ಕರೋನಾ ವೈರಸ್: ಸಾವಿನ ಸಂಖ್ಯೆ 304ಕ್ಕೆ ಏರಿಕೆ, 14000 ಸಾವಿರಕ್ಕೇರಿದ ಸೋಂಕಿತರ ಸಂಖ್ಯೆ
ಚೀನಾದಲ್ಲಿ ಕರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಈ ವರೆಗೂ ಮಾರಣಾಂತಿಕ ವೈರಸ್ ದಾಳಿಗೆ ಸಿಲುಕಿ ಸಾವನ್ನಪ್ಪಿದವರ ಸಂಖ್ಯೆ 304ಕ್ಕೆ ಏರಿಕೆಯಾಗಿದೆ.

ಬೀಜಿಂಗ್: ಚೀನಾದಲ್ಲಿ ಕರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಈ ವರೆಗೂ ಮಾರಣಾಂತಿಕ ವೈರಸ್ ದಾಳಿಗೆ ಸಿಲುಕಿ ಸಾವನ್ನಪ್ಪಿದವರ ಸಂಖ್ಯೆ 304ಕ್ಕೆ ಏರಿಕೆಯಾಗಿದೆ.
ಈ ಕುರಿತಂತೆ ಚೀನಾ ಸರ್ಕಾರ ಮಾಹಿತಿ ನೀಡಿದ್ದು, ಶನಿವಾರ ಒಂದೇ ದಿನದಲ್ಲಿ ಕರೋನಾ ವೈರಸ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ 45 ಮಂದಿ ಸಾವನ್ನಪ್ಪಿದ್ದಾರೆ. ಆ ಮೂಲಕ ವೈರಸ್ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದವರ ಸಂಖ್ಯೆ 304ಕ್ಕೆ ಏರಿಕೆಯಾಗಿದೆ.
ಅಂತೆಯೇ ಈ ವರೆಗೂ ಈ ಮಾರಣಾಂತಿಕ ಸೋಂಕಿಗೆ ತುತ್ತಾದವರ ಸಂಖ್ಯೆ ಕೂಡ 14000 ಕ್ಕೆ ಏರಿಕೆಯಾಗಿದ್ದು ಸಮರೋಪಾದಿಯಲ್ಲಿ ಮುಂಜಾಗ್ರತಾ ಕ್ರಮ ನಡೆಸಲಾಗುತ್ತಿದೆ. ವೈರಸ್ ಕೊಲ್ಲುವ ನಾಶಕಗಳನ್ನು ಚೀನಾದ ಪ್ರಮುಖ ನಗರಗಳಾದ್ಯಂತ ಸಿಂಪಡಿಸಲಾಗುತ್ತಿದ್ದು, ವೈರಸ್ ಅನ್ನು ಹತೋಟಿಗೆ ತರಲು ವಿಜ್ಞಾನಿಗಳು ಇನ್ನಿಲ್ಲದಂತೆ ಶ್ರಮಿಸುತ್ತಿದ್ದಾರೆ.
Related Article
ಕರೋನಾ ವೈರಸ್: ವುಹಾನ್ ನಿಂದ ಹೊರಟ ಭಾರತೀಯರನ್ನು ಹೊತ್ತ 2ನೇ ವಿಮಾನ
ಕೊರೋನಾ ವೈರಸ್: ತೀವ್ರ ಜ್ವರದಿಂದಾಗಿ ಚೀನಾದಲ್ಲಿ ವಿಶೇಷ ವಿಮಾನ ಹತ್ತದ ಆರು ಭಾರತೀಯರು
ಕರೋನಾ ವೈರಸ್: ವುಹಾನ್ ನಿಂದ ಭಾರತೀಯರ ಸ್ಥಳಾಂತರಕ್ಕೆ ಹೊರಟ ಏರ್ ಇಂಡಿಯಾ ಬಿ 747 ವಿಮಾನ
ಈ ಕೊರೋನಾ ನಿಮಗೆ ಹ್ಯಾಂಗೋವರ್ ತರಬಲ್ಲದು, ಸಾವನ್ನಲ್ಲ!
'ಕೊರೊನಾ' ದಾಳಿ : 'ಜಾಗತಿಕ ತುರ್ತು' ಘೋಷಿಸಿದ ವಿಶ್ವ ಆರೋಗ್ಯ ಸಂಘಟನೆ, ಚೀನಾದಲ್ಲಿ ಮೃತರ ಸಂಖ್ಯೆ 213ಕ್ಕೆ ಏರಿಕೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


