ಬಾಗ್ದಾದ್ ನ ಗ್ರೀನ್ ಜೋನ್, ಇರಾಕ್ ವಾಯುನೆಲೆಯ ಅಮೆರಿಕ ಸೇನೆ ಮೇಲೆ ಕ್ಷಿಪಣಿ ದಾಳಿ
ಇರಾನ್ ಭದ್ರತಾ ಪಡೆಯ ಮುಖ್ಯಸ್ಥ ಖಾಸಿಮ್ ಸುಲೈಮನಿ ಅಮೆರಿಕ ವಾಯುದಾಳಿ ನಡೆಸಿ ಹತ್ಯೆ ಮಾಡಿದ ಬೆನ್ನಲ್ಲೇ ಶನಿವಾರ ಬಾಗ್ದಾದ್ ನ ಹಸಿರುವ ವಲಯ ಮತ್ತು ಇರಾಕ್ ವಾಯುನೆಲೆಯ ಅಮೆರಿಕ ಸೇನೆ ಮೇಲೆ ಕ್ಷಿಪಣಿ ದಾಳಿ ನಡೆದಿದೆ...

ಬಾಗ್ದಾದ್: ಇರಾನ್ ಭದ್ರತಾ ಪಡೆಯ ಮುಖ್ಯಸ್ಥ ಖಾಸಿಮ್ ಸುಲೈಮನಿ ಅಮೆರಿಕ ವಾಯುದಾಳಿ ನಡೆಸಿ ಹತ್ಯೆ ಮಾಡಿದ ಬೆನ್ನಲ್ಲೇ ಶನಿವಾರ ಬಾಗ್ದಾದ್ ನ ಹಸಿರುವ ವಲಯ ಮತ್ತು ಇರಾಕ್ ವಾಯುನೆಲೆಯ ಅಮೆರಿಕ ಸೇನೆ ಮೇಲೆ ಕ್ಷಿಪಣಿ ದಾಳಿ ನಡೆದಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಇಂದು ಸಂಜೆ ಬಾಗ್ದಾದ್ ನಲ್ಲಿ ಅಮೆರಿಕ ರಾಯಭಾರ ಕಚೇರಿ ಇರುವ ಭಾರೀ ಭದ್ರತೆಯ ಗ್ರೀನ್ ಜೋನ್(ಹಸಿರು ವಲಯ) ಮೇಲೆ ಎರಡು ಸುತ್ತಿನ ಕ್ಷಿಪಣಿ ದಾಳಿ ನಡೆದದೆ. ಒಂದು ಕ್ಷಿಪಣಿ ವಲಯದೊಳಗೆ ಹೊಡೆದರೆ, ಇನ್ನೊಂದು ಎನ್ಕ್ಲೇವ್ ಹತ್ತಿರ ಇಳಿಯಿತು ಎಂದು ಇರಾಕಿ ಸೇನೆ ತಿಳಿಸಿದೆ.
ಇನ್ನು ಉತ್ತರ ಬಾಗ್ದಾದ್ ನ ಬಲದ್ ವಾಯುನೆಲೆಯ ಅಮೆರಿಕ ಪಡೆಗಳ ಮೇಲೆ ಕತ್ಯೂಷ್ ರಾಕೇಟ್ ದಾಳಿ ನಡೆಸಲಾಗಿದೆ ಎಂದು ಇರಾಕಿ ಸೇನಾ ಮೂಲಗಳು ತಿಳಿಸಿವೆ.
ಇಂದು ಬೆಳಗ್ಗೆಯಷ್ಟೇ ಇರಾಕ್‌ನ ಹಶೆದ್ ಅಲ್ ಶಾಬಿ ಅರೆಸೇನಾಪಡೆಯ ವಾಹನಗಳ ಮೇಲೆ ಅಮೆರಿಕ ವಾಯುದಾಳಿ ನಡೆಸಿದೆ ಎಂದು ಸರ್ಕಾರಿ ವಾಹಿನಿ ವರದಿ ಮಾಡಿದೆ. ಇರಾನ್‌ನ ಉನ್ನತ ಸೇನಾಧಿಕಾರಿಯನ್ನು ಕೊಂದ ಒಂದು ದಿನದ ನಂತರ ಅಮೆರಿಕ ಮತ್ತೆ ಇರಾಕ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಗೆ ಮುಂದಾಗಿದೆ.
ಬಾಗ್ದಾದ್‌ನ ಉತ್ತರ ಭಾಗದಲ್ಲಿ ನಡೆದ ದಾಳಿಗೆ ಹಶೆದ್ ಅಲ್ ಶಾಬಿ ಅರೆಸೇನಾಪಡೆಯ ವಾಹನಗಳನ್ನು ಗುರಿಯಾಗಿಸಿಕೊಳ್ಳಲಾಗಿತ್ತು. ಆದರೆ ಯಾರನ್ನು ಕೊಲ್ಲುವ ಉದ್ದೇಶದಿಂದ ಈ ದಾಳಿ ನಡೆದಿದೆ ಎನ್ನುವುದು ಇನ್ನೂ ದೃಢಪಟ್ಟಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


