸೇರಿದಂತೆ ವಿಶ್ವದ ವಿವಿಧ ದೇಶಗಳ ರಾಯಭಾರ ಕಚೇರಿಗಳಿದ್ದು, ಇದೇ ಪ್ರದೇಶವನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ಮಾಡಲಾಗಿದೆ. ಈ ಪ್ರದೇಶವನ್ನು ಇರಾಕ್‌ನ ಸುರಕ್ಷಿತ ಸ್ಥಳವೆಂದು ಪರಿಗಣಿಸಲಾಗಿದೆ. ವಿಶೇಷವೆಂದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಎಚ್ಚರಿಕೆ ನೀಡಿದ ನಂತರ ಈ ರಾಕೆಟ್ ದಾಳಿ ನಡೆದಿದೆ. ಇನ್ನು ರಾಕೆಟ್ ದಾಳಿಯಲ್ಲಿ ಯಾವುದೇ ರೀತಿಯ ಹಾನಿಯಾಗಿಲ್ಲ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.
ಇದಕ್ಕೂ ಮೊದಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ದಾಳಿಯ ನಂತರ ಬುಧವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದರು. ಅಮೆರಿಕದ ನೆಲೆಯ ಮೇಲೆ ಇರಾನ್ ದಾಳಿ ನಡೆಸಿದ್ದರೂ, ಎಲ್ಲಾ ಸೈನಿಕರು ಸುರಕ್ಷಿತರಾಗಿದ್ದಾರೆ ಮತ್ತು ಯಾವುದೇ ಹಾನಿ ಸಂಭವಿಸಿಲ್ಲ ಎಂದು ಹೇಳಿದ್ದರು. ಜೊತೆಗೆ ನಾನು ಅಮೆರಿಕದ ಅಧ್ಯಕ್ಷರಾಗಿ ಇರುವವರೆಗೂ ಇರಾನ್ ಗೆ ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಅವರು ಪುನರುಚ್ಚರಿಸಿದ್ದರು.
"ಕಳೆದ ರಾತ್ರಿಯ ದಾಳಿಯಲ್ಲಿ ಎಲ್ಲಾ ನಾಗರಿಕರು ಮತ್ತು ಸೈನಿಕರು ಸುರಕ್ಷಿತರಾಗಿದ್ದಾರೆ. ನಮ್ಮ ಮಿಲಿಟರಿ ಪಡೆ ಯಾವುದೇ ಸವಾಲಿಗೂ ಸಿದ್ಧವಾಗಿದೆ. ಇರಾನ್‌ನ ಹಿಮ್ಮೆಟ್ಟುವಿಕೆ ಇಡೀ ಜಗತ್ತಿಗೆ ಉತ್ತಮ ಸಂಕೇತವಾಗಿದೆ" ಎಂದು ಟ್ರಂಪ್ ರಾಷ್ಟ್ರಕ್ಕೆ ನೀಡಿದ ಸಂದೇಶದಲ್ಲಿ ತಿಳಿಸಿದ್ದಾರೆ.
Related Article
ಇಸ್ರೇಲ್ ಮೇಲೆ ದಂಡೆತ್ತಿದರೆ, ಕಂಡುಕೇಳರಿಯದ ಹೊಡೆತ ಬೀಳುತ್ತದೆ: ಇರಾನ್ ಗೆ ನೆತಾನ್ಯಹು ಎಚ್ಚರಿಕೆ
ಕ್ಷಿಪಣಿ ದಾಳಿಯಲ್ಲಿ 80 ಅಮೆರಿಕ ಉಗ್ರರ ಸಾವು, ಟ್ರಂಪ್ ಸರ್ಕಾರಕ್ಕೆ ಕಪಾಳ ಮೋಕ್ಷ; ಇರಾನ್ ಸರ್ವೋಚ್ಛ ನಾಯಕ ಖಮೇನಿ
ವಿಶ್ವದಲ್ಲಿಯೇ ಅತ್ಯಂತ ಶಕ್ತಿಶಾಲಿ, ಶಸ್ತ್ರಸಜ್ಜಿತ ಸೇನಾಪಡೆ ನಮ್ಮದು: ಇರಾನ್'ಗೆ ಟ್ರಂಪ್ ಮತ್ತೊಮ್ಮೆ ಎಚ್ಚರಿಕೆ
ನಾವು ಯುದ್ಧ ಬಯಸುವುದಿಲ್ಲ, ಆದರೆ ನಮ್ಮನ್ನು ರಕ್ಷಿಸಿಕೊಳ್ಳಲು ನೋಡುತ್ತೇವೆ: ಕ್ಷಿಪಣಿ ದಾಳಿ ಬಗ್ಗೆ ಇರಾನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


