Green Zone

ಚಾಮರಾಜನಗರಕ್ಕೆ ಬಂದಿದ್ದ ಮುಂಬೈ ನಿವಾಸಿಗೆ ಕೊರೋನಾ: ಜಿಲ್ಲೆಗೆ ಗ್ರೀನ್'ಝೋನ್ ಪಟ್ಟಿ ಅಬಾಧಿತ
ರಾಜ್ಯದ ಏಕೈಕ ಹಸಿರು ವಲಯವಾಗಿ ಉಳಿದುಕೊಂಡಿದ್ದ ಚಾಮರಾಜನಗರಕ್ಕೆ ಮಹಾರಾಷ್ಟ್ರದ ಮುಂಬೈನಿಂದ ಆಗಮಿಸಿರುವ ವ್ಯಕ್ತಿಯೋರ್ವನಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.

ಚಿಕ್ಕಮಗಳೂರಿನಲ್ಲಿ ಐದು ಕೊರೋನಾ ಪ್ರಕರಣ ಪತ್ತೆ; ಹಸಿರು ವಲಯಕ್ಕೆ ಶಾಕ್!
ರಾಜ್ಯದಲ್ಲಿ ಹಸಿರು ವಲಯವಾಗಿ ಉಳಿದುಕೊಂಡಿದ್ದ ಜಿಲ್ಲೆ ಚಿಕ್ಕಮಗಳೂರಿಗೆ ಕೂಡ ಈಗ ಕೊರೋನಾ ವಕ್ಕರಿಸಿದೆ.

ಗ್ರೀನ್ ಝೋನ್ ಎಂದು ಘೋಷಿಸಲ್ಪಟ್ಟಿದ್ದ ಗೋವಾ ರಾಜ್ಯದಲ್ಲಿ 7 ಹೊಸ ಕೊರೋನಾ ಸೋಂಕು ಪ್ರಕರಣ!
ಗೋವಾ ರಾಜ್ಯದಲ್ಲಿ 7 ಮಂದಿ ಕೊರೋನಾ ಶಂಕಿತರ ರಕ್ತದ ಮಾದರಿಯನ್ನು ಪರೀಕ್ಷಿಸಿದಾಗ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಹೇಳಿದ್ದಾರೆ.

ಗ್ರೀನ್ ಜೋನ್ ಯಾದಗಿರಿಗೂ ಕಾಲಿಟ್ಟ ಡೆಡ್ಲಿ ವೈರಸ್: ಇಬ್ಬರಲ್ಲಿ ಸೋಂಕು ಪತ್ತೆ
ಹಸಿರು ವಲಯದಲ್ಲಿದ್ದ ಯಾದಗಿರಿ ಜಿಲ್ಲೆಗೂ ಡೆಡ್ಲಿ ವೈರಸ್ ಕೊರೋನಾ ಕಾಲಿಟ್ಟಿದ್ದು, ಇಬ್ಬರಿಗೆ ಸೋಂಕು ಪತ್ತೆಯಾಗಿದೆ. ಅಹಮದಾಬಾದ್ ನಿಂದ ಸುರಪುರಕ್ಕೆ ಮೂವರು ಬಂದಿದ್ದರು, ಇದರಲ್ಲಿ ಇಬ್ಬರಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿದೆ.

ಬೆಂಗಳೂರು ಸೇರಿದಂತೆ ದೇಶದ ಎಲ್ಲಾ ಮೆಟ್ರೋ ನಗರಗಳು ರೆಡ್ ಜೋನ್ ಗೆ: ಕೆಂಪು, ಕಿತ್ತಳೆ, ಹಸಿರು ವಲಯಗಳ ಹೊಸ ಪಟ್ಟಿ ಬಿಡುಗಡೆಗೊಳಿಸಿದ ಕೇಂದ್ರ ಸರ್ಕಾರ
ಕೇಂದ್ರ ಆರೋಗ್ಯ ಸಚಿವಾಲಯವು ದೇಶದ ನಾನಾ ಜಿಲ್ಲೆಗಳನ್ನು ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳೆಂದು ವರ್ಗೀಕರಿಸಿ ಹೊಸ ಪಟ್ಟಿಯನ್ನು ಬಿಡುಗಡೆ ಂಆಡಿದೆ ದೆಹಲಿ, ಮುಂಬೈ, ಚೆನ್ನೈ, ಕೋಲ್ಕತಾ ಬೆಂಗಳುರು ಸೇರಿದಂತೆ ಎಲ್ಲಾ ಮೆಟ್ರೋ ನಗರಗಳನ್ನು. ಕೆಂಪು ವಲಯ (ರೆಡ್ ಜೋನ್) ನಲ್ಲಿರಿಸಲು ಆರೋಗ್ಯ ಸಚಿವಾಲಯ ನಿರ್ಧರಿಸಿದೆ

ಕೊವಿಡ್-19: ಉಡುಪಿ ಜಿಲ್ಲೆ ಶೀಘ್ರದಲ್ಲೇ 'ಹಸಿರು ವಲಯ'ವಾಗಿ ಘೋಷಣೆ
ಈ ತಿಂಗಳ 27 ರೊಳಗೆ ಕೊವಿಡ್-19ನ ಹೊಸ ಪ್ರಕರಣಗಳು ವರದಿಯಾಗದಿದ್ದರೆ ಉಡುಪಿ ಜಿಲ್ಲೆಯನ್ನು ‘ಹಸಿರು ವಲಯ’ವಾಗಿ ಘೋಷಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಗದೀಶ್ ಅವರನ್ನು ಉಲ್ಲೇಖಿಸಿ ಪ್ರಕಟಣೆ ತಿಳಿಸಿದೆ.

ಕೊರೋನಾ ಭೀತಿ: ಗ್ರೀನ್ ಝೋನ್ ನಲ್ಲಿರುವ ಜನರನ್ನೂ ಪರೀಕ್ಷೆಗೊಳಪಡಿಸಲು ನಿರ್ಧಾರ
ರಾಜ್ಯದಲ್ಲಿರುವ ರೆಡ್ ಝೋನ್ ಹಾಗೂ ಆರೆಂಜ್ ಝೋನ್ ಗಳಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಗಳು ಏರುತ್ತಲೇ ಇರುವ ಹಿನ್ನೆಲೆಯಲ್ಲಿ, ಇದೀಗ ಗ್ರೀನ್ ಝೋನ್ ನಲ್ಲಿರುವ ಜನರನ್ನೂ ಕೂಡ ವೈದ್ಯಕೀಯ ಪರೀಕ್ಷೆಗೊಳಪಡಿಸಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಏ.20ರ ನಂತರ ರಾಜ್ಯದ ಹಸಿರು ವಲಯಗಳಲ್ಲಿ ಹೋಂ ಸ್ಟೇ, ಹೊಟೇಲ್ ಗಳು ಕಾರ್ಯಾರಂಭ
ಏಪ್ರಿಲ್ 20ರ ನಂತರ ರಾಜ್ಯದಲ್ಲಿ ಯಾವುದೆಲ್ಲಾ ತೆರೆದಿರುತ್ತದೆ, ಯಾವುದೆಲ್ಲಾ ಮುಚ್ಚಲ್ಪಟ್ಟಿರುತ್ತವೆ ಎಂದು ಸರ್ಕಾರ ಪಟ್ಟಿ ತಯಾರಿಸುತ್ತಿರುವ ಮಧ್ಯೆ ಪ್ರವಾಸೋದ್ಯಮ ಇಲಾಖೆ ಹೋಮ್ ಸ್ಟೇ ಮತ್ತು ಹೊಟೇಲ್ ಗಳನ್ನು ತೆರೆದು ಕಾರ್ಯಾರಂಭ ಮಾಡಲು ನಿರ್ಧರಿಸಿದೆ.

ಇರಾನ್-ಅಮೆರಿಕ ಸಂಘರ್ಷ: ಇರಾಕ್ ಮೇಲೆ ಮತ್ತೆ ರಾಕೆಟ್ ದಾಳಿ
ಇರಾಕ್ ನಲ್ಲಿರುವ ಅಮೆರಿಕ ಸೇನಾ ಕ್ಯಾಂಪ್ ಗಳ ಮೇಲೆ ಇರಾನ್ ಸೇನೆ ರಾಕೆಟ್ ದಾಳಿ ನಡೆಸಿದ ಕೇವಲ 24 ಗಂಟೆಗಳ ಒಳಗೆ ಮತ್ತೊಂದು ಕ್ಷಿಪಣಿ ದಾಳಿ ವರದಿಯಾಗಿದ್ದು, ರಾಜಧಾನಿ ಬಾಗ್ದಾದ್‌ನ ಸುರಕ್ಷಿತ ಪ್ರದೇಶವಾದ ಹಸಿರು ವಲಯದಲ್ಲಿ ಎರಡು ರಾಕೆಟ್‌ಗಳನ್ನು ಹಾರಿಸಲಾಗಿದೆ.

