ಮಾರಕ ಕೊರೊನಾವೈರಸ್ ನಿಂದ ಚೀನಾದಲ್ಲಿ 2,000 ಸಮೀಪಿಸುತ್ತಿರುವ ಸಾವಿನ ಸಂಖ್ಯೆ
ಚೀನಾದಲ್ಲಿ ಮಾರಕ ಕರೋನವೈರಸ್ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ ಮಂಗಳವಾರ 1,868 ಕ್ಕೆ ತಲುಪಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.

ಬೀಜಿಂಗ್: ಚೀನಾದಲ್ಲಿ ಮಾರಕ ಕರೋನವೈರಸ್ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ ಮಂಗಳವಾರ 1,868 ಕ್ಕೆ ತಲುಪಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.
ನಿನ್ನೆ ಹೊಸದಾಗಿ 98 ಹೊಸ ಸಾವುಗಳು ವರದಿಯಾಗಿದ್ದರೆ, 1,886 ಹೊಸ ಪ್ರಕರಣಗಳನ್ನು ವರದಿಯಾಗಿವೆ. ಈ ಪೈಕಿ 93 ಸಾವು ಮತ್ತು 1,807 ಸೋಂಕು ಪ್ರಕರಣಗಳು ವೈರಸ್ ನ ಕೇಂದ್ರ ಬಿಂದುವಾಗಿರುವ ಹುಬೈ ಪ್ರಾಂತ್ಯದಿಂದ ವರದಿಯಾಗಿವೆ.
ಕೊರೊನವೈರಸ್‌ನಿಂದ ಚೀನಾ ದೇಶಾದ್ಯಂತ ಸುಮಾರು 72,436 ಜನರು ಸೋಂಕಿಗೆ ಒಳಗಾಗಿದ್ದಾರೆ. ಮಂಗಳವಾರ 1,886 ಹೊಸ ಪ್ರಕರಣಗಳು ವರದಿಯಾಗಿವೆ. ಸೋಮವಾರದ ಸಂಖ್ಯೆಗೆ ಹೋಲಿಸಿದರೆ ಈ ಪ್ರಮಾಣ ಕಡಿಮೆಯೆನಿಸಿದೆ.
ಈ ವೈರಸ್ ಪ್ರಕರಣ ಮೊದಲ ಬಾರಿಗೆ ಕಳೆದ ಡಿಸೆಂಬರ್‌ನಲ್ಲಿ ಹುಬೈ ಪ್ರಾಂತ್ಯದ ಹುವಾನ್ ನಲ್ಲಿ ವರದಿಯಾಗಿತ್ತು. ಸೋಂಕು ಉಲ್ಬಣದಿಂದ ಬೇರೆಡೆ ಸಂಚರಿಸದೆ ಇರುವುದರಿಂದ ಅನೇಕ ವಿಮಾನಯಾನ ಸಂಸ್ಥೆಗಳು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿವೆ. ವಾಣಿಜ್ಯ, ವ್ಯಾಪಾರ ವಹಿವಾಟು ಮತ್ತು ಪ್ರವಾಸೋದ್ಯಮದ ಮೇಲೆ ಮಾರಕ ಸೋಂಕು ಭಾರಿ ಪರಿಣಾಮ ಬೀರಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


